Advertisement

ಇಂದು ವಿಶ್ವ ಅಂಗವಿಕಲರ ದಿನ ; ಸುಸ್ಥಿರ ಸಮಾಜ ನಿರ್ಮಾಣ ಮಾಡೋಣ

10:46 PM Dec 02, 2020 | mahesh |

ಅಂಗವಿಕಲರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯವೇನು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಸಮಾಜದಲ್ಲಿ ಅಂಗವಿಕಲರ ಬಗೆಗಿನ ತಾತ್ಸಾರ ಮನೋಭಾವವನ್ನು ತೊಡೆದು ಹಾಕಲು ಮತ್ತು ಅವರಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಸ್ವಾಭಿಮಾನದಿಂದ ಬಾಳಲು ಉತ್ತೇಜನ ನೀಡಲೆಂದೇ ಈ ದಿನಾಚರಣೆ.

Advertisement

1992 ರಲ್ಲಿ ಆರಂಭ
ವಿಶ್ವಸಂಸ್ಥೆ 1992ರಲ್ಲಿ ಡಿ. 3ನ್ನು ವಿಶ್ವ ಅಂಗವಿಕಲರ ದಿನವನ್ನಾಗಿ ಘೋಷಿಸಿತು. ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ‌ ಕುರಿತು ಜಾಗೃತಿ. ಸಮಾನ ಅವಕಾಶ, ಸೌಲಭ್ಯ ಕಲ್ಪಿಸುವುದು ಈ ದಿನದ ಉದ್ದೇಶ.

ಅಂಗವಿಕಲರನ್ನೊಳಗೊಂಡ ಸುಸ್ಥಿರ ಕೊರೊನೋತ್ತರ ಜಗತ್ತಿನ ನಿರ್ಮಾಣ- ಈ ವರ್ಷದ ಧ್ಯೇಯ

ಹೊಸ ತಾಂತ್ರಿಕ ಆವಿಷ್ಕಾರಗಳು
ಅಂಗವಿಕಲರ ಸ್ವಾವಲಂಬಿ ಬದುಕಿಗಾಗಿ ಹೊಸ ತಾಂತ್ರಿಕ ಆವಿಷ್ಕಾರಗಳು ನಡೆಯುತ್ತಲೇ ಇವೆ. ಅಂಥ ಕೆಲವು ನೂತನ ಸಾಧನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಎಲೆಕ್ಟ್ರಿಕಲ್‌ ಸ್ಟಿಮ್ಯೂಲೇಶನ್‌
ಪಾರ್ಶ್ವವಾಯು ಮತ್ತು ಬೆನ್ನುಹುರಿ ಸಮಸ್ಯೆಯಿಂದ ಕಾಲುಗಳಲ್ಲಿ ಸ್ವಾಧೀನ ಕಳೆದುಕೊಂಡವರಿಗೆ ಕೇವಲ ಗಾಲಿಕುರ್ಚಿಗಳೇ ಆಶ್ರಯವಾಗಿತ್ತು. ಇದೀಗ ಅವುಗಳನ್ನು ವಾಕರ್‌ ರೀತಿಯಲ್ಲಿ ಬಳಕೆ ಮಾಡಿಕೊಂಡು ಎಲೆಕ್ಟ್ರಿಕಲ್‌ ಸ್ಟಿಮ್ಯೂಲೇಶನ್‌ ತಂತ್ರಜ್ಞಾನದ ಮೂಲಕ ಸುಲಭವಾಗಿ ನಡೆಯಬಹುದು. ಈ ಸಾಧನದ ಮೂಲಕ ನರಗಳಿಗೆ ಮತ್ತು ಕಾಲಿನ ಮೂಳೆಗಳಿಗೆ ಶಕ್ತಿ ತುಂಬಲಾಗುತ್ತದೆ. ಪ್ರಯೋಗ ಹಂತದಲ್ಲಿರುವ ಈ ಸಾಧನ 2021ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳ್ಳಬಹುದು.

Advertisement

ಈ ಕಾರು ಅಂಧರಿಗೆ ಮಾತ್ರವಲ್ಲ, ದೈಹಿಕ ಅಥವಾ ಮಾನಸಿಕ ಭಿನ್ನ ಸಾಮರ್ಥ್ಯ ಹೊಂದಿರುವವರಿಗೂ ಸುರಕ್ಷಿತ. ಇದರಲ್ಲಿರುವ ಕೃತಕ ಬುದ್ಧಿಮತ್ತೆ, ಗೂಗಲ್‌ ಸ್ಟ್ರೀಟ್‌ ವ್ಯೂ (ರಸ್ತೆ ನೋಟದ ತಂತ್ರಾಂಶ), ಕಾರಿನ ಮೇಲೆ ಅಳವಡಿಸಲಾದ ಸಂವೇದಕಗಳು (ಸೆನ್ಸಾರ್‌), ಕೆಮರಾಗಳು ಚಾಲನೆಯ ಹಾದಿಯನ್ನು ಸುಗಮಗೊಳಿಸಲಿವೆ.

ಯಾರ ನೆರವೂ ಇಲ್ಲದೆ ಅಂಧರು ರಸ್ತೆ ದಾಟಲು, ಎದುರಿನಲ್ಲಿರುವ ವಸ್ತುಗಳನ್ನು ಗುರುತಿಸುವಂಥ ಸಾಧನ ವನ್ನು ಚೀನದ ಕೌÉಡ್‌ ಮೈಂvÕ… ಎಂಬ ಸಂಸ್ಥೆ ಆವಿಷ್ಕರಿಸಿದೆ. ಇದಕ್ಕೆ ಸೆನ್ಸಾರ್‌ ಹೆಲ್ಮೆಟ್‌ ಎಂದು ಹೆಸರಿಡಲಾಗಿದೆ. ಅಂಧರು ಇದನ್ನು ಧರಿಸಿ ರಸ್ತೆಗೆ ಇಳಿದರೆ ಸಾಕು ಸೆನ್ಸಾರ್‌ ತಂತ್ರಜ್ಞಾನದ ಮೂಲಕ ಈ ಸಾಧನ ಮಾರ್ಗದರ್ಶನ ನೀಡುತ್ತದೆ. ತಮ್ಮ ಸುತ್ತಲಿನ ವಾತಾವರಣವನ್ನು (20 ಮೀಟರ್‌) ಈ ಸಾಧನ ಗ್ರಹಿಸಿ, ಧ್ವನಿಯ ಮೂಲಕ ಸಂದೇಶವನ್ನು ರವಾನಿಸುತ್ತದೆ.

ನ್ಯೂಯಾರ್ಕ್‌ನ ಕೊಲಂಬಿಯಾ ವಿ.ವಿ.ಯ ವಿಜ್ಞಾನಿಗಳು ಕಿವುಡುತನ ನಿವಾರಣೆಗೆ ಹೊಸ ತಲೆಮಾರಿನ ಶ್ರವಣ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಸಣ್ಣ ಸದ್ದನ್ನೂ ಇದು ಗ್ರಹಿಸಲಿದೆ. ಮ್ಯಾಗ್ನೆಟಿಕ್‌, ಸಿಲಿಕಾನ್‌ ಚಿಪ್‌ಗ್ಳಿಂದ ತಯಾರಾದ ಈ ಸಾಧನ ಪ್ರಾಯೋಗಿಕ ಹಂತದಲ್ಲಿದೆ.

ಕಿವಿಯೊಳಗಿಡುವ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಕಿವಿ ಯೊಳಗೆ ಅಳವಡಿಸಬಹುದಾದ ಶ್ರವಣ ಸಾಧನಗಳು (ಕಾಕ್ಲಿಯರ್‌ ಇಂಪ್ಲಾಂಟ್ಸ್‌) ಶ್ರವಣ ದೋಷವುಳ್ಳವರಿಗೆ ವರದಾನ. ಈಗಿನ ಸುಧಾರಿತ ಕಾಕ್ಲಿಯರ್‌ ಇಂಪ್ಲಾಂಟ್‌ ಮೈಕ್ರೊಫೋನ್‌ ಮೂಲಕ ಧ್ವನಿಯನ್ನು ಗ್ರಹಿಸಿ ಅದನ್ನು ಕಿವಿಯ ಹಿಂದಿರಿಸಿದ ಸಣ್ಣ ಸಾಧನಕ್ಕೆ ಕಳುಹಿಸುತ್ತದೆ. ಈ ಸಂಕೇತವನ್ನು ಡಿಜಿಟಲ್‌ ರೂಪಾಂತರ ಮಾಡಿ ಇಂಪ್ಲಾಂಟ್‌ ಸಾಧನಕ್ಕೆ ಕಳುಹಿಸುತ್ತದೆ. ಈ ಸಂಕೇತ ಸ್ವೀಕರಿಸಿದಾಗ ಸಾಧನವು ಸ್ಪಷ್ಟ ಧ್ವನಿ ಕೇಳಿಸಲು ಕಿವಿಯ ನರಗಳನ್ನು ಉತ್ತೇಜಿಸುತ್ತದೆ.

ಅಂಧ ಚಾಲಕರಿಗಾಗಿ ಎಂಜಿನಿಯರ್‌ ಡೆನ್ನಿಸ್‌ ಹಾಂಗ್‌ ವಿಶೇಷ ಕಾರಿನ ವಿನ್ಯಾಸ ಮಾಡಿದ್ದಾರೆ. ಕೆಮರಾ, ಸಂವೇದಕಗಳು ಮತ್ತು ಬಹು ಕಂಪ್ಯೂಟರ್‌ಗಳ ಏಕೀಕೃತ ವ್ಯವಸ್ಥೆಯ ನೆರವಿನಿಂದ ಈ ಕಾರು ಓಡುತ್ತದೆ. ಇದರ ತಾಂತ್ರಿಕ ವ್ಯವಸ್ಥೆ ಸುತ್ತಮುತ್ತಲಿನ ಪ್ರದೇಶಗಳನ್ನು ಗಮನಿಸಲು ಮತ್ತು ಚಾಲಕನಿಗೆ ಮಾರ್ಗದರ್ಶನ ನೀಡಲು ಪರ್ಯಾಯ ಸಂವೇದನೆಯ ಬಗ್ಗೆ ಮಾಹಿತಿ ಪೂರೈಸಲಿದೆ. ಎಚ್ಚರಿಸುವ ಅಲಾರಾಂ, ಆಸನ ಅಥವಾ ಕೈಗವಸುಗಳ ಮೂಲಕ ಕಂಪನ ಸಂಕೇತ ರವಾನಿಸುತ್ತದೆ.

ಯುದ್ಧ ಭೂಮಿಯಲ್ಲಿ ಗಾಯಗೊಂಡ ಸೈನಿಕರು ಅಥವಾ ಜನಸಾಮಾನ್ಯರು ಅಪಘಾತದಲ್ಲಿ ಅಂಗಹೀನ ರಾದಲ್ಲಿ ಅಂಥವರಿಗೆ ನೆರವಾಗಲು ರೋಬೋಟಿಕ್‌ ತೋಳುಗಳು ಮಾರುಕಟ್ಟೆಗೆ ಬಂದಿವೆ. ಹಗುರವಾಗಿರುವ, ನೈಜ ತೋಳಿನಂತೆ ಬಳಸಬಹುದಾದ, ಬೇಕಾದಂತೆ ಸಜ್ಜು ಗೊಳಿಸಬಹುದಾದ ಈ ತೋಳುಗಳು ಸಂವೇದನೆಗೆ ಪ್ರತಿಕ್ರಿಯಿಸುವ ವ್ಯವಸ್ಥೆಯನ್ನೂ ಹೊಂದಿವೆ.

ದೃಷ್ಟಿಹೀನರು ನಡೆಯುವಾಗ ವಸ್ತುಗಳು ಅಥವಾ ಜನರಿಗೆ ತಾಗುವ, ಢಿಕ್ಕಿಯಾಗುವ ಅಥವಾ ದಾರಿ ತಪ್ಪುವ ಸಂದರ್ಭವನ್ನು ಈ ದಿಕ್ಸೂಚಿ ಸಾಧನ ತಪ್ಪಿಸಲಿದೆ. ವ್ಯಕ್ತಿಯ ಮೇಲೆ ಸಣ್ಣ ಜಿಪಿಎಸ್‌ ಸಾಧನವನ್ನು ಇರಿಸಿದರೆ, ಅದು ಸ್ಥಳ ಮತ್ತು ನಿರ್ದೇಶನದೊಂದಿಗೆ ಧ್ವನಿ ಮಾಹಿತಿಯನ್ನು ರಚಿಸುತ್ತದೆ. ಮುಂದೆ ಹೋಗುವ ದಾರಿಗಾಗಿ ಸ್ಥಳ ಹಾಗೂ ಮಾರ್ಗಸೂಚಿಯನ್ನು ಈ ವ್ಯವಸ್ಥೆಯಲ್ಲಿ ಉಳಿಸಿಕೊಂಡು ನಿರಂತರವಾಗಿ ಬಳಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next