Advertisement
ಎ. 11ರಂದು ಬೆಳಗ್ಗೆ 11 ಗಂಟೆಗೆ ಬೆಳಕು ಚಿತ್ರ ನಾಟಕ ಅರ್ಪಿಸುವ ಚಂದ್ರಶೇಖರ ಪಾಟೀಲ ರಚನೆಯ “ಕುಂಟಾಕುಂಟಾ ಕುರವತ್ತಿ’, ಟಿ.ಪಿ. ಕೈಲಾಸಂ ರಚನೆಯ “ಗಂಡಸ್ಕತ್ರಿ’ ನಾಟಕ ಹಾಗೂ 12 ಗಂಟೆಗೆ ಅಟ್ಲಾಂಟದ ನೃಪತುಂಗಕನ್ನಡ ಕೂಟದ ವತಿಯಿಂದ ಎಚ್. ಡುಂಡಿರಾಜ್ ಅವರಪುಕ್ಕಟೆ ಸಲಹೆ ನಾಟಕ ಪ್ರದರ್ಶನಗೊಳ್ಳಲಿದೆ. ಎ. 17ರಂದು ಬೆಳಗ್ಗೆ 11 ಗಂಟೆಗೆ ಅನಂತ ನಮನನಾಟಕ ತಂಡದಿಂದ ಪರ್ವತವಾಣಿ ಅವರ “ನಾನು ನೀನೇ’, ಬೃಂದಾವನ ಕನ್ನಡ ಕೂಟದಿಂದ 12 ಗಂಟೆಗೆಎಸ್. ಗುಂಡುರಾವ್ ಅವರ “ಭಾವ ಮೈದುನ’ ಪ್ರದರ್ಶನವಾಗಲಿದೆ. ಎ. 18ರಂದು 11 ಗಂಟೆಗೆ ಹಾಲೆಂಡ್‌ನಾಟಕ ಮಂಡಳಿಯಿಂದ ಶರತcಂದ್ರ ಅವರ ದೇವದಾಸ,12 ಗಂಟೆಗೆ ಆಂಟನ್ ಚೆಕೋವ್ ಅವರ “ಕರಡಿ ಮತ್ತು ವಿಧವೆ’ ನಾಟಕ ಪ್ರದರ್ಶನಗೊಳ್ಳಲಿದೆ.
Related Articles
Advertisement
ಕತಾರ್: ಕರ್ನಾಟಕ ಸಂಘ ಕತಾರ್ ವತಿಯಿಂದ ರಕ್ತದಾನ ಶಿಬಿರ ಎ. 9ರಂದು ಎಚ್‌ಎಂಸಿ ರಕ್ತದಾನ ಕೇಂದ್ರದಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ರಕ್ತದಾನ ಆರಂಭವಾಗಲಿದ್ದು, ಹೆಚ್ಚಿನ ಮಾಹಿತಿಗಾಗಿ ಡಿಡಿಡಿ. www.karnatakasanghaqatar.com ಅನ್ನು ನೋಡಬಹುದು.
ಯುಗಾದಿ ಸಂಭ್ರಮ :
ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ : “ಕೆಕೆಎನ್‌ಸಿ ಯುಗಾದಿ’ ಖುಷಿ- ಸಂಭ್ರಮಗಳಿಗೆ ತೋರಲಿ ಹೊಸ ಹಾದಿ ವಿಶೇಷ ಕಾರ್ಯಕ್ರಮ ಎ. 24ರಂದು ಸಂಜೆ 5.30(ಪಿಎಸ್‌ಟಿ) ಕ್ಕೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವಹಿ ಸಲು ಸಂಘದ ಸದಸ್ಯರು https://tinyurl.com/kknc2021yugadi ಜಚಛಜಿ ಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಯುಗಾದಿ ಸಂಭ್ರಮದ ಕಾರ್ಯಕ್ರಮವನ್ನು www. facebook.com/kknc.org ನಲ್ಲಿ ನೇರ ಪ್ರಸಾರ ಮಾಡಲಾಗುವುದು.
ಪೋರ್ಟಲ್ಯಾಂಡ್ ಕನ್ನಡ ಕೂಟ : ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಪೋರ್ಟ್‌ಲ್ಯಾಂಡ್ ಕನ್ನಡ ಕೂಟವು ಯುಗಾದಿವಿಶೇಷವಾಗಿ “ಪ್ಲವ ವೈಭವ’ ನೂತನವರ್ಷಕ್ಕೆ ಒಂದು ವಿನೂತನ ಕಾರ್ಯಕ್ರಮ ಮೇ 1ರಂದು ಸಂಜೆ 5.30ಕ್ಕೆ ನಡೆಯಲಿದೆ. ಕಾರ್ಯಕ್ರಮವನ್ನು ಯುಟ್ಯೂಬ್, ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ https://www. portlandkannadakoota.org ಅನ್ನು ನೋಡಬಹುದು.
ಮಿಷಿಗನ್ ಪಂಪ ಕನ್ನಡ ಕೂಟ : “ವಸ್ತುತಃ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ’ ಮೇ 8ರಂದು ಸಂಜೆ 4 ಗಂಟೆಗೆ ಮಿಷಿಗನ್ ಪಂಪಕನ್ನಡ ಕೂಟದಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಏಕ ಪಾತ್ರಾಭಿನಯ, ಸಮೂಹನೃತ್ಯಕಲೆ, ಏಕವ್ಯಕ್ತಿ ನೃತ್ಯ ಕಲೆ, ವಾದ್ಯ ಕಲೆ,ಕಿರು ನಾಟಕ, ಗಾಯನ, ಮೋಹಕ ಉಡುಪುಪ್ರದರ್ಶನ ನಡೆಯಲಿದೆ. ಕಾರ್ಯಕ್ರಮವನ್ನು ಯುಟ್ಯೂಬ್, ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು.