Advertisement
ಇವನ್ನು ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ದಾಟಿಸುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮೇ 22ರಂದು ಅಂತಾ ರಾಷ್ಟ್ರೀಯ ಜೀವವೈವಿಧ್ಯ ದಿನ ವನ್ನಾಗಿ ಆಚರಿಸಲಾಗುತ್ತದೆ. ಇವನ್ನು ಕಾಪಾಡುವ, ಉಳಿಸಿ, ಬೆಳೆಸುವ ಸಂಕಲ್ಪಕ್ಕೆ ಈ ದಿನ ಮುನ್ನುಡಿಯಾಗಿದೆ.
ಈ ಜಗತ್ತಿನ ಸೌಂದರ್ಯ ಅಡಗಿರುವುದೇ ಜೀವವೈವಿಧ್ಯ ಗಳಿಂದ. ಇಲ್ಲಿನ ಆಹಾರ ಸರಪಣಿಯಲ್ಲಿ ಯಾವುದೇ ಒಂದು ಕೊಂಡಿ ಕಳಚಿದರೂ ಭೂಮಿಗೆ ಅಪಾಯ ತಪ್ಪಿದ್ದಲ್ಲ. ಈ ಕೊಂಡಿ ಎಂದಿಗೂ ಮುರಿಯದಂತೆ, ಮತ್ತೆ ಮತ್ತೆ ಜನರಿಗೆ ಎಚ್ಚರಿಸುತ್ತಿರುವ ಸೃಷ್ಟಿ ಶಕ್ತಿಯೆದುರು ಮನುಷ್ಯ ತಲೆಬಾಗಲೇಬೇಕು. ಅಭಿವೃ ದ್ಧಿಯ ಹೆಸರಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಗಳ ಮಾರಣ ಹೋಮದಿಂದ ಅರಣ್ಯ ಬರಿ ದಾಗಿದೆ. ಪರಿಣಾಮ ಹಲವು ವನ್ಯ ಜೀವಿಗಳು ಅಳಿವಿನಂಚಿನಲ್ಲಿವೆ. ಬಹಳ ಅಪರೂಪದ ಪ್ರಭೇದದ ಜೀವಿಗಳು ಆಹಾರವಿಲ್ಲದೆ, ನೀರಿಲ್ಲದೆ ಸಾಯುತ್ತಿವೆ. ಪ್ರಕೃತಿ ಸರಪಳಿಯನ್ನು ಮಾನವ ತನ್ನ ಅಗತ್ಯಕ್ಕೆ ತಕ್ಕಂತೆ ಕಳಚಿ ಆಕ್ರಮಣ ಮಾಡಿರುವುದೇ ಇಂದಿನ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಹಿನ್ನೆಲೆ ಏನು?
ಪ್ರತಿ ವರ್ಷ ಮೇ 22ರಂದು ಅಂತಾರಾಷ್ಟ್ರೀಯ ಜೀವವೈವಿಧ್ಯ ದಿನವೆಂದು ಆಚರಿಸಲಾಗುತ್ತದೆ. 1992ರ ಮೇ 22ರಂದು ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಜೈವಿಕ ವೈವಿಧ್ಯದ ಒಪ್ಪಂದ ಅಳವಡಿಸಿಕೊಳ್ಳಲಾಯಿತು. 2000ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಮೇ 22ರಂದು ವಿಶ್ವ ಜೀವವೈವಿಧ್ಯ ದಿನವನ್ನು ಆಚರಿಸಲು ತೀರ್ಮಾನಿಸಲಾಯಿತು. ಈ ಹಿಂದೆ ಡಿಸೆಂಬರ್ 29ರಂದು ಆಚರಿಸಲಾಗುತ್ತಿತ್ತು.
Related Articles
“ಸಮಸ್ಯೆಗೆ ಪರಿಹಾರ ಪ್ರಕೃತಿಯಲ್ಲೇ ಇದೆ’ ಈ ವರ್ಷದ ಧ್ಯೇಯವಾಕ್ಯವಾಗಿದೆ. ಜಗತ್ತಿಗೆ ನಿಸರ್ಗದೊಂದಿಗಿನ ತಮ್ಮ ಸಂಬಂಧವನ್ನು ಮರುಪರಿಶೀಲಿಸಲು ಜಾಗತಿಕ ಸಮುದಾಯಕ್ಕೆ ಕರೆ ನೀಡಲಾಗುತ್ತದೆ. ನಮ್ಮ ಜೀವನದಲ್ಲಿ ಪರಿಸರ ವ್ಯವಸ್ಥೆಯ ಪಾತ್ರವನ್ನು ಇದು ಹೇಳುತ್ತದೆ. ಈ ಧ್ಯೇಯವು ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನಕ್ಕೆ ವೇದಿಕೆ ನಿರ್ಮಿಸುವುದಾಗಿದೆ.
Advertisement
ಏನಿದು ಜೀವ ವೈವಿಧ್ಯತೆಜೀವವೈವಿಧ್ಯತೆ ಎಂಬ ಪದವನ್ನು 1968ರಲ್ಲಿ ಮೊದಲ ಬಾರಿಗೆ ವನ್ಯಜೀವಿ ವಿಜ್ಞಾನಿ ಮತ್ತು ಸಂರಕ್ಷಕ ರೈಮಂಡ್ ಎಫ್. ಡಸ್ಮಾನ್ ಅವರು ನೀಡಿದರು. ಜೀವವೈವಿಧ್ಯ ತೆಯಲ್ಲಿ ಮೂರು ಹಂತಗಳಿವೆ. ಪ್ರಭೇದ ವೈವಿಧ್ಯತೆ, ಪರಿಸರ ವೈವಿಧ್ಯತೆ ಮತ್ತು ತಳಿ ವೈವಿಧ್ಯತೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಹೆಸರಿಸುವಾಗ ಜೀವ ವೈವಿಧ್ಯತೆ ಪದವನ್ನು ಬಳಸಲಾಗುತ್ತದೆ. ಯಾಕೆ ನಾವು ಎಚ್ಚೆತ್ತುಕೊಳ್ಳಬೇಕು ?
– ಹವಾಮಾನ ಬದಲಾವಣೆಯಿಂದಾಗಿ ಜಗತ್ತಿನಲ್ಲಿ ಗಂಟೆಗೆ ಅಂದಾಜು 3 ಜೀವ ವೈವಿಧ್ಯ ಕಣ್ಮರೆಯಾಗುತ್ತಿದೆ. ಪ್ರತಿದಿನ ಸುಮಾರು 100ರಿಂದ 150 ಜೀವ ವೈವಿಧ್ಯ ನಾಶವಾಗುತ್ತಿವೆ.
– ಹವಾಮಾನದಲ್ಲಾದ ಬದಲಾವಣೆ ಕಾರಣಕ್ಕೆ 30 ವರ್ಷಗಳಲ್ಲಿ ಕೆನಡಾದಲ್ಲಿರುವ ಹಿಮ ಕರಡಿ ಸಂಖ್ಯೆ ಶೇ. 22ರಷ್ಟು ಕುಸಿತವಾಗಿದೆ.
– ಜಾಗತಿಕ ತಾಪಮಾನ ಏರಿಕೆಯಿಂದಾಗಿ ಈಗಾಗಲೇ ಮಳೆ ಕಾಡುಗಳ ಸುಮಾರು 74 ಜಾತಿಯ ಕಪ್ಪೆಗಳು ನಾಶವಾಗಿವೆ.
– 20 ವರ್ಷದ ಹಿಂದೆ ಆಂಟಾರ್ಟಿಕಾದಲ್ಲಿದ್ದ 320 ಜತೆ ಅಡೆಲಿ ಪೆಂಗ್ವಿನ್ ಪೈಕಿ ಈಗ ಉಳಿದಿರುವುದು 54 ಜೋಡಿ ಮಾತ್ರ. ಕಳೆದ 5 ದಶಕದಲ್ಲಿ ಉಷ್ಣತೆ 5.5 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದ್ದೇ ಇದಕ್ಕೆ ಕಾರಣ.
– ಇವುಗಳ ಜತೆಗೆ ಮಾನವನ ಅತಿಯಾದ ಚಟುವಟಿಕೆ, ಪ್ರಕೃತಿ ಮೇಲಿನ ನಿರಂತರ ದೌರ್ಜನ್ಯಗಳಿಂದ ಜೀವ ವೈವಿಧ್ಯ ಅಪಾಯದಂಚಿನಲ್ಲಿದೆ.