ಹೊಸದಿಲ್ಲಿ: ಭಾರತದಲ್ಲಿನ ಯುಎಸ್ ರಾಯಭಾರಿಯಾಗಿರುವ ಎರಿಕ್ ಗಾರ್ಸೆಟ್ಟಿ ಅವರು ಮಂಗಳವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರನ್ನು ಶ್ಲಾಘಿಸಿದರು.
ಭಾರತದ ಎನ್‌ಎಸ್‌ಎ ರಾಷ್ಟ್ರೀಯ ಸಂಪತ್ತು ಮಾತ್ರವಲ್ಲದೆ ಅಂತಾರಾಷ್ಟ್ರೀಯ ನಿಧಿ ಎಂದು ಎರಿಕ್ ಗಾರ್ಸೆಟ್ಟಿ ಹೇಳಿದರು.
“ಉತ್ತರಾಖಂಡ್ ನ ಹಳ್ಳಿಯ ಹುಡುಗ ಅಜಿತ್ ದೋವಲ್ ಈಗ ಕೇವಲ ರಾಷ್ಟ್ರೀಯ ಸಂಪತ್ತು ಅಲ್ಲ, ಅವರು ಅಂತಾರಾಷ್ಟ್ರೀಯ ಸಂಪತ್ತು. ಈ ಶತಮಾನದ ಹಾದಿಯನ್ನು ಬದಲಾಯಿಸಲು, ಯುಎಸ್ ಎನ್ ಎಸ್ಎ ಜೇಕ್ ಸುಲ್ಲಿವಾನ್ ಅವರಂತೆ ನಮ್ಮನ್ನು ಮುಂದಕ್ಕೆ ಕೊಂಡೊಯ್ಯಲು ಒಂದೇ ರೀತಿಯ ದೃಷ್ಟಿಕೋನ ಹೊಂದಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ:10 ವರ್ಷದ ಬಾಲಕನನ್ನು ಬಲಿ ಪಡೆದ ಮೊಸಳೆಯನ್ನು ಕೋಲುಗಳಿಂದ ಬಡಿದು ಸಾಯಿಸಿದರು ಗ್ರಾಮಸ್ಥರು.!
ಗಾರ್ಸೆಟ್ಟಿ ಅವರು ಹೊಸದಿಲ್ಲಿಯಲ್ಲಿ ನಡೆದ “ಅಡ್ವಾನ್ಸಿಂಗ್ ಇಂಡಿಯಾ-ಯುಎಸ್ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಅಂಡ್ ಎಮರ್ಜಿಂಗ್ ಟೆಕ್ನಾಲಜೀಸ್ (ಐಸಿಇಟಿ)” ಕುರಿತ ದುಂಡುಮೇಜಿನ ಸಭೆಯಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.
ಇದೇ ವೇಳೆ ಎರಡು ದಿನಗಳ ಭಾರತ ಭೇಟಿಯಲ್ಲಿರುವ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಅಜಿತ್ ದೋವಲ್ ರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.