Advertisement
ಗಾಂಧಿ ಶಾಂತಿ ಪ್ರಶಸ್ತಿಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ನೋಡಾಲ್ ಏಜನ್ಸಿಯು ನಾಮಾಂಕನ (ಶಿಫಾರಸು) ಗಳನ್ನು ಸ್ವೀಕರಿಸಿ ಸರಕಾರಕ್ಕೆ ಕಳುಹಿಸಿದೆ; ಆದರೆ ಅವುಗಳಿಗೆ ಈಗಿನ್ನೂ ಅನುಮೋದನೆಯನ್ನು ಕಾಯಲಾಗುತ್ತಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕಾರಿಯೋರ್ವರು ಹೇಳಿದ್ದಾರೆ.
Related Articles
Advertisement
1995ರಲ್ಲಿ ಮೊದಲ ಅಂತಾರಾಷ್ಟ್ರೀಯ ಗಾಂಧಿ ಶಾಂತಿ ಪ್ರಶಸ್ತಿ ಪಡೆದವರು ತಾಂಜಾನಿಯಾದ ಮಾಜಿ ಅಧ್ಯಕ್ಷ ಜೂಲಿಯಸ್ ಕೆ ನೈರೇರೆ. ಮುಂದಿನ ವರ್ಷ ಇದನ್ನು ಸರ್ವೋದಯ ಶ್ರಮದಾನ ಆಂದೋಲನದ ಸ್ಥಾಪಕ ಅಧ್ಯಕ್ಷ ಎ ಟಿ ಅರಿಯರತ್ನೆ ಪಡೆದರು. 1997ರಲ್ಲಿ ಇದನ್ನು ಜರ್ಮನಿಯ ಜೆರಾಡ್‌ರ ಫಿಶರ್‌ಗೆ ನೀಡಲಾಯಿತು. 1998 ಮತ್ತು 1999ರಲ್ಲಿ ಇದನ್ನು ರಾಮಕೃಷ್ಣ ಮಿಶನ್‌ಗೆ ನೀಡಲಾಯಿತು.
2000 ಇಸವಿಯಲ್ಲಿ ಇದನ್ನು ಜಂಟಿಯಾಗಿ ನೆಲ್ಸನ್ ಮಂಡೇಲ ಮತ್ತು ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕಿಗೆ ನೀಡಲಾಯಿತು. 2005ರಲ್ಲಿ ಇದನ್ನು ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ಅವರಿಗೆ ನೀಡಲಾಯಿತು. ಅಲ್ಲಿಂದ ಎಂಟು ವರ್ಷಗಳ ಬಳಿಕ 2013ರಲ್ಲಿ ಇದನ್ನು ಚಾಂದ್ನಿ ಪ್ರಸಾದ್ ಭಟ್ (ಚಿಪ್ಕೋ ಆಂದೋಲನದೊಂದಿಗೆ ಗುರುತಿಸಿಕೊಂಡಿದ್ದ ಖ್ಯಾತ ಪರಿಸರವಾದಿ) ಅವರಿಗೆ ನೀಡಲಾಯಿತು.