Advertisement
ಈ ಕುರಿತು ವಿಧಾನಸಭಾಧ್ಯಕ್ಷ ಹಾಗೂ ಕರಾಟೆ ಚಾಂಪಿಯನ್ಶಿಪ್ ಚೀಫ್-ಡಿ-ಮಿಶನ್ ಯು.ಟಿ. ಖಾದರ್ ಅವರು ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Related Articles
Advertisement
ಪಂದ್ಯಾವಳಿಯ ಆರಂಭದ ಮೊದಲು ಕರಾವಳಿ ಕರ್ನಾಟಕದ ಬಗ್ಗೆ ಯಕ್ಷಗಾನ, ಜಾನಪದ ಗೀತೆ ಇತ್ಯಾದಿಗಳನ್ನು ದೃಶ್ಯಮಾಧ್ಯಮ ಮೂಲಕ ಪ್ರದರ್ಶಿಸಲಾಗುವುದು. ಪಂದ್ಯಾಟದ ಬಳಿಕ 2 ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಳ್ವಾಸ್ ಸಾಂಸ್ಕೃತಿಕ ತಂಡ ನಡೆಸಿಕೊಡಲಿದೆ ಎಂದರು.
ಪಂದ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೆ.6 ರಂದು ಬೆಳಗ್ಗೆ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು.ಟಿ.ಖಾದರ್, ಬಿಷಪ್ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ಡಾ|ಎ. ಸದಾನಂದ ಶೆಟ್ಟಿ, ಶಾಸಕರಾದ ವೇದ ವ್ಯಾಸ ಕಾಮತ್, ಎನ್.ಎ.ಹ್ಯಾರಿಸ್ ಮುಂತಾದವರು ಪಾಲ್ಗೊಳ್ಳುವರು.
ಸಂಘಟನ ಸಮಿತಿ ಅಧ್ಯಕ್ಷ ಸುರೇಂದ್ರ ಬಿ., ಪ್ರಮುಖರಾದ ರಾಜಗೋಪಾಲ್ ರೈ, ಕೆ.ತೇಜೋಮಯ, ವಂ| ಕ್ಲಿಫರ್ಡ್ ಫೆರ್ನಾಂಡಿಸ್, ರಾಯ್ ಕ್ಯಾಸ್ಟಲಿನೊ, ಸೂರಜ್ ಕುಮಾರ್ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ, ಡಾ| ರಾಹುಲ್ ಟಿ.ಜಿ. ಉಪಸ್ಥಿತರಿದ್ದರು.
ಮೊದಲ ಬಾರಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ನಡೆಯುತ್ತಿದೆ ಎಂದು ಯು.ಟಿ.ಖಾದರ್ ತಿಳಿಸಿದರು. ಕೋರ್ಡೆಲ್ ಹಾಲ್ನ ಒಳಭಾಗವನ್ನು ಮ್ಯಾಟ್ ಹಾಕಿ ಕರಾಟೆ ಪಂದ್ಯಾಟಗಳಿಗೆ ಸಜ್ಜುಗೊಳಿಸಲಾಗಿದೆ. 1,500ರಷ್ಟು ಕರಾಟೆ ಪಟುಗಳು, ಜತೆಗೆ ತೀರ್ಪುಗಾರರು, ಟೀಂ ಮ್ಯಾನೇಜರ್ಗಳು ಪಾಲ್ಗೊಳ್ಳುತ್ತಿದ್ದಾರೆ. ಏಕಕಾಲದಲ್ಲಿ 7ರಿಂದ 9 ಪಂದ್ಯಗಳನ್ನು ನಡೆಸಬಹುದಾಗಿದೆ. ವೈಯುಕ್ತಿಕ ಕಟಾ, ಟೀಂ ಕಟಾ, ಕುಮಿಟೆ ವಿಭಾಗಗಳಲ್ಲಿ ಪಂದ್ಯಾಟ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸುರೇಂದ್ರ ತಿಳಿಸಿದರು. ಬರಲಿದ್ದಾರೆ ವಿಶ್ವ ಚಾಂಪಿಯನ್
ಜೋರ್ಡಾನ್ ತಂಡದಲ್ಲಿ ಮೂರು ಬಾರಿ ಸತತ ವಿಶ್ವ ಚಾಂಪಿಯನ್ ಆಗಿರುವ ಮೊಹಮ್ಮದ್ ಅಲ್ ಜಾಫರ್ ಪಾಲ್ಗೊಳ್ಳಲಿದ್ದಾರೆ. ಈಗಲೂ ಆನ್ಲೈನ್ ಮೂಲಕ ಕರಾಟೆಗೆ ನೋಂದಾಯಿಸಲು ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.