Advertisement

ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಕ್ರೀಡಾಂಗಣ ಉದ್ಘಾಟನೆ ಇಂದು​​​​​​​

06:05 AM Mar 03, 2018 | Team Udayavani |

ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಅರಮನೆ ವಾರ್ಡ್‌ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಸುಮಾರು 9.21
ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಂತಾ ರಾಷ್ಟ್ರೀಯ ಗುಣಮಟ್ಟದ ಬಾಸ್ಕೆಟ್‌ ಬಾಲ್‌ ಒಳಾಂಗಣ ಕ್ರೀಡಾಂಗಣ ಉದ್ಘಾಟನೆಗೆ ಸಜ್ಜುಗೊಂಡಿದೆ.

Advertisement

ಶನಿವಾರ ಸಂಜೆ 6 ಗಂಟೆಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮತ್ತು ಬೆಂಗಳೂರು ನಗರಾಭಿವೃದಿಟಛಿ ಸಚಿವ ಕೆ.ಜೆ.ಜಾರ್ಜ್‌ ಕ್ರೀಡಾಂಗಣ ಉದ್ಘಾಟಿಸಲಿದ್ದು, ಮೇಯರ್‌ ಸಂಪತ್‌ ರಾಜ್‌ ಪಾಲ್ಗೊಳ್ಳುವರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಮಲ್ಲೇಶ್ವರ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಬಾಸ್ಕೆಟ್‌ ಬಾಲ್‌ ಒಳಾಂಗಣ ಕ್ರೀಡಾಂಗಣ ನಿರ್ಮಾಣ 2009-10ನೇ ಸಾಲಿನಲ್ಲಿ ಆರಂಭವಾಗಿದ್ದರೂ ಗುತ್ತಿಗೆದಾರರ ಅಸಹಾಕಾರದಿಂದ ಆರು ವರ್ಷ ಕಾಲ ಕಾಮಗಾರಿ ಸ್ಥಗಿತಗೊಂಡಿದ್ದು, ನಂತರ ಬೇರೆ ಗುತ್ತಿಗೆದಾರರ ಮೂಲಕ ಕಾಮಗಾರಿ ನಿರ್ವಹಿಸಿ ಇದೀಗ ಅಂತಿಮಗೊಳಿಸಲಾಗಿದೆ. ಕಾಮಗಾರಿ ವಿಳಂಬದಿಂದ ಒಟ್ಟು ವೆಚ್ಚ 2 ಕೋಟಿ ರೂ. ಹೆಚ್ಚುವರಿಯಾಗಿದೆ ಎಂದು ಹೇಳಿದರು.

ಒಟ್ಟು 1874 ಚದರ ಮೀ. ವಿಸ್ತೀರ್ಣ: ಈ ಒಳಾಂಗಣ ಒಟ್ಟು 1874 ಚದರ ಮೀ. ವಿಸ್ತೀರ್ಣ ಹೊಂದಿದೆ.ಕ್ರೀಡಾಂಗಣದ ಬೇಸ್‌ಮೆಂಟ್‌ ಫ್ಲೋರ್‌ 920.80 ಚದರ ಮೀಟರ್‌ ಇದ್ದು, ನೆಲಮಹಡಿ 1320 ಚದರ ಮೀಟರ್‌ ಇದೆ. ಕ್ರೀಡಾಂಗಣದ ಮೇಲ್ಛಾವಣಿಗೆ ಕಾಲ್‌ಜಿಪ್‌ ರೂಫ್ ಅಳವಡಿಸಲಾಗಿದ್ದು, ಇದು ವಾಟರ್‌ ಪ್ರೂಫ್ ಆಗಿದೆ. ಬೇಸ್‌ ಮೆಂಟ್‌ ಫ್ಲೋರ್‌ನಲ್ಲಿ ಆಟಗಾರರಿಗೆ ವಾರ್ಮ್ಅಪ್‌ ಆಗಲು ಜಾಗಿಂಗ್‌ ಟ್ರ್ಯಾಕ್‌, ಜಿಮ್‌ ಅಳವಡಿಕೆಗೆ ಸ್ಥಳಾವಕಾಶ, ಬಟ್ಟೆ ಬದಲಿಸುವ ಸ್ಥಳ ಮತ್ತು ಶೌಚಾಲಯವಿದೆ. ನೆಲಮಹಡಿಯಲ್ಲಿ ಬಾಸ್ಕೆಟ್‌ಬಾಲ್‌ ಕ್ರೀಡಾಂಗಣವಿದ್ದು,ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ನಡೆಸುವ ಗುಣಮಟ್ಟ ಹೊಂದಿದೆ.

ಏಕಕಾಲದಲ್ಲಿ 800 ಪ್ರೇಕ್ಷಕರು ಕುಳಿತು ಆಟ ನೋಡಲು ಅವಕಾಶ ಕಲ್ಪಿಸಲಾಗಿದೆ. ಒಳಾಂಗಣ ಕ್ರೀಡಾಂಗಣಕ್ಕೆ ಹಗಲು
ನೈಸರ್ಗಿಕ ಬೆಳಕು ಬರಲು ಪಾಲಿ ಕಾಬೋìನೈಟ್‌ ಛಾವಣಿ ಅಳವಡಿಸಲಾಗಿದ್ದು, ರಾತ್ರಿ ವೇಳೆ ಎಲ್‌ಇಡಿ ಲೈಟ್‌ಗಳ ಬೆಳಕಿನ ವ್ಯವಸ್ಥೆ ಇದೆ. ಪಾಲಿಕೆ ಸದಸ್ಯರಾದ ಸುಮಂಗಲ, ಮಂಜುನಾಥ ರಾಜು, ಬಿಬಿಎಂಪಿ ಅಧಿಕಾರಿಗಳಾದ ವೆಂಕಟೇಶ್‌,ನರಸಿಂಹಮೂರ್ತಿ, ಬೀಗಲ್ಸ್‌ ಬಾಸ್ಕೆಟ್‌ ಬಾಲ್‌ ಸದಸ್ಯ ಕೇಶವ್‌ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next