Advertisement

5ಜಿ ತರಂಗಗಳ ಎಫೆಕ್ಟ್: ಅಮೆರಿಕದಲ್ಲಿ ನೂರಾರು ವಿಮಾನಗಳ ಸಂಚಾರ ರದ್ದು

11:39 AM Jan 20, 2022 | Team Udayavani |

ಅಮೆರಿಕದಲ್ಲಿ ವೈಮಾನಿಕ ಸೇವೆ ನೀಡುವ ಎಲ್ಲಾ ವಿಮಾನಗಳಲ್ಲಿ 5ಜಿ ಮೊಬೈಲ್‌ ತಂತ್ರಜ್ಞಾನವನ್ನು ಬಳಸಲು ಅಲ್ಲಿನ ನಾಗರಿಕ ವಿಮಾನ ಸೇವಾ ಇಲಾಖೆ (ಎಫ್ಎಎ) ಒಪ್ಪಿಗೆ ನೀಡಿದೆ. ಇದರಿಂದಾಗಿ ವಿಮಾನಗಳಲ್ಲಿನ ಆಂತರಿಕ ತಂತ್ರಜ್ಞಾನಕ್ಕೆ ಅಡಚಣೆ ತಂದೊಡ್ಡಿದೆ ಮತ್ತು ಅಮೆರಿಕದಿಂದ ಬರುವ-ಹೋಗುವ ವಿಮಾನ ಸಂಚಾರಗಳನ್ನು ಏರ್‌ ಇಂಡಿಯಾ ಸೇರಿದಂತೆ ಜಗತ್ತಿನ ಎಲ್ಲಾ ವಿಮಾನ ಸೇವಾ ಕಂಪನಿಗಳು ಸ್ಥಗಿತಗೊಳಿಸಿವೆ.

Advertisement

“5ಜಿ’ ತರಂಗಗಳ ವಿಶೇಷತೆ
ಹೈ ಸ್ಪೀಡ್‌ ಇಂಟರ್ನೆಟ್‌ ಹಾಗೂ ದೂರವಾಣಿ ಸೇವೆಗಳನ್ನು ನಿಸ್ತಂತು (ವೈರ್‌ಲೆಸ್‌) ಮಾದರಿಯಲ್ಲಿ ನೀಡುವ ತಂತ್ರಜ್ಞಾನವಿದು. ಇವು ಮೈಕ್ರೋವೇವ್‌ ಮಾದರಿಯ ಸೂಕ್ಷ್ಮಾತಿಸೂಕ್ಷ್ಮ ಆದರೆ, ಬಲು ಶಕ್ತಿಶಾಲಿಯಾದ ತರಂಗಗಳು. ಇವನ್ನು ಸಿ-ಬ್ಯಾಂಡ್‌ ತರಂಗಗಳೆಂದು ವರ್ಗೀಕರಿಸಲಾಗಿದೆ.

5ಜಿ ತರಂಗಗಳಿಂದ ತೊಂದರೆಯೇನು?
ಎಫ್ಎಎ ನೀಡಿರುವ ವರದಿಯ ಪ್ರಕಾರ, 5ಜಿ ತರಂಗಗಳು ವಿಮಾನಗಳ ನೇವಿಗೇಷನ್‌ ವ್ಯವಸ್ಥೆ ಹಾಗೂ ಬ್ರೇಕಿಂಗ್‌ ವ್ಯವಸ್ಥೆಗೆ ತೊಂದರೆ ಉಂಟು ಮಾಡುತ್ತವೆ. ಇದರಿಂದ, ವಿಮಾನಗಳು ದಿಕ್ಕು ತಪ್ಪುವುದು ಒಂದು ತೊಂದರೆಯಾದರೆ, ಅವುಗಳ ಲ್ಯಾಂಡಿಂಗ್‌ಗೂ ಸಮಸ್ಯೆಯಾಗುತ್ತದೆ. ಅಂದರೆ, ಲ್ಯಾಂಡಿಂಗ್‌ ವೇಳೆ ರನ್‌ವೇನಲ್ಲಿ ಓಡುವ ವಿಮಾನಗಳ ಬ್ರೇಕ್‌ಗಳು 5ಜಿ ತರಂಗಗಳ ಅಡಚಣೆಯಿಂದಾಗಿ ನಿಷ್ಕ್ರಿಯವಾಗುತ್ತವೆ.

ಏರ್‌ ಇಂಡಿಯಾ ಸೇವೆಗಳು ರದ್ದು
5ಜಿ ತರಂಗಗಳ ಸಮಸ್ಯೆ ಹಿನ್ನೆಲೆಯಲ್ಲಿ ಜ. 19ರಿಂದ ಅಮೆರಿಕ-ಭಾರತ ನಡುವಿನ ವೈಮಾನಿಕ ಸೇವೆಯನ್ನು ರದ್ದುಗೊಳಿಸುತ್ತಿರುವುದಾಗಿ ಏರ್‌ ಇಂಡಿಯಾ ಪ್ರಕಟಿಸಿದೆ.

ದೆಹಲಿ-ನ್ಯೂಯಾರ್ಕ್‌-ದೆಹಲಿ, ದೆಹಲಿ- ಸ್ಯಾನ್‌ಫ್ರಾನ್ಸಿಸ್ಕೋ- ದೆಹಲಿ, ದೆಹಲಿ- ಚಿಕಾಗೋ- ದೆಹಲಿ ಹಾಗೂ ಮುಂಬೈ- ನೆವಾರ್ಕ್‌-ಮುಂಬೈ ಮಾರ್ಗಗಳ ಏರ್‌ಇಂಡಿಯಾ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next