Advertisement

International Cycling ಆಯ್ಕೆಯಾದ ಕನ್ನಡದ ಕುವರಿ ನಂದಾ ಚಿಂಚಖಂಡಿ

08:48 PM Jun 11, 2023 | Team Udayavani |

ರಬಕವಿ-ಬನಹಟ್ಟಿ : ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನಂದಾ ಚಿಂಚಖಂಡಿ ಸಹಿತ ಬರುವ ಜೂ.14 ರಿಂದ 19ವರೆಗೆ ಜರುಗಲಿರುವ ಏಶಿಯನ್ ಟ್ರ‍್ಯಾಕ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ವಿಭಾಗದ 2 ಕಿ.ಮೀ ಪಾಯಿಂಟ್ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ.

Advertisement

ನಾವಲಗಿ ಗ್ರಾಮದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಸುವಂತೆ ಮಾಡಿದ್ದು ಕಳೆದ ನಾಲ್ಕು ವರ್ಷಗಳ ಹಿಂದೆ ಇಕೆಯ ಸಹೋದರಿ ದಾನಮ್ಮಾ ಚಿಂಚಖಂಡಿ ಅಂತರರಾಷ್ಟ್ರೀಯ ಸೈಕ್ಲಿಂಗ್ ಪಟುವಾಗಿ 2018ರಲ್ಲಿ ಮಲೇಶಿಯಾದ ಕೌಲಾಲಾಂಪುರದಲ್ಲಿ ನಡೆದ ಏಶಿಯನ್ ಟ್ರ‍್ಯಾಕ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ವಿಭಾಗದ10 ಕಿ.ಮೀ ಪಾಯಿಂಟ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಅಂತಾರಾಷ್ಟ್ರೀಯ ಮಟ್ಟದ ಪದಕವನ್ನು ಮುಡಿಗೇರಿಸಿಕೊಂಡಿದ್ದರು.

18 ರ ವಯೋಮಿತಿಯಲ್ಲಿ ದೇಶದಿಂದ 5 ಕ್ರೀಡಾಳುಗಳು ಪ್ರತಿನಿಧಿಸಲಿದ್ದು, ರಾಜ್ಯದಿಂದ ಏಕೈಕ ಕ್ರೀಡಾಪಟುವಾಗಿ ನಂದಾ ಚಿಂಚಖಂಡಿ ಆಯ್ಕೆಗೊಂಡಿದ್ದಾಳೆ. ನಂದಾ ಚಿಂಚಖಂಡಿ ಒಕ್ಕಲುತನ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಚನಮಲ್ಲಪ್ಪ ಚಿಂಚಖಂಡಿಯವರ ಮೂರನೇಯ ಮಗಳು. ಸದ್ಯ ಪಿಯು ವ್ಯಾಸಾಂಗದೊಂದಿಗೆ ಪಂಜಾಬ್‌ನ ಪಟಿಯಾಲ್ ಎನ್‌ಇಓಇ ಕಾಲೇಜಿನಲ್ಲಿ 2022-23ನೇ ಸಾಲಿನ ಸೈಕ್ಲಿಂಗ್ ತರಬೇತಿಗೆ ಆಯ್ಕೆಯಾಗಿದ್ದಾರೆ.

ನಂದಾ ಅವರ ಮನೆಯಲ್ಲಿ ಸೈಕ್ಲಿಂಗ್ ಕ್ರೀಡೆಗೆ ಈತಳ ಸಹೋದರಿ ದಾನಮ್ಮಾ ಸ್ಪೂರ್ತಿಯಾಗಿದ್ದು, ಈಗಾಗಲೇ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆದಿರುವದೇ ಸ್ಪೂರ್ತಿಯಾಗಿದೆ ಎನ್ನುತ್ತಾರೆ ನಂದಾ.

2018-19 ರಲ್ಲಿ ಬಾಗಲಕೋಟೆಯಲ್ಲಿ ಜರುಗಿದ11 ನೇ ರಾಜ್ಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ ನಲ್ಲಿ ಮೂರನೇಯ ಸ್ಥಾನ. 2019 ರಲ್ಲಿ 12 ನೇ ಚಾಂಪಿಯನ್‌ಷಿಪ್‌ದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

Advertisement

2021ರಲ್ಲಿ ಜರುಗಿದ 16 ಹಾಗೂ 17 ರ ವಯೋಮಿತಿಯ ಪ್ರತ್ಯೇಕವಾಗಿ ಉತ್ತರಾಖಂಡದಲ್ಲಿ ಜರುಗಿದ ಗುಡ್ಡಗಾಡು ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 2022 ಡಿಸೆಂಬರ್‌ನಲ್ಲಿ ಜರುಗಿದ ಆಸ್ಸಾಂನಲ್ಲಿ ಟ್ರ್ಯಾಕ್ ಗ್ರೂಪ್ ರೇಸ್‌ನಲ್ಲಿ ಚತುರ್ಥ ಸ್ಥಾನ ಪಡೆದಿದ್ದಾರೆ.

ಪ್ರಸಕ್ತ ವರ್ಷ ವಿಜಯಪುರದಲ್ಲಿ ಜರುಗಿದ ಖೇಲೋ ಇಂಡಿಯಾ ಮಹಿಳಾ ರಸ್ತೆ ಸೈಕ್ಲಿಂಗ್ ಲೀಗ್‌ನಲ್ಲಿ 40 ಕಿ.ಮೀ. ರೇಸ್‌ನ್ನು
1 ಗಂಟೆ 28 ನಿಮಿಷ 08.2 ಸೆಕೆಂಡುಗಳಲ್ಲಿ ಕ್ರಮಿಸಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ತನ್ನದಾಗಿಸಿಕೊಂಡು ಅಪ್ರತಿಮ ಸಾಧನೆ ಮಾಡಿದ್ದಾರೆ.

ಅದೇ ರೀತಿಯಾಗಿ ನಂದಾ ಚಿಂಚಕಂಡಿ ರಾಷ್ಟ್ರದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೂ ತಮ್ಮ ತಂಡಕ್ಕೂ ಕೀರ್ತಿಯನ್ನು ತಂದಿದ್ದಾರೆ. ನಂದಾ ಸದ್ಯ ಪಂಜಾಬ್‌ನ ಪಟಿಯಾಲಾದಲ್ಲಿ ನ್ಯಾಶನಲ್ ಸ್ಕೂಲ್ ಅಕಾಡೆಮೆಯಲ್ಲಿ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಬಾಗಲಕೋಟೆಯ ಜಿಲ್ಲಾ ಸೈಕ್ಲಿಂಗ್ ಕ್ರೀಡಾ ನಿಲಯದಲ್ಲಿ ಐದು ವರ್ಷಗಳ ಕಾಲ ತರಬೇತುದಾರರಾದ ಅನಿತಾ ನಿಂಬರಗಿ ಅವರ ಗರಡಿಯಲ್ಲಿ ಪಳಗಿದ ನಂದಾ ಸದ್ಯ ಪಂಜಾಬ್‌ನಲ್ಲಿ ಜೋಗಿಂದರ್ ಹಾಗು ವಿನೋದ್ ಮಲ್ಲಿಕ್ ಅವರ ಹತ್ತಿರ ತರಬೇತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ನಂದಾಳ ಕುಟುಂಬ ಆರ್ಥಿಕವಾಗಿ ಸಬಲವಾಗಿಲ್ಲ. ತಂದೆ ಚನಮಲ್ಲಪ್ಪ ಒಕ್ಕಲುತನವನ್ನು ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಸದ್ಯ ಪಂಜಾಬ್‌ನ ಎನ್‌ಇಓಇ ಕಾಲೇಜಿನವರು ಸೈಕಲ್ ನೀಡಿದ್ದಾರೆ. ಅಲ್ಲಿಂದ ಬಂದ ಮೇಲೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಾದರೆ ಉತ್ತಮ ಗುಣಮಟ್ಟದ ಸೈಕಲ್ ಕೊರತೆ ಇದೆ. ಒಂದು ಉತ್ತಮ ಸೈಕಲ್ ದೊರತರೆ ಇನ್ನಷ್ಟು ಸಾಧನೆಯನ್ನು ಮಾಡಬಹುದಾಗಿದೆ ಎನ್ನುತ್ತಾರೆ ನಂದಾ ಚಿಂಚಖಂಡಿ.

ನಂದಾಳಲ್ಲಿರುವ ಸೈಕ್ಲಿಂಗ್ ಕಲೆಯನ್ನು ಮೆಚ್ಚಿಕೊಂಡ ಪಂಜಾಬ್‌ನ ಪಟಿಯಾಲಾ ನ್ಯಾಶನಲ್ ಕಾಲೇಜಿನವರು ಅವರನ್ನು ತಮ್ಮ ಕಾಲೇಜಿಗೆ ಆಯ್ಕೆ ಮಾಡಿಕೊಂಡಿರುವುದು ಅಭಿಮಾನದ ಸಂಗತಿ ಎನ್ನತ್ತಾರೆ ತರಬೇತುದಾರ್ತಿ ಅನಿತಾ ನಿಂಬರಗಿ.

– ಕಿರಣ ಶ್ರೀಶೈಲ ಆಳಗಿ

Advertisement

Udayavani is now on Telegram. Click here to join our channel and stay updated with the latest news.

Next