Advertisement

ಮಾತಿನ ಮತ, ಸಂದರ್ಶನ

12:02 PM Apr 11, 2018 | Team Udayavani |

ಜನಪ್ರೀತಿ ನಿರಂತರ

Advertisement

ನೀವು ಈ ಬಾರಿಯೂ ಸ್ಪರ್ಧಾಕಾಂಕ್ಷಿಯೇ ?
ಹೌದು. ಟಿಕೆಟ್‌ ನೀಡಿದರೆ ಖಂಡಿತಾ ಸ್ಪರ್ಧಿಸುವೆ. ಶಾಸಕನಾಗಿ ಉತ್ತಮ ಆಡಳಿತ ನೀಡುವ ಆಶಯ ಹೊಂದಿದ್ದೇನೆ.

ಕಳೆದ ಸಲ ನೀವು 4,560 ಮತಗಳ ಅಂತರದಿಂದ ಪರಾಜಿತರಾಗಿದ್ದೀರಿ; ಈ ಬಾರಿ …?
ಎಷ್ಟು ಮತಗಳ ಅಂತರ ಎಂದು ಹೇಳಲಾರೆ; ಆದರೆ ಖಂಡಿತಾ ಗೆಲ್ಲುವೆ ಎನ್ನುವ ವಿಶ್ವಾಸ ಇದೆ.

ಗೆಲುವಿನ ನಿರೀಕ್ಷೆ ಯಾವ ಆಧಾರದಲ್ಲಿ ?
ಕಳೆದ ಸಲ ಸೋತಾಗ ನನ್ನ ಬಗ್ಗೆ ಬಹಳಷ್ಟು ಸಹಾನುಭೂತಿ ವ್ಯಕ್ತವಾಗಿತ್ತು. ಈಗಲೂ ಇದೆ. ಕ್ಷೇತ್ರದಲ್ಲೇ ಮನೆ ಮಾಡಿದ್ದೇನೆ. ಸೋತರೂ ನಿರಂತರವಾಗಿ ಪಕ್ಷದ ಕಾರ್ಯಕರ್ತರೊಂದಿಗೆ, ಜನರ ಕಷ್ಟ ಸುಖ ಅರಿತು, ಜಾತಿಮತ ಪಕ್ಷ ಭೇದವಿಲ್ಲದೆ ಜನರೊಂದಿಗೆ ಬೆರೆತು ಕೊಂಡು ಓಡಾಡುತ್ತಲೇ ಇದ್ದೇನೆ. ನೀವೇ ಸ್ಪರ್ಧಿಸಿದರೆ ಆದೀತು ಎನ್ನುವುದನ್ನು ಗಮನಿಸಿದ್ದೇನೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷನಾಗಿ ಅತ್ಯಲ್ಪ ಅವಧಿಯಲ್ಲಿ ಜನರು ಗಮನಿಸುವಂಥ ಕೆಲಸಗಳನ್ನು ಮಾಡಿದ್ದೇನೆ. ಇದೇ ರೀತಿ ರಾಜಕೀಯರಂಗದಲ್ಲೂ ಕೆಲಸ ಮಾಡುವ ಹುಮ್ಮಸ್ಸಿನಲ್ಲಿದ್ದೇನೆ. ಪಕ್ಷವೂ ಸಾಕಷ್ಟು ಬೆಳೆದಿದೆ. ಗೆಲುವಿನ ಪಥದಲ್ಲಿದೆ.

‘ಹಿಂದುತ್ವ’ ಅಜೆಂಡಾದಿಂದ ಹಿಂದೂಯೇತರರ ಮತಗಳನ್ನು ಹೇಗೆ ಸೆಳೆಯಬಲ್ಲಿರಿ?
ನೋಡಿ, ಹಿಂದುತ್ವ ಎಂದರೆ ಈ ದೇಶದ ಸಂಸ್ಕೃತಿಯನ್ನು ಗೌರವಿಸಿ, ಅದರೊಂದಿಗೆ ಬದುಕುವುದೇ ಆಗಿದೆ. ಈ ದೇಶವನ್ನು ಪ್ರೀತಿಸುವವರೆಲ್ಲ ಹಿಂದೂಗಳೇ. ಇದನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೋ ಅವರೆಲ್ಲರ ಮತ ನಮಗೆ ಬಿದ್ದೇ ಬೀಳುತ್ತದೆ.

Advertisement

ನೀವು ಗೆದ್ದರೆ ನಿಮ್ಮ ಆದ್ಯತೆಗಳೇನು?
ನನೆಗುದಿಗೆ ಬಿದ್ದಿರುವ ಮೂಡಬಿದಿರೆಯ ಒಳಚರಂಡಿ, ಬೈಪಾಸ್‌ ಯೋಜನೆಗಳಿಗೆ ಚುರುಕು ಮುಟ್ಟಿಸುವುದು, ಕ್ಷೇತ್ರಾದ್ಯಂತ ಕುಡಿಯುವ ನೀರಿಗೆ ಕೊರತೆಯಾಗದಂತೆ ನೋಡಿಕೊಳ್ಳುವುದು, ಆಸ್ಪತ್ರೆಗಳನ್ನು ಇನ್ನಷ್ಟು ಸುಧಾರಿಸಲು ಪ್ರಯತ್ನಿಸುವುದು ಪ್ರಮುಖ ಆದ್ಯತೆಗಳು.

ನಿಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಮನೆಯವರ ಸಹಕಾರ?
ಮನೆಯವರ ಸಹಕಾರ, ಸ್ಪಂದನದಿಂದಾ ಗಿಯೇ ನಾನು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲಿ ಸಕ್ರಿಯನಾಗಿರಲು ಸಾಧ್ಯವಾಗಿದೆ.

„ಧನಂಜಯ ಮೂಡಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next