Advertisement

ಎರಡು ವರ್ಷಗಳಿಂದ ರದ್ದಾಗಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಮತ್ತೆ ಆರಂಭ

09:16 PM Mar 27, 2022 | Team Udayavani |

ನವದೆಹಲಿ : ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ರದ್ದಾಗಿದ್ದ ಅಂತಾರಾಷ್ಟ್ರೀಯ ವಿಮಾನಯಾನ ಭಾನುವಾರದಿಂದ ಶುರುವಾಗಿದೆ.

Advertisement

ಮಾ.27ರಿಂದ ಅ.29ರ ವರೆಗೆ ವೈಮಾನಿಕ ಕ್ಷೇತ್ರದ ಬೇಸಗೆ ಲೆಕ್ಕಾಚಾರದ ಪ್ರಕಾರ ವಿದೇಶಿ ವಿಮಾನಯಾನ ಕಂಪನಿಗಳು ವಾರಕ್ಕೆ 1,783 ಹಾರಾಟಗಳನ್ನು, ದೇಶೀಯ ವಿಮಾನ ಕಂಪನಿಗಳು 1, 466 ಹಾರಾಟಗಳನ್ನು ನಡೆಸಲಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ವಿಮಾನಯಾನ ಶುರುವಾಗಿರುವುದರಿಂದ ಭಾರತವನ್ನು ಜಗತ್ತಿನ ಇತರ ಭಾಗಗಳಿಗೆ ಮತ್ತೂಮ್ಮೆ ಸಂಪರ್ಕ ಕಲ್ಪಿಸಿದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಾಹಿತಿ ಪ್ರಕಾರ ದೇಶದ ಆರು ವಿಮಾನಯಾನ ಸಂಸ್ಥೆಗಳು ಮತ್ತು 60 ವಿದೇಶಿ ವಿಮಾನಯಾನ ಸಂಸ್ಥೆಗಳು 63 ದೇಶಗಳಿಗೆ ವಿಮಾನಯಾನ ಶುರು ಮಾಡಿವೆ.

ಇದನ್ನೂ ಓದಿ : ಹಿಜಾಬ್‌ಗಾಗಿ ಪರೀಕ್ಷೆ ಬಹಿಷ್ಕರಿಸಿದರೆ ಮತ್ತೆ ಬರೆಯಲು ಅವಕಾಶವಿಲ್ಲ : ಬಿ.ಸಿ.ನಾಗೇಶ್ ಸೂಚನೆ

Advertisement

Udayavani is now on Telegram. Click here to join our channel and stay updated with the latest news.

Next