Advertisement

2022ರ ಜೂ. 15ರಂದು “ಇಂಟರ್ನೆಟ್‌ ಎಕ್ಸ್‌ಪ್ಲೋರರ್‌’ವೆಬ್‌ ಬ್ರೌಸರ್‌ ನಿವೃತ್ತಿ

07:54 PM May 21, 2021 | Team Udayavani |

ವಾಷಿಂಗ್ಟನ್‌:  70ರ ದಶಕದ ಅಂತ್ಯದಲ್ಲಿ ಅಥವಾ 80ರ ದಶಕದ ಮೊದಲಾರ್ಧದಲ್ಲಿ ಹುಟ್ಟಿದವರಿಗೆ, “ಅಂತರ್ಜಾಲ’ ಎಂಬ ಊಹಾತೀತ ಪ್ರಪಂಚವನ್ನು ಪರಿಚಯ ಮಾಡಿಕೊಟ್ಟ “ಇಂಟರ್ನೆಟ್‌ ಎಕ್ಸ್‌ಪ್ಲೋರರ್‌’ ವೆಬ್‌ ಬ್ರೌಸರ್‌, ಮುಂದಿನ ವರ್ಷ ಜೂ. 15ಕ್ಕೆ ಸೇವೆಯಿಂದ ನಿವೃತ್ತಿ ಹೊಂದಲಿದೆ!

Advertisement

ಡೆಸ್ಕ್ ಟಾಪ್‌ ಕಂಪ್ಯೂಟರ್‌ಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದ್ದ ಇದು, ಈಗಿರುವ ವೆಬ್‌ ಬ್ರೌಸರ್‌ಗಳಲ್ಲೇ ಅತಿ ಹಿರಿಯ ಬ್ರೌಸರ್‌ ಎಂದು ಪರಿಗಣಿಸಲ್ಪಟ್ಟಿದೆ. ವಿಂಡೋಸ್‌ ಆಪರೇಟಿಂಗ್‌ ಸಿಸ್ಟಂನಂತೆಯೇ ಇದು ಕೂಡ ಮೈಕ್ರೋಸಾಫ್ಟ್ ಸಂಸ್ಥೆಯ ಹೆಮ್ಮೆಯ ಕೊಡುಗೆ.

1995ರಲ್ಲಿ ವಿಂಡೋಸ್‌ 95 ಬಿಡುಗಡೆಯಾದಾಗಲೇ ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ನ ಮೊದಲ ಆವೃತ್ತಿ ಕೂಡ ಬಿಡುಗಡೆಯಾಗಿತ್ತು. ಕಾಲಾನುಕ್ರಮದಲ್ಲಿ ಅಗತ್ಯಕ್ಕೆ ತಕ್ಕಂತೆ ಇಂಟರ್ನೆಂಟ್‌ ಎಕ್ಸ್‌ಪ್ಲೋರರ್‌ 2, ಇಂಟರ್ನೆಟ್‌ ಎಕ್ಸ್‌ಪ್ಲೋರರ್‌ 3… ಹೀಗೆ ಹಲವಾರು ಆವೃತ್ತಿಗಳಲ್ಲಿ ಬಂದ ಈ ಬ್ರೌಸರ್‌ನ 11ನೇ ಆವೃತ್ತಿಯನ್ನು, ವಿಂಡೋಸ್‌ 8.1 ಒ.ಎಸ್‌.ಗೆ ಅನುಗುಣವಾಗಿ 2013ರಲ್ಲಿ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ :ರಾಜ್ಯದಲ್ಲಿ ಜೂ.7ರವರೆಗೆ ಮತ್ತೆ 14 ದಿನ ಲಾಕ್ ಡೌನ್ ವಿಸ್ತರಣೆಗೆ ಸರಕಾರ ನಿರ್ಧಾರ

Advertisement

Udayavani is now on Telegram. Click here to join our channel and stay updated with the latest news.

Next