Advertisement

ವಿಶ್ವ ಜಾಂಬೂರಿಯ ನೆನಪಿಗಾಗಿ ಬೃಹತ್‌ ಗಾಳಿಪಟ

01:30 AM Dec 25, 2022 | Team Udayavani |

ಮೂಡುಬಿದಿರೆ: ವಿಶ್ವ ಜಾಂಬೂರಿಯ ನೆನಪಿನಲ್ಲಿ ತುಳು ನಾಡಿನ ಸಂಸ್ಕೃತಿ, ಜಾನಪದ ಕಲೆ, ಪರಂಪರೆಯನ್ನು ಬಿಂಬಿಸುವ ಬೃಹತ್‌ ಗಾಳಿಪಟವನ್ನು ಶನಿ ವಾರ ಆಳ್ವಾಸ್‌ ಕಾಲೇಜಿನ ಯಶೋಕಿರಣ ಕಟ್ಟದಲ್ಲಿ ಅನಾವರಣ ಗೊಳಿಸಲಾಯಿತು.

Advertisement

ಟೀಂ ಮಂಗಳೂರಿನ ಕಲಾವಿದರು 1 ತಿಂಗಳ ಶ್ರಮದಲ್ಲಿ ಸುಮಾರು 50 ಅಡಿ ಉದ್ದದ, 16 ಅಡಿ ಅಗಲದ ಗಾಳಿಪಟವನ್ನು ರಚಿಸಿದ್ದಾರೆ. ತುಳುನಾಡಿನ ಜಾನಪದ ಕಲೆ, ಸಂಸ್ಕೃತಿಯನ್ನು ಗಾಳಿಪಟದಲ್ಲಿ ಚಿತ್ರಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಅಂತಿಮ ಸ್ಪರ್ಶ ನೀಡುವ ಕೆಲಸವನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳು ಮಾಡಿದ್ದಾರೆ.

ಜತೆಗೆ ಇತರ ಗಾಳಿಪಟಗಳನ್ನೂ ಮಕ್ಕಳ ಕೈಯಿಂದ ಪ್ರಾತ್ಯಕ್ಷಿಕೆಯಲ್ಲಿ ರಚಿಸಲಾಗಿದ್ದು, ಅವುಗಳನ್ನು ಕಟ್ಟಡದಲ್ಲಿ ಹಾಕಲಾಗಿದೆ. ಕೊಡೆ ಬಟ್ಟೆಯಲ್ಲಿ ಮಾಡಿರುವುದರಿಂದ ಇದನ್ನು ಹಾರಿ ಬಿಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಟ್ಟಡದಲ್ಲಿ ಮೇಲಿನಿಂದ ಕೆಳಕ್ಕೆ ಇಳಿಯಬಿಡಲಾಗಿದೆ.

ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ.ಎಂ. ಮೋಹನ ಆಳ್ವ ಅವರ ನಿರ್ದೇನದಂತೆ ಗಾಳಿಪಟವನ್ನು ವಿಶ್ವ ಜಾಂಬೂರಿಯ ನೆನಪಿಗಾಗಿ ಅನಾವರಣ ಗೊಳಿಸಲಾಗಿದೆ ಎಂದು ಟೀಂ ಮಂಗಳೂರು ತಂಡದ ಕಲಾವಿದರಿಂದ ದಿನೇಶ್‌ ಹೊಳ್ಳ ಅವರು ತಿಳಿಸಿದ್ದಾರೆ.

ವಿಜಯ ಪ್ರಕಾಶ್‌ ಹಾಡಿನ ಮೋಡಿ
ಮೂಡುಬಿದಿರೆ: ಖ್ಯಾತ ಗಾಯಕ ವಿಜಯ ಪ್ರಕಾಶ್‌ ಮತ್ತು ಬಳಗದವರು ಶನಿವಾರ ಜಾಂಬೂರಿ ವೇದಿಕೆಯಲ್ಲಿ ಹಾಡುಗಳಿಂದ ನೆರೆದವರನ್ನು ಮೋಡಿ ಮಾಡಿದರು. ಸುಮಾರು ಎರಡು ತಾಸು ಪ್ರದರ್ಶನ ನೀಡಿದರು. 50 ಸಾವಿರಕ್ಕೂ ಅಧಿಕ ಪ್ರೇಕ್ಷಕರು ನೆರೆದಿದ್ದರು.

Advertisement

ಗೃಹಸಚಿವ ಆರಗ ಜ್ಞಾನೇಂದ್ರ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮೊದಲಾದವರು ಪಾಲ್ಗೊಂಡಿದ್ದರು.

ಜಾಂಬೂರಿಗೆ ಇಂದು ಸಿಎಂ
ಮೂಡುಬಿದಿರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ. 25ರಂದು ಜಾಂಬೂರಿಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4.10ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು 5 ಗಂಟೆಗೆ ವಿದ್ಯಾಗಿರಿಯ ಮುಖ್ಯ ವೇದಿಕೆಯಲ್ಲಿ ಏಕ್‌ ಭಾರತ್‌ ಶ್ರೇಷ್ಟ್ ಭಾರತ್‌, ನಮ್ಮ ಸಂಸ್ಕೃತಿ ಸ್ವತ್ಛ ಸಂಸ್ಕೃತಿ, ಸಂಸ್ಕೃತಿಯಿಂದ ಯುವ ಜನರ ಒಗ್ಗಟ್ಟು ಕಾರ್ಯಕ್ರಮಗಳ ಅನಾವರಣ ಮಾಡಲಿದ್ದಾರೆ. ರಾತ್ರಿ 7ಕ್ಕೆ ವಿಮಾನ ನಿಲ್ದಾಣಕ್ಕೆ ತೆರಳಿ, 7.50ರ ವಿಮಾನದಲ್ಲಿ ಬೆಳಗಾವಿಗೆ ವಾಪಸಾಗಲಿದ್ದಾರೆ.

ವಿದ್ಯಾಗಿರಿಯಲ್ಲಿ ವಿದ್ಯಾರ್ಥಿ ಸಾಗರ
ಮೂಡುಬಿದಿರೆ: ಶಿಸ್ತಿನ ಸಿಪಾಯಿಗಳ ಅಪೂರ್ವ ಸಂಗಮ, ಸಾಂಸ್ಕೃತಿಕ, ಸಾಹಸಿಕ ವೈಭವದಿಂದ ಕಂಗೊಳಿಸುತ್ತಿರುವ ವಿದ್ಯಾಗಿರಿಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಾಗರೋ ಪಾದಿಯಾಗಿ ಹರಿದು ಬರುತ್ತಿದ್ದು ಎಲ್ಲ ರಸ್ತೆಗಳು ಮೂಡುಬಿದಿರೆ ಯತ್ತ ಮುಖ ಮಾಡಿದಂತಿವೆ.

ಈಗಾಗಲೇ ಸಾವಿರಾರು ಮಂದಿ ಸ್ಕೌಟ್ಸ್‌ ಗೈಡ್ಸ್‌, ರೇಂಜರ್‌, ರೋವರ್ಸ್‌ ಗಳ ಆಗಮನದಿಂದ ಕಳೆಗಟ್ಟಿರುವ ಮೂಡುಬಿದಿರೆಗೆ ಶನಿವಾರ ರಾಜ್ಯದ ನಾನಾ ಜಿಲ್ಲೆಗಳಿಂದ ಸಾವಿರಾರು ಮಂದಿ ವಿದ್ಯಾರ್ಥಿಗಳು ಧಾವಿಸಿದರು. ಕಳೆದೆರಡು ದಿನಗಳಲ್ಲಿ ರಾಜ್ಯದ ವಿವಿಧೆಡೆಗಳಿಂದ 500ಕ್ಕೂ ಅಧಿಕ ಬಸ್‌ ಗಳಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಕ್ರಿಸ್ಮಸ್‌ ರಜೆಯೂ ಇರುವುದರಿಂದ ಡಿ. 27ರ ವರೆಗೂ ಅಪಾರ ಜನಸಂದಣಿ ನಿರೀಕ್ಷಿಸಲಾಗಿದೆ.

2 ಲಕ್ಷ ಜನರಿಗೆ ಸಿದ್ಧತೆ
ಶನಿವಾರ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಭೋಜನ ಸ್ವೀಕರಿಸಿದ್ದಾರೆ. ರವಿವಾರ ಈ ಸಂಖ್ಯೆ ದುಪ್ಪಟ್ಟಾಗುವ ನಿರೀಕ್ಷೆಯಿದ್ದು ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಪೊಲೀಸರು ನಿರಾಳ
ದೇಶ ವಿದೇಶಗಳ ವಿದ್ಯಾರ್ಥಿಗಳು ಸೇರಿದಂತೆ ಪ್ರತಿನಿತ್ಯ ಲಕ್ಷಾಂತರ ಮಂದಿ ಸೇರುತ್ತಿದ್ದರೂ ಪೊಲೀಸರುಒತ್ತಡಕ್ಕೊಳಗಾಗದೆ ನಿರಾಳರಾಗಿ ದ್ದಾರೆ.ಇದಕ್ಕೆ ಕಾರಣ ಸ್ಕೌಟ್ಸ್‌ ಗೈಡ್ಸ್‌ ಶಿಸ್ತಿನ ವಿದ್ಯಾರ್ಥಿ, ಅಧಿ ಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next