ಮೈಸೂರು: ಪ್ರಸ್ತುತ ಸಂದರ್ಭದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ ಕುರಿತು ಯುವಜನತೆ ಸಾಕಷ್ಟು ಎಚ್ಚರವಹಿಸಬೇಕಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಬಿ.ನಾಗರಾಜು ಹೇಳಿದರು.
ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸೈಬರ್ ಸೆಕ್ಯೂರಿಟಿ, ಸಮಸ್ಯೆಗಳು ಮತ್ತು ಸವಾಲುಗಳು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಹುತೇಕ ಯುವಜನರು ಪ್ರತಿನಿತ್ಯವೂ ಅಂತಜಾìಲದ ಬಳಕೆಯಲ್ಲಿ ತೊಡಗಿರುತ್ತಾರೆ.
ಅಂತಜಾìಲದ ಬಳಕೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಕಿಂಚಿತ್ತೂ ಆಲೋಚಿಸದ ಯುವಜನತೆ, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೇ ದಿನದ ಬಹುಪಾಲು ಸಮಯವನ್ನು ಕಳೆಯುತ್ತಾರೆ. ಆದರೆ ಹೀಗೆ ನಿರಂತರವಾಗಿ ಅಂತಜಾìಲವನ್ನು ಅವಲಂಬಿಸುವುದು ಒಳ್ಳೆಯದಾದರೂ, ಇದರ ಬಳಕೆಯ ಬಗ್ಗೆ ಎಚ್ಚರಿಕೆವಹಿಸಬೇಕಿದ್ದು, ಇತ್ತೀಚೆಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಸೈಬರ್ ಕ್ರೈಂಗಳನ್ನು ನಡೆಸಿದವರು ಯಾವುದೇ ಕಾರಣಕ್ಕೂ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಅಂತಜಾìಲದ ಬಳಕೆಯಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕಿದ್ದು, ಫೋನ್‌ಗಳ ಪಿನ್ ನಂಬರ್, ಇ-ಮೇಲ್ ಪಾಸ್‌ನಂಬರ್‌ಗಳನ್ನು ತಮ್ಮ ಆತ್ಮೀಯರಿಗೂ ನೀಡದಿರುವುದು ಸೂಕ್ತ. ಆ ಮೂಲಕ ತಮ್ಮ ಎಚ್ಚರಿಕೆ ಹಾಗೂ ಸುರಕ್ಷತೆಯಲ್ಲಿ ಇದ್ದರೆ ಯಾವುದೇ ತೊಂದರೆ ಎದುರಾಗುವುದಿಲ್ಲ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊ. ಪಿ.ಎನ್.ನಾಗಭೂಷಣ್, ಐಇಟಿ ಸಂಸ್ಥೆ ಅಧ್ಯಕ್ಷ ಎಚ್.ಎನ್.ನಾಗರಾಜ್, ಮ್ಯಾನೇಜಿಂಗ್ ಟ್ರಸ್ಟಿ ಎಂ.ಪುಟ್ಟಸ್ವಾಮಿ, ಪ್ರಾಂಶುಪಾಲ ಡಾ.ಎಂ.ಎನ್.ಮನೋಹರನ್, ಕಾರ್ಯದರ್ಶಿ ಡಾ.ಎಂ.ಮಹದೇವಯ್ಯ, ಸಂಯೋಜಕ ಪ್ರೊ.ಎನ್.ಎಸ್. ವೇಣುಗೋಪಾಲ್ ಇತರು ಹಾಜರಿದ್ದರು.