Advertisement
ಜನವರಿ 2019 ರಿಂದ ಆರಂಭವಾಗಲಿರುವ ಪ್ರೊ ಹಾಕಿ ಲೀಗ್‌ನಲ್ಲಿ ಅಗ್ರ ಶ್ರೇಯಾಂಕದ 9 ತಂಡಗಳಿಗೆ ಅವಕಾಶ ನೀಡಲಾಗಿತ್ತು. ಜನವರಿ ಇಂದ ಜೂನ್‌ವರೆಗೆ 6 ತಿಂಗಳುಗಳ ಕಾಲ ಕೂಟ ನಡೆಯಲಿದೆ. ಈ ಕೂಟದಲ್ಲಿ ಅಗ್ರ ನಾಲ್ಕು ಸ್ಥಾನ ಪಡೆದ ಮಹಿಳಾ ಮತ್ತು ಪುರುಷ ತಂಡಗಳು ಟೊಕಿಯೊ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಲಿವೆ.ಈ ಬಗ್ಗೆ ಪ್ರತಿಕ್ರಿಯಿಸಿದ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ ಅಧ್ಯಕ್ಷ, ಭಾರತೀಯ ಹಾಕಿ ಸಂಸ್ಥೆ ಮಾಜಿ ಅಧ್ಯಕ್ಷ ನರೀಂದರ್ ಬಾತ್ರ, ಪ್ರೊ ಹಾಕಿ ಲೀಗ್‌ನಲ್ಲಿ ಪಾಲ್ಗೊಳ್ಳದಿರಲು ಭಾರತೀಯ ಹಾಕಿ ಸಂಸ್ಥೆ ತೀರ್ಮಾನಿಸಿದ್ದು, ಇದು ವಿಷಾದನೀಯ. ಆದರೆ ಭಾರತದ ಸ್ಥಾನದಲ್ಲಿ ಬೇರೆ ರಾಷ್ಟ್ರ ಪ್ರವೇಶ ಪಡೆಯಲಿದೆ. ಈಗಾಗಲೇ ಹಲವು ರಾಷ್ಟ್ರಗಳು ಮನವಿ ಸಲ್ಲಿಸಿವೆ ಎಂದು ತಿಳಿಸಿದ್ದಾರೆ.
ಭಾರತ ಕೂಟದಿಂದ ಹಿಂದೆ ಸರಿಯಲು ಮುಖ್ಯ ಕಾರಣ ಒಲಿಂಪಿಕ್ಸ್‌ಗೆ ಕೇವಲ 4 ತಂಡಗಳಿಗೆ ಮಾತ್ರ ನೇರ ಅರ್ಹತೆ ಇರುವುದು. ಉಳಿದ ತಂಡಗಳಿಗೆ ನೇರ ಅರ್ಹತೆ ಇರುವುದಿಲ್ಲ. ಭಾರತದ ಪುರುಷರ ತಂಡ ವಿಶ್ವ ನಂ.6ನೇ ಶ್ರೇಯಾಂಕದಲ್ಲಿರುವುದು ಸಮಸ್ಯೆ ಇಲ್ಲ. ಆದರೆ ಮಹಿಳೆಯರ ತಂಡ ವಿಶ್ವ ನಂ.12ನೇ ಶ್ರೇಯಾಂಕದಲ್ಲಿದೆ. ಹೀಗಾಗಿ ಮಹಿಳಾ ತಂಡಕ್ಕೆ ಪ್ರೊ ಲೀಗ್ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಸುಲಭವಲ್ಲ. ಆದರೆ ವಿಶ್ವ ಲೀಗ್ 1 ಮತ್ತು ವಿಶ್ವ ಲೀಗ್ 2 ಕೂಟದ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಮುಂದಾಗಿದೆ.