Advertisement

International Day of Yoga: ಯೋಗ ಫ್ಯಾಶನ್‌ ಅಲ್ಲ, ಪ್ಯಾಶನ್‌ ಆಗಬೇಕು! 

10:42 PM Jun 20, 2024 | Team Udayavani |

“ಯೋಗ’ ಎಂದರೆ “ಕೂಡುವುದು’. ಅದು ಅಧ್ಯಾತ್ಮದ ದೃಷ್ಟಿಯಿಂದ ದೇಹ, ಮನಸ್ಸು ಮತ್ತು ಆತ್ಮಗಳ ಬೆಸುಗೆ. ಪ್ರಸ್ತುತ ಕುಟುಂಬಗಳು ಛಿದ್ರಗೊಂಡು ಚಿಕ್ಕದಾಗುತ್ತಿರುವ ಸಂದರ್ಭದಲ್ಲಿ ಯೋಗ ಮತ್ತೆ ಜನರನ್ನು ಒಟ್ಟು ಗೂಡಿಸುವ ಪ್ರಕ್ರಿಯೆ. ಯೋಗವೊಂದು ಪರಿಹಾರ. ಅದು ಪರಿವಾರವನ್ನು ಒಂದುಗೂಡಿಸುತ್ತದೆ.

Advertisement

ಇಂದು ಭಾರತದ ಅಧ್ಯಾತ್ಮಕ್ಕೆ ವಿಶ್ವವೇ ತಲೆಬಾಗಿ ನಿಂತಿದೆ. ಜೂನ್‌ 21, ವಿಶ್ವದ 177 ದೇಶಗಳು ಸೂರ್ಯನೆಡೆಗೆ ಮುಖ ಮಾಡಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸುತ್ತಿ ರುವುದು ನಮ್ಮ ದೇಶಕ್ಕೆ ಸಂದ ಗೌರವ. ಯೋಗ ಮತ್ತು ಆಯುರ್ವೇದ ದರ್ಶನಗಳು ನಮ್ಮ ದೇಶದ ಬಹು ಮೂಲ್ಯ ಸಂಪತ್ತು. ಯೋಗವೊಂದು ವರವಿದ್ಯೆ. ಅಣುವಿನಿಂದ ಅನಂತದವರೆಗೆ, ಭಾವದಿಂದ ಅನುಭಾವದವರೆಗೆ, ಮೃತ್ಯುವಿ ನಿಂದ ಅಮೃತಣ್ತೀದೆಡೆಗೆ ಕರೆದೊಯ್ಯುವ, ಜೀವವನ್ನೇ ಶಿವನನ್ನಾಗಿಸುವ ಮಹಾಮಾರ್ಗವೇ ಯೋಗ ಪ್ರಕ್ರಿಯೆ. ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆಯ ಸಾಧನ. ವೃತ್ತಿ, ಪ್ರವೃತ್ತಿ, ನಿವೃತ್ತಿ ಮತ್ತು ನಿಷ್ಪತ್ತಿಯೆಡೆಗೆ ಕೊಂಡುಹೋಗುವುದೇ ಯೋಗ ಮಾರ್ಗ.

ಈ ಹತ್ತನೆಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಧ್ಯೇಯ ವಾಕ್ಯ “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಜಗತ್ತಿನ ಯಾವುದೇ ಮೂಲೆಯಲ್ಲಿ ಯೋಗ ಶಿಬಿರ ನಡೆಯಲಿ. ಸಾವಿರಾರು ಜನರು ಬರುತ್ತಾರೆ, ಒಟ್ಟಿಗೆ ಯೋಗಾಭ್ಯಾಸ ಮಾಡುತ್ತಾರೆ. ನಾವೆಲ್ಲ ಒಂದೇ ಯೋಗ ಪರಿವಾರದವರು ಎನ್ನುವ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ಹಾಗಾಗಿ “ವಸುದೈವ ಕುಟುಂಬಕಂ’ ಎನ್ನುವ ಧ್ಯೇಯ ವಾಕ್ಯವನ್ನು ಸಾಕಾರಗೊಳಿಸಲು ಯೋಗಕ್ಕಿಂತ ಅನ್ಯ ಮಾರ್ಗವಿಲ್ಲ.

ಇಂದು ಜಗತ್ತನ್ನು ಕಾಡುತ್ತಿರುವುದು ಒಂಟಿತನ (Loneliness). ಯೋಗವು Loneliness ಓಡಿಸಿ Aloneness  ಹೇಳಿಕೊಡುತ್ತದೆ. ಅಂದರೆ ಒಂಟಿತನದಿಂದ ಏಕಾಂಗಿತನಕ್ಕೆ ಸಾಗುವುದು. ಒಂಟಿತನ ನಕಾರಾತ್ಮಕವಾಗಿದ್ದರೆ ಏಕಾಂಗಿತನ ಸಕಾರಾತ್ಮಕ. ಏಕಾಂಗಿತನವನ್ನು ನೀಗಿಕೊಳ್ಳಲು, ಅಂತರಂಗವನ್ನು ಅರಿತುಕೊಳ್ಳಲು ಯೋಗದ ಶಿಸ್ತು ಅತೀ ಮುಖ್ಯ.

ಮೂರು ವರ್ಷಗಳ ಹಿಂದೆ ನಾವು ನ್ಯೂಜಿಲ್ಯಾಂಡ್‌ ದೇಶಕ್ಕೆ ಹೋಗಿದ್ದೆವು. ಅಲ್ಲಿ ಜನರು, ಅದರಲ್ಲೂ ಚಳಿಗಾಲದಲ್ಲಿ ಒಂಟಿತನಕ್ಕೆ ಬಲಿಯಾಗಿ ಮಾನಸಿಕವಾಗಿ ಜರ್ಝರಿತ ಗೊಳ್ಳುವುದು ಸಾಮಾನ್ಯ. ಒಂಟಿತನ, ಆತಂಕ, ಭಯ ಅವರನ್ನು ತೀವ್ರವಾಗಿ ಕಾಡುತ್ತದೆ. ಅಂತಹವರ ನೆರವಿಗಾಗಿ ಅಲ್ಲಿ ಕಾಲ್‌ ಸೆಂಟರ್‌ಗಳನ್ನು ಸ್ಥಾಪಿಸಿದ್ದಾರೆ. ಸಾವಿರಾರು ಜನರು ಈ ಕಾಲ್‌ ಸೆಂಟರ್‌ಗಳಿಗೆ ಕರೆ ಮಾಡಿ, ಮಾತನಾಡಲು ತವಕಿಸುತ್ತಾರೆ. ಆಕ್ಲೆಂಡ್‌ನ‌ಂಥ ಒಂದು ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುವ ಮೈಸೂರಿನ ಕನ್ನಡದ ಹೆಣ್ಣುಮಗಳೊಬ್ಬರು ಅಪೂರ್ವ ರಾಜಶೇಖರ್‌. ಅವರು ನಮ್ಮನ್ನು ಭೇಟಿ ಮಾಡಿ ಹೇಳಿದ ಸಂಗತಿ ಎಂದರೆ, ಜನರು ಹೀಗೆ ಹತಾಶರಾಗಿ ಕರೆ ಮಾಡಿದಾಗ ಒಂದೊಂದು ಸಲ ಅವರಿಗೆ ಹೇಗೆ ಸಾಂತ್ವನ ಹೇಳುವುದು ಎಂದೇ ಗೊತ್ತಾಗುವುದಿಲ್ಲ ಎಂದು ಹೇಳಿ ನಮ್ಮ ಸಲಹೆ ಕೇಳಿದರು.

Advertisement

ಅವರಿಗೆ ನಾವು ಕೊಟ್ಟ ಸಲಹೆ ಏನೆಂದರೆ, ಕರೆ ಮಾಡಿದವರಿಗೆ ಹೇಳಿ, ನೀವು ಎಲ್ಲಿರುವಿರೋ ಅಲ್ಲಿ ಕೂತುಕೊಳ್ಳಿ, ದೀರ್ಘ‌ ಉಸಿರಾಡಿ ಎಂದು ಹೇಳಿ, ಉಚಾÌಸ – ನಿಶ್ವಾಸಗಳನ್ನು ಹೇಳುತ್ತಾ ಗೈಡ್‌ ಮಾಡಿ. ಅವರಿಗೆ ದೀರ್ಘ‌ ಉಸಿರಾಟ – ಡೀಪ್‌  ಬ್ರಿàದಿಂಗ್‌ – ಅಭ್ಯಾಸ ಮಾಡಲು ಹೇಳಿ ಎಂದು ಸೂಚಿಸಿದೆವು. ಈ ಸಲಹೆಯನ್ನು ಜಾರಿಗೊಳಿಸಿದಾಗ ಅವರಿಗೆ ಆಶ್ಚರ್ಯಕರ ಪರಿಣಾಮ ಕಂಡುಬಂದಿತು. ಅವರು ನಮ್ಮ ಹತ್ತಿರ ಯೋಗ ಕಲಿತರು. ಖನ್ನರಾಗಿ ಕರೆ ಮಾಡಿದವರಿಗೆ ಮಾರ್ಗದರ್ಶನ ನೀಡಿದ್ದಲ್ಲದೇ ವಾರಕ್ಕೊಮ್ಮೆ ಸೆಂಟರಿಗೆ ಕರೆಸಿ ಯೋಗ ಕಲಿಸಿಕೊಡ ತೊಡಗಿದರು. ಆನ್‌ಲೈನ್‌ ಕ್ಲಾಸ್‌ಗಳನ್ನೂ ಮಾಡತೊಡಗಿದರು. ಕೊನೆಗೆ ಯೋಗ ಮಾಡುವವರ ತಂಡಗಳು ಸಿದ್ಧವಾಗಿ ಯೋಗ ಪರಿವಾರವೇ ಸೃಷ್ಟಿಯಾಯಿತು.

ಖನ್ನತೆ, ಒಂಟಿತನಕ್ಕೆ ಯೋಗಾಭ್ಯಾಸ ಅತ್ಯಂತ ಸೂಕ್ತ ಪರಿಹಾರ ಎನ್ನಲು ಹಲವಾರು ನಿದರ್ಶನಗಳಿವೆ. ಯೋಗಿಗಳಿಗೆ ತಪಸ್ಸು ಸಾಧ್ಯವಾಗುವುದು ಅವರಿಗೆ ಏಕಾಂತ ಆಯ್ಕೆಯೇ ಹೊರತು ಅನಿವಾರ್ಯವಲ್ಲ. ಒಂದು ಸಲ ಹಿಮಾಲಯದ ಯೋಗಿ ಬೆಂಗಾಲಿ ಬಾಬಾ ಅವರು ಗುಹೆಯೊಳಗೆ ಧ್ಯಾನದಲ್ಲಿದ್ದಾಗ ಅವರ ಶಿಷ್ಯ ಶ್ರೀಸ್ವಾಮಿ ರಾಮ ಗುಹೆಯ ಬಾಗಿಲಲ್ಲಿ ಕೂತಿದ್ದರು. ಅಲ್ಲಿಗೆ ಉತ್ತರಾಖಂಡದ ರಾಜ ಪರಿವಾರದ ಯುವರಾಜರು ಸ್ವಾಮೀಜಿಯವರನ್ನು ನೋಡಲು ಬಂದರು. ಶ್ರೀ ಸ್ವಾಮಿ ರಾಮ ಅವರು ಯುವರಾಜರನ್ನು ಒಳಗೆ ಕಳಿಸಿದರು. ಅಲ್ಲಿ ಬೆಂಗಾಲಿ ಬಾಬಾ ಜತೆ ಸ್ವಲ್ಪ ಹೊತ್ತು ಮಾತನಾಡಿದ ಯುವರಾಜ ಕೊನೆಗೆ ಕೇಳುತ್ತಾನೆ, “”ಇಲ್ಲಿ ಹೀಗೆ ಒಬ್ಬರೇ ಕೂತು ಧ್ಯಾನ ಮಾಡುತ್ತಿದ್ದರೆ ನಿಮಗೆ ಏಕಾಂಗಿ ಅನ್ನಿಸುವುದಿಲ್ಲವಾ?”

ಅದಕ್ಕೆ ಬೆಂಗಾಲಿ ಬಾಬಾ ಹೇಳುತ್ತಾರೆ “ಇಷ್ಟು ಹೊತ್ತು ನಾನು ಏಕಾಂಗಿ ಆಗಿರಲಿಲ್ಲ. ನೀನು ಬಂದು ನನ್ನನ್ನು ಏಕಾಂಗಿ ಮಾಡಿದೆ’. ಅಂದರೆ ಯೋಗ ಧ್ಯಾನದಲ್ಲಿದ್ದರೆ ನಿಮಗೆ ಒಂಟಿ ಅನ್ನಿಸುವುದಿಲ್ಲ. ಆದರೆ ಇಂದು ಧ್ಯಾನ ಎನ್ನುವುದು ಫ್ಯಾಶನ್‌ ಆಗಿದೆ – ಪ್ಯಾಶನ್‌ ಅಲ್ಲ!

ಯೋಗವು “ಪ್ಯಾಶನ್‌’ ಆದಾಗ ಅದು ನಿಮ್ಮನ್ನು ಎಲ್ಲದರೊಂದಿಗೆ ಜೋಡಿಸುತ್ತದೆ. ಅಮೆರಿಕದಲ್ಲಿ ಪ್ರತೀ ಹತ್ತು ಕಿಲೋ ಮೀಟರಿಗೆ ಒಂದರಂತೆ ಯೋಗ ಕೇಂದ್ರಗಳಾಗಿವೆ. ಜನರು ಯೋಗದ ಸತ್ಪರಿಣಾಮವನ್ನು ಕಂಡುಕೊಳ್ಳುತ್ತಿದ್ದಾರೆ. ಕೇವಲ ಸಾಧುವೂ ಸಂತರಿಗೆ ಸೀಮಿತವಾಗಿದ್ದ ಯೋಗ ಈಗ ಸಕಲರನ್ನೂ ಒಳಗೊಳ್ಳುತ್ತಿದೆ. ಹಿಮಾಲಯದ ಯೋಗ ವಿಶ್ವಮಾನ್ಯವಾಗಿ ವಿಶ್ವಮಾನವರನ್ನು ಸೃಷ್ಟಿಸುತ್ತಿದೆ.

ಯೋಗ ವ್ಯಕ್ತಿಯಲ್ಲಿ ಘನತೆ, ಸಮಾಜದಲ್ಲಿ ಸಮತೆ, ರಾಷ್ಟ್ರದಲ್ಲಿ ಭಾವೈಕ್ಯತೆ, ವಿಶ್ವದಲ್ಲಿ ಏಕತೆಯನ್ನು ಅಭಿವ್ಯಕ್ತಗೊಳಿಸುತ್ತದೆ.

ಯೋಗ ಸಾಧಕರಲ್ಲಿ ಸಾಗರದ 5 ಗುಣಗಳು!

1. ಸಾಗರವು ಕಲ್ಮಶವನ್ನು ಸದಾ ಹೊರಗೆ ಹಾಕುತ್ತಿರುತ್ತದೆ. ಯೋಗಾಭ್ಯಾಸವು ವ್ಯಕ್ತಿಯಲ್ಲಿ ಆಕರ್ಷಣೆ, ವಿರಕ್ತಿ, ಗೊಂದಲ, ಆತ್ಮಾರಾಧನೆ, ಗರ್ವ, ಅಸೂಯೆ, ದುರುದ್ದೇಶ, ವಂಚನೆ, ಒರಟುತನ, ಕೆಟ್ಟ ನೈತಿಕ ನಡವಳಿಕೆ, ಸಂಕಟ ಮುಂತಾದ ದೋಷಗಳನ್ನು ತನ್ನಲ್ಲಿ ಇಡಲು ಬಿಡು ವು ದಿಲ್ಲ. ಯೋಗ ನಿಮ್ಮನ್ನು ಶುದ್ಧವಾಗಿಡುತ್ತದೆ.

2.  ಇವತ್ತಿನ ಪ್ರದರ್ಶನ ಯುಗದಲ್ಲಿ ಯೋಗವು ವ್ಯಕ್ತಿಗೆ ಪ್ರದರ್ಶಿಸುವ ಹಪಾಹಪಿಯನ್ನು ಇಲ್ಲದಂತೆ ಮಾಡುತ್ತದೆ. ಸಾಗರವು ತನ್ನಲ್ಲಿ ಮುತ್ತು ಹವಳ ಮುಂತಾದ ರತ್ನಗಳನ್ನು ಹೊಂದಿದ್ದರೂ, ಅವುಗಳನ್ನು ಮರೆಮಾಡುತ್ತದೆ. ಯೋಗದಿಂದ ಸರಿಯಾದ ಮಾರ್ಗ, ಸಾಧನಾ ಫಲಗಳು, ಧ್ಯಾನ, ಸಮಾಧಿ, ಸಮನ್ವಯತೆ, ಒಳನೋಟ, ಬುದ್ಧಿವಂತಿಕೆ ಮತ್ತು ಜ್ಞಾನಗಳನ್ನು ಪಡೆದರೂ, ಅವುಗಳನ್ನು ಪ್ರದರ್ಶನಕ್ಕೆ ಇಡದಂತಹ ಸಂಯವನ್ನು ಕಲಿಸುತ್ತದೆ.

3. ಸಾಗರದ ಅಗಾಧತೆಯಂತೆ, ಯೋಗ ಸಾಧಕರು ಹಿರಿತನಕ್ಕೆ ನಿದರ್ಶನದಂತೆ ಮಹಾನ್‌ ಗುಣಗಳನ್ನು ಹೊಂದಿರುವ ವ್ಯಕ್ತಿಗಳೊಡನೆ ಒಡನಾಟವನ್ನು ಹೊಂದುವ ಮನಃಸ್ಥಿತಿಯನ್ನು ರೂಪಿಸುತ್ತದೆ.

4. ಸಾಗರವು ಸಾವಿರಾರು ನದಿಗಳು ಮತ್ತು ತೊರೆಗಳ ನೀರನ್ನು ಪಡೆಯುತ್ತದೆ, ಆದರೂ ಅದು ತನ್ನ ಗಡಿಯನ್ನು ಮುರಿಯುವುದಿಲ್ಲ. ಯೋಗದ ಸಾಧಕರು ಲಾಭ, ಗೌರವ, ನಮಸ್ಕಾರ, ಗೌರವಗಳನ್ನು ಪಡೆಯುತ್ತಾನೆ. ಆದರೂ ಗಡಿಯನ್ನು ಮೀರದ ಮಿತಿಯನ್ನು ಕಲಿಯುತ್ತಾರೆ.

5. ಯೋಗದ ಸಾಧಕರು ಎಂದಿಗೂ ಕಲಿಕೆಯಲ್ಲಿ ತƒಪ್ತರಾಗದಂತೆ, ಸದಾ ಕಲಿಕೆ ಯಲ್ಲಿ ನಿರತರಾಗಿರುವಂತೆ ಮಾಡುತ್ತದೆ.

– ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ

ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ, ಹರಿಹರ.

Advertisement

Udayavani is now on Telegram. Click here to join our channel and stay updated with the latest news.

Next