ದೇವನಹಳ್ಳಿ: ಅಂತಾರಾಷ್ಟ್ರೀಯ ವಿಮಾನಗಳು ಭಾರತಕ್ಕೆ ಮತ್ತು ಭಾರತದಿಂದ ಮತ್ತೆ ಪ್ರಯಾಣ ಪ್ರಾರಂಭಿಸುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 25 ಪ್ರತಿನಿತ್ಯ ಅಂತಾರಾಷ್ಟ್ರೀಯ ನಿರ್ಗಮನಗಳನ್ನು ಕಾಣುತ್ತಿದೆ. ಹಿಂದೆ ದಿನಕ್ಕೆ 10 ನಿರ್ಗಮನ ಮಾತ್ರವಿದ್ದು ಗಮನಾರ್ಹ ಹೆಚ್ಚಳ ಕಂಡಿದೆ.
ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣವು 21 ಅಂತಾ ರಾಷ್ಟ್ರೀಯ ತಾಣಗಳೊಂದಿಗೆ ಸಂಪರ್ಕ ಹೊಂದಿದ್ದು, 24 ವಿಮಾನ ನಿಲ್ದಾಣಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ಮತ್ತು ವಿಮಾನ ನಿಲ್ದಾಣವು ಈ ವರ್ಷದಲ್ಲಿ ಹೊಸ ಮಾರ್ಗಗಳ ಸೇರ್ಪಡೆ ಮಾಡಲಿದ್ದು, ಸಿಯಾಟಲ್ (ಅಮೆರಿಕನ್ ಏರ್‌ಲೈನ್ಸ್) ಮತ್ತು ಪ್ರಸ್ತುತ ಈಗಿನ ಮಾರ್ಗಗಳನ್ನು ಸ್ಯಾನ್ ಫ್ರಾನ್ಸಿಸ್ಕೊ(ಏರ್ ಇಂಡಿಯಾ) ಯುನೈಟೆಡ್ ಏರ್‌ಲೈನ್ಸ್‌ನೊಂದಿಗೆ ಅಕ್ಟೋಬರ್ ತಿಂಗಳಲ್ಲಿ ವಾರಕ್ಕೊಮ್ಮೆ ವಿಮಾನಗಳ ಹಾರಾಟ ಪ್ರಾರಂಭಿಸಲಿದೆ. ಅಂತಾರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳ ನಡುವೆಯೂ ಮತ್ತು ನಿಯಂತ್ರಿತ ಸಂಚಾರವಿದ್ದರೂ ಕಳೆದ ಎರಡು ವರ್ಷಗಳಿಂದ ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತಕ್ಕೆ ವರ್ಗಾವಣೆ ಕೇಂದ್ರವಾಗಿ ರೂಪುಗೊಂಡಿದೆ.
ಬೆಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದಲ್ಲಿ ಅತ್ಯಂತ ಬಲವಾದ ಕನೆಕ್ಟಿವಿಟಿ ಹೊಂದಿದ್ದು 74 ಸ್ಥಳೀಯ ತಾಣಗಳನ್ನು ಸಂಪರ್ಕಿಸುತ್ತದೆ. ಮೆಟ್ರೋಗಳಲ್ಲದ ಮಾರ್ಗಗಳಿಗೆ ವಿಮಾನಗಳು ಹೆಚ್ಚಾಗಿದ್ದ ಪ್ರಯಾಣಿಕರ ಸಂಖ್ಯೆ ಶೇ.58ರಿಂದ(ಕೋವಿಡ್ -ಪೂರ್ವ) 2021ರ ವರ್ಷದಲ್ಲಿ ಕೋವಿಡ್ ಪೂರ್ವದ ಶೇ.63ಕ್ಕೆ ಏರಿದೆ. ಅಲ್ಲದೆ 2021ರ 1ನೇ ಹಾಗೂ 4ನೇ ತ್ರೆçಮಾಸಿಕದಲ್ಲಿ ಪ್ರಯಾಣಿಕರ ಸಂಚಾರವು ಮೆಟ್ರೋಗಳಲ್ಲದ ಮಾರ್ಗಗಳಿಂದ ಶೇ.27ರಷ್ಟು ಹೆಚ್ಚಾಗಿದ್ದು ಬೆಂಗಳೂರು ಮತ್ತು ಈ ಕೇಂದ್ರಗಳ ನಡುವಿನ ಸದೃಢ ಬೇಡಿಕೆ ಸೂಚಿಸಿದೆ.
ಮುಂದಿನ ಕೆಲ ತಿಂಗಳಲ್ಲಿ ಪ್ರಯಾಣಿಕರ ಪ್ರಮಾಣವು ಹೆಚ್ಚಾಗುವ ನಿರೀಕ್ಷೆ ಇದೆ. ಒತ್ತಡದ ಬೇಸಿಗೆ ಪ್ರಯಾಣದ ಋತುವಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳನ್ನು ಮತ್ತೆ ಪ್ರಾರಂಭಿಸುವ ಸಕಾಲಿಕ ಪ್ರಕಟಣೆಯು ಉದ್ಯಮಕ್ಕೆ ಸಕಾರಾತ್ಮಕ ಭಾವನೆ ಮೂಡಿಸಿದೆ. ಸತತ ಮೂಲಸೌಕರ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನ ಅಳವಡಿಕೆಗಳಿಂದ ವಿಮಾನ ನಿಲ್ದಾಣವು ದೊಡ್ಡ ಪ್ರಮಾಣದ ಪ್ರಯಾಣಿಕರನ್ನು ನಿರ್ವಹಿಸಲು ಸಜ್ಜಾಗಿದೆ ಎಂದು ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಎಂ.ಡಿ. ಮತ್ತು ಸಿಇಒ ಶ್ರೀಹರಿ ಮರಾರ್ ಹೇಳಿದರು.
ಕೋವಿಡ್ ಪೂರ್ವದಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 25 ಅಂತಾರಾಷ್ಟ್ರೀಯ ತಾಣಗಳಿಗೆ ಸಂಪರ್ಕ ಹೊಂದಿದ್ದು, ಪ್ರತಿದಿನ ಸರಾಸರಿ 40 ಅಂತಾರಾಷ್ಟ್ರೀಯ ನಿರ್ಗಮನಗಳು ನಡೆಯುತ್ತಿದ್ದವು. ಕೋವಿಡ್ ಸಾಂಕ್ರಾಮಿಕ ಕಡಿಮೆಯಾಗಿದ್ದರಿಂದ ಬೆಂಗಳೂರು ವಿಮಾನ ನಿಲ್ದಾಣವು 2021ರ ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದೆ.
ಹೆಚ್ಚಳ ನಿಭಾಯಿಸಲು ಹಲವು ತಂತ್ರಜ್ಞಾನ ಅಳವಡಿಕೆ : ಪ್ರಯಾಣಿಕರ ಸಂಚಾರದಲ್ಲಿ ನಿರೀಕ್ಷಿತ ಹೆಚ್ಚಳವನ್ನು ನಿಭಾಯಿಸಲು ಮತ್ತು ವಿಮಾನ ನಿಲ್ದಾಣದ ಅನುಭವವನ್ನು ಹೆಚ್ಚು ತಡೆ ರಹಿತವಾಗಿಸಲು ಬೆಂಗಳೂರು ವಿಮಾನ ನಿಲ್ದಾಣ ನಿರ್ವಹಿಸುವ ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್(ಬಿಐಎಎಲ್) ವಿವಿಧ ಚೆಕ್ ಪಾಯಿಂಟ್‌ಗಳಲ್ಲಿ ಆಟೊಮೇಷನ್ (ಸನ್ನದ್ಧ ಅಳವಡಿಕೆಯನ್ನು )ಟರ್ಮಿನಲ್ ಪ್ರವೇಶ, ಚೆಕ್-ಇನ್, ಸೆಕ್ಯುರಿಟಿ ಚೆಕ್, ಇಮಿಗ್ರೇಷನ್ ಮತ್ತು ಕಸ್ಟಮ್ಸ್‌ನಲ್ಲಿ ಅಳವಡಿಸಿದೆ. ಸೆಲ್ಫ್-ಬ್ಯಾಗೇಜ್ ಡ್ರಾಪ್ಸ್, ಸ್ಮಾರ್ಟ್ ಸೆಕ್ಯುರಿಟಿ ಲೇನ್ ಆಟೊಮೇಟೆಡ್ ಟ್ರೇ ರಿಟ್ರೀವಲ್ ಸಿಸ್ಟಂ ಒಳಗೊಂಡ ಪ್ರಸ್ತುತ ತಂತ್ರಜ್ಞಾನವು ಇತರೆ ಸಂಪರ್ಕರಹಿತ ತಂತ್ರಜ್ಞಾನದೊಂದಿಗೆ ಒಟ್ಟಾರೆ ವಿಮಾನ ನಿಲ್ದಾಣದ ಅನುಭವವನ್ನು ಮತ್ತಷ್ಟು ಸುಧಾರಿಸುತ್ತದೆ.