Advertisement

ಭಾರತದ ಭೂಪ್ರದೇಶಗಳಿಗೆ ನೇಪಾಲ ಕ್ಯಾತೆ

08:54 AM Jun 12, 2020 | mahesh |

ಕಾಠ್ಮಂಡು: ಭಾರತವು ಕಾಳಿ ನದಿಯ ಗಡಿಯನ್ನು ಕೃತಕವಾಗಿ ಸೇರಿಸಿಕೊಂಡಿದೆ ಎಂದು ಆರೋಪಿಸಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ಭಾರತ ಅತಿಕ್ರಮಿಸಿಕೊಂಡಿರುವ ಕಾಲಾಪಾನಿ, ಲಿಪುಲೇಕ್‌ ಮತ್ತು ಲಿಂಪಿಯಾ ಧುರಾಗಳನ್ನು ನೇಪಾಳ ಪುನಃ ಪಡೆದುಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ಸಂಸತ್‌ನಲ್ಲಿ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಒಲಿ, “ಭಾರತವು ಹಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಕಾಳಿ ನದಿಯ ಗಡಿಯನ್ನೂ ತನ್ನದೇ ಎಂದು ಹೇಳಿಕೊಂಡು, ಸೇನೆ ನಿಯೋಜಿಸಿದೆ. ಗಡಿಯುದ್ದಕ್ಕೂ ಅಣೆಕಟ್ಟುಗಳನ್ನು ನಿರ್ಮಿಸಿ, ನೇಪಾಳದ ಅನೇಕ ಭೂಭಾಗಗಳನ್ನು ಮುಳುಗಡೆ ಮಾಡಿದೆ. ಈ ಬಗ್ಗೆ ಭಾರತಕ್ಕೆ ಸಾಕಷ್ಟು ಬಾರಿ ಎಚ್ಚರಿಸಿದ್ದೇವೆ.  ನೆರೆರಾಷ್ಟ್ರದ ಇಂಥ ವರ್ತನೆಗಳನ್ನು ಸಹಿಸಿಕೊಳ್ಳಲಾಗು ವುದಿಲ್ಲ’ ಎಂದು ಹೇಳಿದ್ದಾರೆ.

Advertisement

ಯೋಗಿಗೆ ಪ್ರತ್ಯುತ್ತರ: “ಟಿಬೆಟ್‌ ಮಾಡಿದ ತಪ್ಪನ್ನು ನೇಪಾಳ ಪುನರಾವರ್ತಿಸಬಾರದು. ಟಿಬೆಟ್‌ಗೆ ಈಗ ಏನಾಗಿದೆ ಎಂಬುದನ್ನು ನೋಡಿಕೊಳ್ಳಿ’ ಎಂದು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದರು. ಇದಕ್ಕೆ ಪ್ರತ್ಯುತ್ತರಿಸಿದ ಒಲಿ, “ನಿಮ್ಮ ಮಾತುಗಳು ನ್ಯಾಯ ಸಮ್ಮತವಲ್ಲ. ಕೇಂದ್ರ ಸರಕಾರದಲ್ಲಿನ ಜವಾಬ್ದಾರಿಯುತ ಸ್ಥಾನದಲ್ಲೂ ನೀವಿಲ್ಲ. ಕೇವಲ ಸಿಎಂ ಆಗಿದ್ದುಕೊಂಡು ನೇಪಾಳಕ್ಕೆ ಬೆದರಿಕೆ ಹಾಕಲು ಬರಬಾರದು’ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next