Advertisement
ನಾವು ನಮ್ಮ ಜೀವನದಲ್ಲಿ ಅನೇಕ ವಿಷಯಗಳನ್ನು ಅನುಸರಿಸುತ್ತಿರುತ್ತೇವೆ ಮತ್ತು ನಾವು ಸಾಧನೆಗಳು ಎಂಬ ಹೆಸರಿನಲ್ಲಿ ಏನೇನನ್ನೋ ಮಾಡುತ್ತಿರುತ್ತೇವೆ. ಆದರೆ ಮನಸ್ಸಿನ ಚಂಚಲತೆಗಳನ್ನು ಮೀರಿ ಹೋಗುವುದು ಅತ್ಯಂತ ಮೂಲಭೂತ ಮತ್ತು ಒಬ್ಬರು ಸಾಧಿಸಬಹುದಾದ ಅತ್ಯುನ್ನತ ಸಾಧನೆಯಾಗಿದೆ. ಏಕೆಂದರೆ ಇದು ಮನುಷ್ಯನನ್ನು ಅವನು ಹುಡುಕುತ್ತಿರುವ ಆಂತರಿಕ ಮತ್ತು ಬಾಹ್ಯ ಸಂಗತಿಗಳಿಂದ ಬಿಡುಗಡೆ ಮಾಡುತ್ತದೆ. ಅವನು ತನ್ನ ಮನಸ್ಸನ್ನು ಶಾಂತಗೊಳಿಸಿದರೆ ಸಾಧಕನಾಗುತ್ತಾನೆ.
Related Articles
Advertisement
ಈ ಕಾರಣಕ್ಕಾಗಿಯೇ, ಚಿತ್ತವೃತ್ತಿ ನಿರೋಧ ಎಂಬ ವಿವರಣೆಯನ್ನು ಪತಂಜಲಿ ಮಹರ್ಷಿಗಳು ಆರಿಸಿಕೊಂಡರು – ಇದು ನಿಮ್ಮನ್ನು ಮುಕ್ತಿ ಅಥವಾ ಸಾಕ್ಷಾತ್ಕಾರದ ಕಡೆಗೆ ಕರೆದೊಯ್ಯುವ ದಾರಿಯಾಗಿದೆ. ಯೋಗದ ಸಂಪೂರ್ಣ ವಿಜ್ಞಾನವನ್ನು ವಿವಿಧ ರೀತಿಯ ಸೂತ್ರಗಳ ರೂಪದಲ್ಲಿ ವಿಸ್ತರಿಸಲಾಗಿದೆ. ಸುಮಾರು ಇನ್ನೂರು ಸೂತ್ರಗಳು ಯೋಗ ಜ್ಞಾನದ ಸಂಪೂರ್ಣ ಅರಿವನ್ನು ಮೂಡಿಸುತ್ತವೆ. ಪತಂಜಲಿ ಮಹರ್ಷಿ ಯೋಗವನ್ನು ಕಂಡುಹಿಡಿಯಲಿಲ್ಲ; ಅವರು ಅದನ್ನು ಒಂದು ವ್ಯವಸ್ಥೆಯಲ್ಲಿ ಸಮೀಕರಿಸಿದ್ದಾರೆ. ಅದಕ್ಕಾಗಿಯೇ ಅವರನ್ನು “ಆಧುನಿಕ ಯೋಗದ ಪಿತಾಮಹ” ಎಂದು ಕರೆಯಲಾಗುತ್ತದೆ. ಯೋಗವು ಮೊದಲು ವಿವಿಧ ರೂಪಗಳಲ್ಲಿತ್ತು, ಅವರು ಅದನ್ನು ಸೂತ್ರಗಳಾಗಿ ವಿಂಗಡಿಸಿದರು.
ಒಬ್ಬ ಮನುಷ್ಯನಿಗೆ ಜೀವನದ ಬಗ್ಗೆ ಇಷ್ಟು ತಿಳಿವಳಿಕೆ ಇರಬಹುದೆಂದು ನಂಬುವುದು ಕಷ್ಟ. ಹೀಗಾಗಿಯೇ ಅವರ ತಿಳುವಳಿಕೆಯ ವಿಶಾಲತೆಯ ಬಗ್ಗೆ ಸರಳವಾಗಿ ನಂಬಲಾಗದು. ಇಂದಿನ ವಿದ್ವಾಂಸರು ಇದು ಪತಂಜಲಿಯಂಥ ಒಬ್ಬ ವ್ಯಕ್ತಿಯ ಕೆಲಸವಲ್ಲ, ಇದನ್ನು ಸಾಧ್ಯವಾಗಿಸಲು ಅನೇಕ ಜನರು ಕೆಲಸ ಮಾಡಿರಬೇಕು, ಏಕೆಂದರೆ ಇದು ತುಂಬಾ ವಿಶಾಲವಾಗಿದ್ದು, ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಗೆ ಸರಿಹೊಂದುವುದಿಲ್ಲ ಎಂದು ವಾದಿಸುತ್ತಾರೆ.
ಆದರೆ ಇದು ನಿಜವಾಗಿಯೂ ಒಬ್ಬ ಮನುಷ್ಯನ ಕೆಲಸ. ಪತಂಜಲಿ ಬಹುಶಃ ಈ ಭೂಮಿಯ ಮೇಲಿನ ಮಹಾನ್ ಬುದ್ಧಿಜೀವಿಗಳಲ್ಲಿ ಒಬ್ಬರು.
ಯೋಗ ಸೂತ್ರಗಳು ಬಹುಶಃ ಜೀವನದ ಶ್ರೇಷ್ಠ ದಾಖಲೆಗಳಾ ಗಿವೆ. ಭೂಮಿಯ ಅತ್ಯಂತ ಆಸಕ್ತಿದಾಯಕ ಪುಸ್ತಕವಾಗಿದೆ. ಇವು ಜೀವನವನ್ನು ತೆರೆಯುವ ಸೂತ್ರಗಳಾಗಿರುವುದರಿಂದ ಪತಂಜಲಿ ಮಹರ್ಷಿಗಳು ಉದ್ದೇಶಪೂರ್ವಕವಾಗಿಯೇ ಇದನ್ನು ಬರೆದಿದ್ದಾರೆ. ಆದರೆ ಇವು ಸಾಹಿತ್ಯ ಅಥವಾ ತತ್ವಶಾಸ್ತ್ರವಲ್ಲ. ಪತಂಜಲಿ ಅವರ ಭಾಷೆಯ ಮೇಲಿನ ಪಾಂಡಿತ್ಯವು ಹೇಗಿತ್ತೆಂದರೆ, ಅವರು ಅದನ್ನು ಸೂತ್ರಗಳ ರೂಪದಲ್ಲಿ ಬರೆದಿದ್ದಾರೆ. ಆದ್ದರಿಂದ ಯಾವುದೇ ವಿದ್ವಾಂಸರು ಅದರ ಬಗ್ಗೆ ಆಸಕ್ತಿ ವಹಿಸುವುದಿಲ್ಲ. ವಿಚಿತ್ರವೆಂದರೆ ಇದು ಅತ್ಯಂತ ಆಸಕ್ತಿದಾಯಕವಲ್ಲ, ಆದರೆ ಒಂದು ಸೂತ್ರವು ನಿಮ್ಮೊಳಗೆ ವಾಸ್ತವವಾದರೆ, ಅದು ನಿಮ್ಮನ್ನು ಅನುಭವದ ಸಂಪೂರ್ಣ ಹೊಸ ಆಯಾಮಕ್ಕೆ ಸ್ಫೋಟಿಸುತ್ತದೆ. ನೀವು ಒಂದನ್ನು ಓದಿ ನಿಮ್ಮ ಜೀವನದಲ್ಲಿ ಅದನ್ನು ನಿಜವಾಗಿಸಿದರೆ, ಅಷ್ಟೇ ನೀವು ಎಲ್ಲ ಸೂತ್ರಗಳನ್ನು ಓದಬೇಕಾಗಿಲ್ಲ.
ಪತಂಜಲಿ ಯೋಗ ಸೂತ್ರಗಳನ್ನು ಬಹಳ ವಿಚಿತ್ರ ರೀತಿಯಲ್ಲಿ ಪ್ರಾರಂಭಿಸುತ್ತಾರೆ. ಮೊದಲ ಸೂತ್ರವೆಂದರೆ “… ಮತ್ತು ಈಗ, ಯೋಗ.’ ಆ ಅರ್ಧ ವಾಕ್ಯವು ಒಂದು ಅಧ್ಯಾಯವಾಗಿದೆ. ಈ ಆಯಾಮದ ಪುಸ್ತಕವನ್ನು ಪ್ರಾರಂಭಿಸುವುದು ತುಂಬಾ ವಿಚಿತ್ರ ಮಾರ್ಗವಾಗಿದೆ. ಬೌದ್ಧಿಕವಾಗಿ, ಇದು ಯಾವುದೇ ಅರ್ಥವನ್ನು ಹೊಂದಿಲ್ಲ, ಆದರೆ ಪ್ರಾಯೋಗಿಕವಾಗಿ ಅದು ಏನು ಹೇಳುತ್ತಿದೆ ಎಂದರೆ “ಹೊಸ ಮನೆಯನ್ನು ನಿರ್ಮಿಸುವುದು ಅಥವಾ ಹೊಸ ಹೆಂಡತಿಯನ್ನು ಹುಡುಕುವುದು ಅಥವಾ ನಿಮ್ಮ ಮಗಳನ್ನು ಮದುವೆ ಮಾಡುವುದು ನಿಮ್ಮ ಜೀವನವನ್ನು ಸೆಟಲ್ ಮಾಡುತ್ತದೆ ಎಂದು ನೀವು ಇನ್ನೂ ನಂಬಿದ್ದರೆ, ಯೋಗಕ್ಕೆ ಇನ್ನೂ ಸಮಯ ಬಂದಿಲ್ಲ ಎಂದರ್ಥ.
ಆದರೆ ನೀವು ಹಣ, ಅಧಿಕಾರ, ಸಂಪತ್ತು ಮತ್ತು ಎಲ್ಲ ರೀತಿಯ ಸಂತೋಷವನ್ನು ನೋಡಿದ್ದರೆ, ನಿಮ್ಮ ಜೀವನದಲ್ಲಿ ಎಲ್ಲವನ್ನೂ ಸವಿದಿದ್ದರೆ ಮತ್ತು ನಿಜವಾದ ಅರ್ಥದಲ್ಲಿ ಇನ್ನು ಮಾಡಲು ಏನೂ ಕೆಲಸ ಉಳಿದಿಲ್ಲ ಎಂದು ಅರಿತುಕೊಂಡರೆ ಅದು ಯೋಗದ ಸಮಯ.
ಇಡೀ ಜಗತ್ತು ಒಳಗೊಂಡಿರುವ ಎಲ್ಲ ಅಸಂಬದ್ಧತೆಗಳನ್ನು ಪತಂಜಲಿ ಅರ್ಧ ವಾಕ್ಯದೊಂದಿಗೆ ಬದಿಗಿಡುತ್ತಾರೆ. ಅದಕ್ಕಾ ಗಿಯೇ ಮೊದಲ ಸೂತ್ರವು “… ಮತ್ತು ಈಗ, ಯೋಗ.” ಇದರರ್ಥ, ನಿಮಗೆ ಮಾಡಲು ಏನೂ ಕೆಲಸ ಉಳಿದಿಲ್ಲ, ಮುಂದೇನು ಮಾಡಬೇಕು ಎಂಬುದು ತಿಳಿದಿಲ್ಲ ಎಂಬುದು ಬಾಧಿಸುತ್ತಿದ್ದರೆ ಆಗ ಯೋಗದತ್ತ ಮುಖ ಮಾಡಲು ಒಂದು ದಾರಿ ಸಿಕ್ಕಂತಾಗುತ್ತದೆ.
~ ಸದ್ಗುರು