Advertisement
ವಿಟ್ಲ ಹಳೆ ಬಸ್ ನಿಲ್ದಾಣದಲ್ಲಿ ಸಮಸ್ತ ನಾಗರಿಕರು ನಿತಿನ್ ಪೂಜಾರಿ ಅವರಿಗೆ ಹಾರ ಹಾಕಿ ಸ್ವಾಗತಿಸಿದರು. ವಿಟ್ಲ ಪ.ಪಂ. ಅಧ್ಯಕ್ಷ ಅರುಣ್ ಎಂ. ವಿಟ್ಲ, ಸ್ಥಾಯೀ ಸಮಿತಿ ಅಧ್ಯಕ್ಷ ವಿ. ರಾಮದಾಸ ಶೆಣೈ, ಯೂತ್ ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ಚಂದ್ರಹಾಸ ಸುವರ್ಣ, ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಎಂ. ಸಂಜೀವ ಪೂಜಾರಿ, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕ ಆರ್.ಎಸ್. ರಮೇಶ್, ನಿವೃತ್ತ ಉಪಪ್ರಾಂಶುಪಾಲ ಎಚ್. ಸುಬ್ರಹ್ಮಣ್ಯ ಭಟ್ ಮೊದಲಾದವರು ನಿತಿನ್ ಅವರನ್ನು ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ವಿಟ್ಠಲ ಪ.ಪೂ. ಕಾಲೇಜಿನವರೆಗೆ ತೆರಳಿದರು.
ಸುವರ್ಣ ರಂಗಮಂದಿರದಲ್ಲಿ ನಿತಿನ್ ಅವರ ಅಭಿನಂದನೆ ಸಭೆಯ ಅಧ್ಯಕ್ಷತೆಯನ್ನು ವಿಟ್ಠಲ ವಿದ್ಯಾ ಸಂಘದ ಕೋಶಾಧಿಕಾರಿ ಎಂ. ನಿತ್ಯಾನಂದ ನಾಯಕ್ ವಹಿಸಿದ್ದರು. ವಿಟ್ಠಲ ವಿದ್ಯಾ ಸಂಘದ ಸದಸ್ಯ ಪದ್ಮಯ್ಯ ಗೌಡ, ಜೇಸಿಐ ವಲಯ 15ರ ಶಾಶ್ವತ ಯೋಜನೆಗಳ ಸಂಯೋಜಕ ಬಾಬು ಕೆ.ವಿ., ವಿಟ್ಲ ಜೇಸಿಐ ಅಧ್ಯಕ್ಷ ಸೋಮಶೇಖರ್, ವಿಟ್ಠಲ ಪ.ಪೂ. ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ವಿಟ್ಠಲ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ಬ್ರಹ್ಮಾವರ, ಸುಪ್ರಜಿತ್ ಐಟಿಐ ಪ್ರಾಂಶುಪಾಲ ರಘುರಾಮ ಶಾಸ್ತ್ರಿ, ನಿತಿನ್ ಪೂಜಾರಿ ತಂದೆ ಜನಾರ್ದನ ಪೂಜಾರಿ ಸೊರಂಗದಮೂಲೆ, ಸಹೋದರ ಮೋಹನ್ ಪುಣಚ, ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ವಿಶ್ವನಾಥ ರಾಥೋಡ್, ಮಲ್ಲಿಕಾ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ನಿತಿನ್‌ಗೆ ನೆಟ್‌ಬಾಲ್ ಆಟಕ್ಕೆ ಬುನಾದಿ ವಿಟ್ಠಲ ಪ.ಪೂ. ಕಾಲೇಜು. ಇಲ್ಲಿನ ದೈಹಿಕ ಶಿಕ್ಷಣ ನಿರ್ದೇಶಕ ಸುಚೇತನ್ ಜೈನ್ ಇವರ ಮೊದಲ ಗುರು. ವಿಟ್ಲದಲ್ಲಿ ಪಿಯುಸಿ ಮುಗಿಸಿ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಎಂ.ಕಾಂ. ಕಲಿಯುತ್ತಿರುವ ನಿತಿನ್ ನೆಟ್‌ಬಾಲ್ ಆಟ ಕೇಂದ್ರೀಕರಿಸಿ, ಮುಂದುವರಿದರು. ಭಾರತ ದೇಶದ ತಂಡವನ್ನು ಪ್ರತಿನಿಧಿಸಿ, ಉಪನಾಯಕನಾಗಿ, ಪಾಕಿಸ್ತಾನ ತಂಡವನ್ನು ಮಲೇಶ್ಯಾದ ಮೈದಾನದಲ್ಲಿ ಸೋಲಿಸಿ, ದೇಶದ ಕೀರ್ತಿ ಪತಾಕೆ ಹಾರಿಸಿದರು.
Related Articles
Advertisement
ಪಾಕಿಸ್ಥಾನಕ್ಕೆ ಸೋಲುಣಿಸಿದ ಭಾರತ ಮಲೇಶ್ಯಾದಲ್ಲಿ ನೆಟ್‌ಬಾಲ್ ಅಂತಾರಾಷ್ಟ್ರೀಯ ಪಂದ್ಯಾವಳಿಯ ನಾಲ್ಕು ಲೀಗ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಭಾರತ ಪ್ರಥಮ ಲೀಗ್ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು ಸೋಲಿಸಿತು. ಆದರೆ ಪಾಕಿಸ್ಥಾನ ದೊಂದಿಗೆ 30 ಅಂಕಗಳ ಸೋಲನ್ನು ಅನುಭವಿಸಿತು. ಇಂಥ ಹೀನ ಸೋಲನ್ನು ನಿತಿನ್ ಕಂಡಿರಲಿಲ್ಲ. ಆದರೆ ಸಿಂಗಾಪುರ ಮತ್ತು ಮಲೇಶ್ಯಾ ತಂಡಗಳೊಡನೆ ಸೆಣಸಾಡಬೇಕಾಗಿತ್ತು. ಆ ಎರಡೂ ಪಂದ್ಯಗಳಲ್ಲೂ ಭಾರತ ಜಯ ಗಳಿಸಿತು. ಇದೇ ಕಾರಣಕ್ಕೆ ಭಾರತ ತಂಡಕ್ಕೆ ಲೀಗ್ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಲಭಿಸಿ, ಫೈನಲ್ ಪಂದ್ಯವನ್ನು ಮತ್ತೆ ಪಾಕಿಸ್ಥಾನದ ವಿರುದ್ಧ ಆಡಬೇಕಾಯಿತು. ಪ್ರಥಮ, ದ್ವಿತೀಯ ಹಂತದಲ್ಲಿ ಪಾಕಿಸ್ಥಾನ 2 ಅಂಕಗಳ ಮುನ್ನಡೆ ಮತ್ತು ಮೂರನೇಹಂತದಲ್ಲಿ 4 ಅಂಕಗಳ ಮುನ್ನಡೆಯನ್ನು ಸಾಧಿಸಿತ್ತು. ಎದೆಗುಂದದೆ ಆಡಿದ ತಂಡ ಕೊನೆಯ ಹಂತದಲ್ಲಿ ಕೇವಲ 1 ಅಂಕದ ಮುನ್ನಡೆಯೊಂದಿಗೆ ಅಂದರೆ 51-50 ಅಂಕಗಳ ರೋಮಾಂಚಕ ಜಯ ಗಳಿಸಿತು. ಜಯದ ಕೊನೆಯ ಶೂಟ್ ನಿತಿನ್ ಅವರದಾಗಿತ್ತು. ಅಷ್ಟೇ ಅಲ್ಲ, 51 ಅಂಕಗಳಲ್ಲಿ 45 ಅಂಕವನ್ನೂ ಸಂಪಾದಿಸಿಕೊಟ್ಟ ನಿತಿನ್ ಗೆಲುವಿನ ರೂವಾರಿಯಾದರು. ನನ್ನ ಸಾಧನೆಗೆ ವಿಟ್ಠಲ ವಿದ್ಯಾ ಸಂಘ ಅಡಿಪಾಯ ಹಾಕಿಕೊಟ್ಟಿದ್ದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ವಿಟ್ಠಲ ಪ.ಪೂ. ಕಾಲೇಜು ಹಾಗೂ ಪ್ರೌಢ ಶಾಲೆಯ ದೆ„ಹಿಕ ಶಿಕ್ಷಣ ಶಿಕ್ಷಕರು ಹಾಗೂ ಉಪನ್ಯಾಸಕರ ಪ್ರೋತ್ಸಾಹ ತನಗೆ ದೊರೆತಿದ್ದು ಪ್ರಸ್ತುತ ಈ ಗೆಲುವು ತನ್ನ ಮೊದಲ ಹೆಜ್ಜೆಯಾಗಿದೆ.
– ನಿತಿನ್ ಪೂಜಾರಿ