ನವದೆಹಲಿ: ಜಪಾನ್‌ನಿಂದ ನ್ಯೂಜಿಲ್ಯಾಂಡ್ ವರೆಗೆ ರಿಲೇ ಯೋಗ. ಇದು ಜೂ.21ರಂದು ನಡೆಯಲಿರುವ “ವಿಶ್ವ ಯೋಗದಿನ’ ದಂದು ನಡೆಯಲಿರುವ ಪ್ರಧಾನ ಆಕರ್ಷಣೆ.
ಆ ದಿನ ಜಪಾನ್‌ನ ಸ್ಥಳೀಯ ಕಾಲಮಾನ ಬೆಳಗ್ಗೆ 6 ಗಂಟೆಗೆ ಶುರುವಾಗಿ ನ್ಯೂಜಿಲೆಂಡ್ ವರೆಗೆ 70 ದೇಶಗಳಲ್ಲಿ ನಡೆಯುವ ಯೋಗದಿನದ ಕಾರ್ಯಕ್ರಮಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ ಎಂದು ಸೋಮವಾರ ಆಯುಷ್ ಸಚಿವ ಸರ್ವಾನಂದ್ ಸೊನೊವಾಲ್ ಜೂ.21ರ ಕಾರ್ಯಕ್ರಮಗಳ ವಿವರಗಳನ್ನು ಪ್ರಕಟಿಸಿದೆ.
ಯೋಗದಿನದ ಪ್ರಧಾನ ಕಾರ್ಯಕ್ರಮ ಈಗಾಗಲೇ ವರದಿಯಾಗಿರುವಂತೆ ಮೈಸೂರಿನಲ್ಲಿ ನಡೆಯಲಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ನೇತೃತ್ವ ವಹಿಸಲಿದ್ದಾರೆ. ಮತ್ತೊಂದು ವಿಶೇಷದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ತಿಗೊಂಡು ಅಮೃತಮಹೋತ್ಸವ ಆಚರಿಸುತ್ತಿರುವ ವೇಳೆಯಲ್ಲಿ 75 ಪ್ರಮುಖ ಸ್ಥಳಗಳಲ್ಲಿ ಯೋಗ ಹಮ್ಮಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿಯಲ್ಲಿ ಬರೋಬ್ಬರಿ 2 ವರ್ಷಗಳ ಬಳಿಕ ದೇಶಾದ್ಯಂತ ಅದ್ಧೂರಿಯಾಗಿ ಯೋಗದಿನ ಹಮ್ಮಿಕೊಳ್ಳಲಾಗಿದೆ ಎಂದು ಸೊನೊವಾಲ್ ತಿಳಿಸಿದ್ದಾರೆ.