Advertisement

Vistara Airlines: ಬೆಂಗಳೂರಿನಿಂದ 11 ಸೇರಿ ವಿಸ್ತಾರದ 38 ವಿಮಾನ ರದ್ದು

11:13 PM Apr 02, 2024 | Team Udayavani |

ಹೊಸದಿಲ್ಲಿ: ಸಿಬಂದಿ ಕೊರತೆ ಎದುರಿಸುತ್ತಿರುವ ವಿಸ್ತಾರ ಏರ್‌ಲೈನ್ಸ್‌ ಬೆಂಗಳೂರಿನಿಂದ ಹಾರಬೇಕಿದ್ದ 11 ವಿಮಾನಗಳು ಸೇರಿದಂತೆ ದೇಶದ ಪ್ರಮುಖ ನಗರಗಳ 38 ವಿಮಾನಗಳನ್ನು ಮಂಗಳವಾರ ರದ್ದು ಮಾಡಿದೆ. ಈ ನಡೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಆಕ್ಷೇಪ ಮಾಡಿದೆ. ಜತೆಗೆ ಪ್ರತಿ ದಿನ ವಿಮಾನಗಳ ಸಂಚಾರ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

Advertisement

ಈವರೆಗೆ ವಿಸ್ತಾರದ 50ಕ್ಕೂ ವಿಮಾನಗಳು ಹಾರಾಟವನ್ನು ರದ್ದುಗೊಳಿಸಿದ್ದು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಪೈಲಟ್‌ಗಳ ಕೊರತೆಯಿಂದ ಹೀಗಾಗಿದ್ದು, ಶೀಘ್ರವೇ ಇದನ್ನು ಸರಿಪಡಿಸುವುದಾಗಿ ವಿಮಾನಯಾನ ಸಂಸ್ಥೆ ಹೇಳಿತ್ತು.

ಮಂಗಳವಾರ ಬೆಂಗಳೂರಿನಿಂದ ಹಾರಾಟ ನಡೆಸಲು ನಿಗದಿಯಾಗಿದ್ದ 11, ಮುಂಬಯಿಯ 15, ದಿಲ್ಲಿಯಿಂದ 12 ವಿಮಾನಗಳನ್ನು ವಿಸ್ತಾರ ಸಂಸ್ಥೆ ರದ್ದುಗೊಳಿಸಿದೆ. ನಮ್ಮ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ನಾವು ನಿರ್ಧರಿಸಿದ್ದೇವೆ. ಈ ಮೂಲಕ ಸಂಪರ್ಕವನ್ನು ಸಾಧಿಸಲು ಬಯಸಿದ್ದೇವೆ ಎಂದು ಸಂಸ್ಥೆ  ಹೇಳಿದೆ. ವಿಸ್ತಾರ ಸುಮಾರು 1 ತಿಂಗಳಿನಿಂದ ಪೈಲಟ್‌ಗಳ ಸಮಸ್ಯೆ ಎದುರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next