ಮುಂಬೈ : “ಪ್ಯಾರ್ ಕಾ ನಗ್ಮಾ ಹೈ…’ ಹಾಡಿನ ವಿಡಿಯೋದಿಂದ 2019ರಲ್ಲಿ ಏಕಾಏಕಿ ಜನಪ್ರಿಯರಾದವರು ರೋನು ಮಂಡಲ್. ಪಶ್ಚಿಮ ಬಂಗಾಳದ ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ಅವರ ವಿಡಿಯೋ ವೈರಲ್ ಆಗಿತ್ತು. ಇದೀಗ ಮತ್ತೆ ಸುದ್ದಿಯಾಗಿದ್ದಾರೆ.
ಶ್ರೀಲಂಕಾದ ಹಿನ್ನೆಲೆ ಗಾಯಕ ಮತ್ತು ಗೀತರಚನೆಕಾರ್ತಿ ಅವರು ರಚಿಸಿದ “ಮನಿಕೆ ಮಗೆ ಹಿತೆ’ ಎಂಬ ಹಾಡಿಗೆ ದನಿಗೂಡಿಸಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅದುವೇ ಈಗ ಟಾಪ್ ಟ್ರೆಂಡಿಂಗ್ ಆಗಿದೆ. ಅವರು ಮೂಲತಃ ಪಶ್ಚಿಮ ಬಂಗಾಳದ ನದಿ️ಯಾ ಜಿಲ್ಲೆಯವರು.
ಮೂರು ವರ್ಷಗಳ ಹಿಂದೆ ಜನಪ್ರಿಯರಾದಾಗ ಬಾಲಿವುಡ್ ಗಾಯಕ-ಸಂಗೀತಕಾರ ಹಿಮೇಶ್ ರೇಶಮಿಯಾ ರೋನು ಅವರಿಗೆ ಮೊದಲ ಅವಕಾಶ ನೀಡಿದ್ದರು.
ಇದನ್ನೂ ಓದಿ :ಅಕ್ರಮವಾಗಿ ರಾತ್ರಿ ವೇಳೆ ವಲಸಿಗರ ಆಗಮನ: ಬಾಂಗ್ಲಾದಿಂದ ಬಂದವರೆಂಬ ಆರೋಪ