Advertisement

ಮಾತಿನ ಮತ, ಸಂದರ್ಶನ

12:43 PM Mar 31, 2018 | Team Udayavani |

ಮೊದಲ ಸ್ಪರ್ಧೆಯಲ್ಲೇ 3ನೇ ಸ್ಥಾನ ಗಳಿಸಿದ ತೃಪ್ತಿ ಇದೆ

Advertisement

ಕಳೆದ ವರ್ಷ ಮತದಾರರನ್ನು ಸೆಳೆಯಲು ಯಾಕೆ ವಿಫಲರಾದಿರಿ ?
ಕಳೆದ ಚುನಾವಣೆಯಲ್ಲಿ ಬಿಜೆಪಿಯ ಆಡಳಿತ ವಿರೋಧಿ ನೀತಿ, ಪದೇ ಪದೇ ಮುಖ್ಯಮಂತ್ರಿಗಳ ಬದಲಾವಣೆ ಮೊದಲಾದ ಕಾರಣಗಳಿಗೆ ಬೇಸತ್ತು ಜನರು ಕಾಂಗ್ರೆಸ್‌ನತ್ತ ಒಲವು ತೋರಿಸಿದ್ದರು. ನಮ್ಮ ಪಕ್ಷಕ್ಕೆ ನಿರೀಕ್ಷಿತ ಫ‌ಲಿತಾಂಶ ಸಾಧಿಸಲು ಕಷ್ಟವಾಯಿತು. ಆದರೂ ಮೂರು ಪ್ರಮುಖ ಪಕ್ಷಗಳ ಎದುರಲ್ಲಿ ನಮಗೆ ಮೂರನೇ ಸ್ಥಾನ ಲಭಿಸಿರುವುದು ತೃಪ್ತಿ ತಂದಿದೆ.

ನಿಮ್ಮ ಸ್ಪರ್ಧೆ ಯಾರ ವಿರುದ್ಧ ಆಗಿತ್ತು?
ಎರಡೂ ಪಕ್ಷಗಳ ವಿರುದ್ಧವೂ ನಾವು ಸ್ಪರ್ಧೆ ಮಾಡಿದ್ದೇವೆ. ಕಳೆದ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಮೊದಲ ಬಾರಿಯ ಸ್ಪರ್ಧೆಯಾದರೂ ಉತ್ತಮ ಮತ ಗಳಿಕೆ ಮಾಡಿದ್ದೇವೆ. 2009ರಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ನಮ್ಮ ಪಕ್ಷವು ಜೆಡಿಎಸ್‌ ಅಭ್ಯರ್ಥಿ ಇಬ್ರಾಹಿಂ ಮಾಸ್ಟರ್‌ ಅವರಿಗೆ ಬೆಂಬಲ ನೀಡಿತ್ತು. ಕಳೆದ ಚುನಾವಣೆಯಲ್ಲಿ ಪಕ್ಷವು ತನ್ನದೇ ಚಿಹ್ನೆಯಡಿಯಲ್ಲಿ ಸ್ಪರ್ಧೆ ಮಾಡಿದೆ.

ಈ ಬಾರಿ ಸ್ಪರ್ಧೆ ಮಾಡುವ ಆಲೋಚನೆ ಇದೆಯೇ?
ಈ ಬಾರಿ ಬಂಟ್ವಾಳ ಕ್ಷೇತ್ರದಿಂದ ಎಸ್‌ಡಿಪಿಐಯ ನಿಷ್ಠಾವಂತ ಕಾರ್ಯಕರ್ತ, ಪರಿಶ್ರಮಿ ರಿಯಾಝ್ ಫರಂಗಿಪೇಟೆ ಅವರು ಸ್ಪರ್ಧಿಸಲಿದ್ದಾರೆ. ಹೀಗಾಗಿ ನನ್ನ ಸ್ಪರ್ಧೆಗಿಂತಲೂ ಅವರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರಸ್ತುತ ದಿನಗಳಲ್ಲಿ ರಾಜ್ಯಕ್ಕೆ ಎಸ್‌ಡಿಪಿಐ ಅನಿವಾರ್ಯವಾಗಿದ್ದು, ಈ ಬಾರಿ ಜನತೆ ಎಸ್‌ಡಿಪಿಐಗೆ ಮತ ನೀಡಲಿದ್ದಾರೆ.

ಜನರು ಯಾಕೆ ಎಸ್‌ಡಿಪಿಐಗೆ ಮತ ನೀಡಬೇಕು?
ಕೋಮು ಸೌಹಾರ್ದತೆ, ಸಾಮರಸ್ಯ ಪ್ರಸ್ತುತ ದಿನದ ಅನಿವಾರ್ಯತೆಯಾಗಿದ್ದು, ಈ ಕುರಿತು ಎಸ್‌ಡಿಪಿಐ ಹೋರಾಟ ನಡೆಸಲಿದೆ. ಭಯಮುಕ್ತ ಭಾರತ, ಹಸಿವುಮುಕ್ತ ಭಾರತ ನಿರ್ಮಾಣವೇ ನಮ್ಮ ಮೂಲ ಉದ್ದೇಶವಾಗಿದೆ. ರಾಜ್ಯದಲ್ಲಿ ರೈತರು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಕರಿಗೆ ಉದ್ಯೋಗ ಸಮಸ್ಯೆ ಕಾಡುತ್ತಿದೆ. ಮಹಿಳೆಯರಿಗೆ ಸುರಕ್ಷೆ ಇಲ್ಲದಾಗಿದೆ.

Advertisement

ಕೇಂದ್ರ ಹಾಗೂ ರಾಜ್ಯ ಸರಕಾರ ಕುರಿತು ನಿಮ್ಮ ಅಭಿಪ್ರಾಯ?
ಎಪ್ಪತ್ತು ವರ್ಷ ದೇಶವನ್ನು ಆಳಿದ ಕಾಂಗ್ರೆಸ್ಸಾಗಲೀ ಬಳಿಕ ಬಂದ ಬಿಜೆಪಿ – ಜೆಡಿಎಸ್‌ಗಳಾಗಲೀ ಜನರ ಸಮಸ್ಯೆಯ ಬಗ್ಗೆ ಮಾತನಾಡುತ್ತಿಲ್ಲ. ಮುಖ್ಯಮಂತ್ರಿ ಅವರು ಅಹಿಂದ ಜಪ ಮಾಡುತ್ತಿದ್ದರೂ ಅವರಿಗಾಗಿ ಏನೂ ಮಾಡಿಲ್ಲ. ಬಿಜೆಪಿಯವರು ತಮ್ಮವರು ಎಂದು ಯಾರನ್ನು ಕರೆಯುತ್ತಾರೋ ಅವರ ಸ್ಥಿತಿಯೂ ಶೋಚನೀಯವಾಗಿದೆ.

„ ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next