Advertisement

ಹೆಣ್ಣು ದೇಶದ ಆಸ್ತಿಯಾಗಲಿ: ಬೀಳಗಿ

12:39 PM Oct 30, 2021 | Team Udayavani |

ದಾವಣಗೆರೆ: ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲೂ ಅತ್ಯುತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಜಿ. ಬೀಳಗಿ ಸಂತಸ ವ್ಯಕ್ತಪಡಿಸಿದರು.

Advertisement

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಗುರುಭವನದಲ್ಲಿ ನಡೆದ ಅಂತಾರಾಷ್ಟ್ರಿಯ ಹೆಣ್ಣುಮಕ್ಕಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಕಾಣುವ ಕನಸಿನಲ್ಲಿ ಮನೆ ಹಾಗೂ ದೇಶದ ಹಿತ ಇರುತ್ತದೆ. ಹೆಣ್ಣು ದೇಶದ ಆಸ್ತಿಯಾಗಬೇಕು ಎಂದು ಪ್ರತಿಪಾದಿಸಿದರು.

ಒಬ್ಬ ಹೆಣ್ಣುಮಗಳು ಮನಸ್ಸು ಮಾಡಿದಲ್ಲಿ ಒಂದು ಮನೆಯನ್ನೇ ಬದಲಾಯಿಸುತ್ತಾಳೆ. ದೇಶದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸ್ಥಾನವಿದೆ. ಅವರನ್ನು ದೇವರಿಗೆಹೋಲಿಸುತ್ತೇವೆ. ಪ್ರತಿಯೊಬ್ಬ ನಾಗರಿಕನು ಹೆಣ್ಣಿಗೆ ಗೌರವ ನೀಡಬೇಕು ಮತ್ತು ಕಾಳಜಿ ತೋರಬೇಕು ಎಂದು ತಿಳಿಸಿದರು.

ಇಂದಿನ ವಾತಾವರಣದಲ್ಲಿ ಮಹಿಳೆಯರು ಪುರುಷರಿಗಿಂತ ಯಾವುದೇ ವಿಷಯದಲ್ಲಿ ಕಡಿಮೆಯಿಲ್ಲದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್‌ ನಾಯಕ್‌ಮಾತನಾಡಿ, ಮಹಿಳೆಯರಿಗೆ ಭಾರತ ದೇಶದಲ್ಲಿಮಾತ್ರವಲ್ಲದೇ ವಿಶ್ವದಾದ್ಯಂತ ವಿಶೇಷ ಸ್ಥಾನಮಾನವಿದೆ. ನಮ್ಮಲ್ಲಿ ಗಂಡು-ಹೆಣ್ಣು ಎಂಬ ಯಾವುದೇಭೇದ-ಭಾವಗಳಿಲ್ಲ. ಹೆಣ್ಣು ಸಮಾನಳು. ಸರ್ಕಾರವುಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ ಎಂದು ತಿಳಿಸಿದರು.

Advertisement

ಲಿಂಗ ಸಮಾನತೆ, ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಕೌಟುಂಬಿಕ ಕಲಹದಿಂದ ರಕ್ಷಣೆ, ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ, ಲಿಂಗ ತಾರತಮ್ಯ, ಹೆಣ್ಣು ಮಕ್ಕಳುಕೆಲಸ ಮಾಡುವ ಸ್ಥಳಗಳಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದರೆ ಫೋಕೊÕ ಕಾಯ್ದೆ, ಆಸ್ತಿ ಹಕ್ಕು ಇಂತಹಎಲ್ಲಾ ಹಕ್ಕುಗಳು ಮತ್ತು ಕಾನೂನಿನ ಚೌಕಟ್ಟಿನಲ್ಲಿಮಹಿಳೆಯರಿಗಾಗಿ ಇರುವ ಕಾಯ್ದೆ ಕಾನೂನುಗಳ ಬಗ್ಗೆಅವರಿಗೆ ಸೂಕ್ತ ಮಾಹಿತಿ ದೊರೆಯಬೇಕು. ಕಾನೂನಿನಲ್ಲಿ ಹೆಣ್ಣು ಮಕ್ಕಳಿಗೆ ಸಿಗಬೇಕಾದ ಹಕ್ಕು ಹಾಗೂ ನ್ಯಾಯ ದೊರಕುವಂತೆ ಸರ್ವೋತ್ಛ ಉತ್ಛ ನ್ಯಾಯಲಯಗಳು ದೊರಕಿಸಿಕೊಡುವಂತಹ ಕಾರ್ಯಗಳನ್ನು ಮಾಡುತ್ತಿವೆ ಎಂದು ತಿಳಿಸಿದರು.

ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌ ಮಾತನಾಡಿ, ಪ್ರತಿಯೊಂದು ಮನೆಯಲ್ಲೂ ಹೆಣ್ಣು ಜನಿಸುವುದುಕುಟುಂಬಗಳಿಗೆ ಸ್ವಾಗತಾರ್ಹ ಸನ್ನಿವೇಶವಾಗಿರುತ್ತದೆ.ಚಿಕ್ಕಂದಿನಿಂದ ಹಿಡಿದು ದೊಡ್ಡವರಾಗುವವರೆಗೆ ಮನೆಯ ಆಚಾರ-ವಿಚಾರ, ಸಂಸ್ಕೃತಿಗಳನ್ನು ಕಲಿತುಮನೆಯವರೊಂದಿಗಿನ ಪ್ರೀತಿ-ವಿಶ್ವಾಸದ ಜೊತೆಗೆಅವರ ಕಾಳಜಿಯನ್ನು ಬಯಸುತ್ತಾಳೆ. ಇಷ್ಟೇ ಅಲ್ಲದೇಹೊರಗಿನವರೊಂದಿಗೆ ಮಾತನಾಡುವ ಗುಣವನ್ನು ಬೆಳೆಸಿಕೊಂಡು, ತನ್ನ ಕರ್ತವ್ಯವನ್ನು ನಿಷ್ಕಲ್ಮಶ ಮನಸ್ಸಿನಿಂದಮಾಡುವಂತಹವಳು ಹೆಣ್ಣು ಮಗಳು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ಪ್ರಾಸ್ತವಿಕವಾಗಿ ಮಾತನಾಡಿ, ಇಂದು ಹೆಣ್ಣು ಮಕ್ಕಳ ಸಂಖ್ಯೆದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಅಘಾತಕಾರಿವಿಷಯ. ಮುಂದೊಂದು ದಿನ ಲಿಂಗಾನುಪಾತ ಗಂಭೀರ ಸಮಸ್ಯೆ ಉಂಟಾಗಬಹುದು ಎಂದು ಎಚ್ಚರಿಸಿದರು.

ಉಪವಿಭಾಗಾಧಿಕಾರಿ ಮಮತ ಹೊಸಗೌಡರ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್‌ ರೇಷ್ಮಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಸ್‌.ಆರ್‌. ಗಂಗಪ್ಪ, ಮಹಿಳಾ ಪೊಲೀಸ್‌ಠಾಣೆ ನಿರೀಕ್ಷಕಿ ವೈ.ಎಸ್‌. ಶಿಲ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next