Advertisement

ಕೇರಳ: ಆ್ಯಂಬ್ಯುಲೆನ್ಸ್‌ಗೆ ಮಹಿಳಾ ಚಾಲಕಿ

12:28 AM Mar 09, 2022 | Team Udayavani |

ತಿರುವನಂತಪುರ: ಕೇರಳದಲ್ಲಿ ಮೊದಲ ಬಾರಿಗೆ ಆ್ಯಂಬ್ಯುಲೆನ್ಸ್‌ಗೆ ಮಹಿಳೆಯನ್ನು ಚಾಲಕಿಯನ್ನಾಗಿ ನೇಮಿಸಲಾಗಿದೆ. ಕೊಲ್ಲಂ ಜಿಲ್ಲೆಯ ದೀಪಮೋಳ್‌ ಅವರಿಗೆ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರು ಆ್ಯಂಬ್ಯುಲೆನ್ಸ್‌ನ ಇಗ್ನಿಷನ್‌ ಕೀಯನ್ನು ಹಸ್ತಾಂತರಿಸಿ, ಶುಭ ಹಾರೈಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಚಾಲಕಿಯರನ್ನು ನೇಮಿಸಲಾಗುತ್ತದೆ. ಎಲ್ಲ 14 ಜಿಲ್ಲೆಗಳಲ್ಲಿ ಆ್ಯಂಬ್ಯುಲೆನ್ಸ್‌ಗಳನ್ನು ಚಲಾ ಯಿಸಲು ಕನಿಷ್ಠ ಒಬ್ಬ ಮಹಿಳೆಯನ್ನಾದರೂ ನೇಮಿಸಲಾಗುವುದು ಎಂದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದೀಪಾ ಅವರು, ಜನರ ಆರೋಗ್ಯ ಸೇವೆಯ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂಬ ನನ್ನ ಕನಸು ಈಗ ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ದೀಪಾ ಅವರು ವಾಹನ ಚಲಾಯಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next