Advertisement

NASA; ಬಾಹ್ಯಾಕಾಶದಲ್ಲಿ ತಪ್ಪಿದ ಅಮೆರಿಕ, ರಷ್ಯಾ ಗಗನನೌಕೆಗಳ ಢಿಕ್ಕಿ

02:09 AM Apr 12, 2024 | Team Udayavani |

ವಾಷಿಂಗ್ಟನ್‌: ಬಾಹ್ಯಾಕಾಶದಲ್ಲಿ ಅಮೆರಿಕ ಉಪಗ್ರಹ ವೊಂದು ಕೂದಲೆಳೆ ಅಂತರದಲ್ಲಿ ರಷ್ಯಾದ ಗಗನನೌಕೆ ಯೊಂದಿಗೆ ಢಿಕ್ಕಿ ಹೊಡೆಯುವುದು ತಪ್ಪಿದೆ. ಈ ಕುರಿತು ನಾಸಾದ ಡೆಪ್ಯುಟಿ ಅಡ್ಮಿನ್‌ಸ್ಟ್ರೇಟರ್‌ ಕರ್ನಲ್‌ ಪಾಮ್‌ ಮೆಲ್ರಾಯ್‌ ಅವರ ಹೇಳಿಕೆ ಉಲ್ಲೇಖೀಸಿ ಮಾಧ್ಯಮಗಳು ವರದಿ ಮಾಡಿವೆ.

Advertisement

ಅಮೆರಿಕದ ಕೊಲೊರಾಡೋದ ಸ್ಪೇಷ್‌ ಫೌಂಡೇಶನ್‌ನ ಸ್ಪೇಸ್‌ ಸಿಂಪೋಸಿಯಮ್‌ನಲ್ಲಿ ಮಾತನಾಡಿದ ಮೆಲ್ರಾಯ್‌, ಫೆ.28ರಂದು ಕೇವಲ 10 ಮೀಟರ್‌ ಅಂತರದಲ್ಲಿ ನಾಸಾದ ಗಗನನೌಕೆ ಟೈಮ್‌ ಮತ್ತು ರಷ್ಯಾದ ಉಪ ಗ್ರಹ ಎದುರುಬದುರು ಬಂದಿದ್ದವು. ಎಚ್ಚರಿಕೆಯ ಹೊರತಾಗಿಯೂ ಉಪಗ್ರಹವನ್ನು ತಿರುಗಿಸದಿರುವುದು ಆತಂಕಕ್ಕೆ ಕಾರಣವಾಗಿತ್ತು. ಒಂದೊಮ್ಮೆ ಢಿಕ್ಕಿಯಾಗಿದ್ದರೆ, ಇಡೀ ಮನುಕುಲವೇ ಅಪಾಯಕ್ಕೆ ಸಿಲುಕುತ್ತಿತ್ತು ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next