“ಒಳ್ಳೆಯವನಾಗಬೇಕು’, “ಸುಳ್ಳು ಹೇಳ ಬಾರದು’, “ಕದಿಯಬಾರದು’… ನಾವೆಲ್ಲರೂ ಈ ಹಿತವಚನಗಳನ್ನು ಕೇಳುತ್ತ ಬೆಳೆದವರು. ಈ ಬುದ್ಧಿ ಮಾತುಗಳನ್ನು ಕೇಳಿರದ ಮಗು ಈ ದೇಶದಲ್ಲಿ ಇರಲಿಕ್ಕಿಲ್ಲ. ಆದರೆ ಸತ್ಯವನ್ನೇ ಏಕೆ ಹೇಳಬೇಕು, ಪ್ರಾಮಾಣಿಕನಾಗಿರುವುದರಿಂದ ಏನು ಒಳಿತಾಗುತ್ತದೆ ಎಂಬುದನ್ನು ನಮ್ಮ ಹಿರಿಯರೂ ನಮಗೆ ಹೇಳಲಿಲ್ಲ; ನಾವೂ ನಮ್ಮ ಮಕ್ಕಳಿಗೆ ತಿಳಿಸುವುದಿಲ್ಲ. ಮಕ್ಕಳಿಗೆ ಬರೇ ಉಪದೇಶಿಸುವುದರಿಂದ ಪ್ರಯೋಜನವಿಲ್ಲ; ಕದಿಯಬಾರದು ಏಕೆ ಎನ್ನುವುದನ್ನು ತೋರಿಸಿಕೊಡಬೇಕು, ಕದಿಯದೆ ಜೀವಿಸುವುದು ಹೇಗೆ ಎಂಬುದನ್ನು ತಿಳಿಸಬೇಕು ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.
ಮನಸ್ಸು ಅಡ್ಡದಾರಿಗಳನ್ನು ಹಿಡಿಯ ದಂತೆ ಕಡಿವಾಣ ಹಾಕಿ ತಡೆದು ನಿಲ್ಲಿಸುವು ದನ್ನು ನಮ್ಮ ಮಕ್ಕಳಿಗೆ ಹೇಳಿಕೊಟ್ಟರೆ ಮಾತ್ರ ನಾವು ಅವರಿಗೆ ನಿಜವಾಗಿ ಸಹಾಯ ಮಾಡಿ ದಂತಾಗುತ್ತದೆ. ನಮ್ಮ ಅಂತ ರಂಗ ಮತ್ತು ಬಹಿರಂಗದ ಎಲ್ಲ ಕ್ರಿಯೆಗಳು ನಡೆಯು ವುದು ಮನಸ್ಸು ನಿರ್ದಿಷ್ಟ ಅಂಗಾಂಗಗಳ ಜತೆಗೆ ಸೇರಿ ಕೆಲಸ ಮಾಡಿದಾಗ. ಗೊತ್ತಿಧ್ದೋ ಗೊತ್ತಿಲ್ಲದೆಯೋ ಮನಸ್ಸು ಅಂಗಾಂಗ ಗಳ ಜತೆ ಸೇರಿ ಕೆಲಸ ಮಾಡುತ್ತದೆ. ಇದರಿಂದಾಗಿಯೇ ಮನುಷ್ಯರು “ಕೆಟ್ಟು ಹೋದ ಮೇಲೆ ಚಿಂತಿಸು ವಂತೆ’ ಆಗುತ್ತದೆ. ಮನಸ್ಸು ನಿಯಂತ್ರಣದಲ್ಲಿ ದ್ದರೆ ಅಂಥ ಸ್ಥಿತಿ ಉಂಟಾಗುವುದಿಲ್ಲ. ನಮ್ಮ ಮಕ್ಕಳಿಗೆ ಹೇಳಿ ಕೊಡಬೇಕಾದ್ದು ಇದನ್ನು.
ಸತ್ಯ, ಪರಿಶುದ್ಧಿ ಮತ್ತು ನಿಸ್ವಾರ್ಥ – ಇವು ಮೂರು ಯಾರಲ್ಲಿ ಜತೆಗೂಡಿ ಇವೆಯೋ ಅಂಥವರನ್ನು ಈ ಸೃಷ್ಟಿಯಲ್ಲಿ ಯಾರು ಕೂಡ ಮಣಿಸುವುದು ಅಸಾಧ್ಯ. ಹಾಗಾಗಿ ಈ ಮೂರು ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳೋಣ. ಕನ್ನಡಿಯ ಮೇಲೆ ಧೂಳು ತುಂಬಿದ್ದರೆ ನಮ್ಮ ಪ್ರತಿಬಿಂಬ ಚೆನ್ನಾಗಿ ಕಾಣಿಸುವುದಿಲ್ಲ. ಅಜ್ಞಾನ ಮತ್ತು ಕೆಡುಕು ನಮ್ಮ ಮನಸ್ಸಿನ ಕನ್ನಡಿಯ ಮೇಲೆ ಕುಳಿತಿದ್ದರೆ ನಮ್ಮೊಳ ಗಿರುವ ಪರಮಾತ್ಮ ಹೊಳೆದು ಕಾಣುವುದಿಲ್ಲ. ನಾವು ಪರಿಶುದ್ಧರಾಗಿರಬೇಕು ಮತ್ತು ನಮ್ಮ ಬಳಿಗೆ ಬರುವ ಪ್ರತಿಯೊಬ್ಬರಿಗೂ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನೆರವಾಗಬೇಕು. ಇದನ್ನೇ ಉತ್ತಮ ಕರ್ಮ ಎಂದು ಹೇಳು ವುದು. ಇದರಿಂದ ಚಿತ್ತಶುದ್ಧಿ ಸಾಧ್ಯವಾಗು ತ್ತದೆ. ಆಗ ಪ್ರತಿಯೊಬ್ಬರಲ್ಲಿಯೂ ನೆಲೆಸಿ ರುವ ಪರಮಾತ್ಮ ಪ್ರಜ್ವಲಿಸತೊಡಗುತ್ತಾನೆ.
ಭಾರತದ ಯಾವುದೋ ಹಳ್ಳಿ ಮೂಲೆಯ ಅನಕ್ಷರಸ್ಥ ವೃದ್ಧನನ್ನು ನೋಡಿ. ಬದುಕಿನ ಬಗ್ಗೆ ಪ್ರಶ್ನಿಸಿದರೆ “ದೇವರು ಇಟ್ಟ ಹಾಗಾಗುತ್ತದೆ’ ಎನ್ನುತ್ತಾನೆ. ಹಳ್ಳಿಯ ಅಜ್ಜಿಯನ್ನು ಮಾತನಾಡಿಸಿ, “ಎಲ್ಲವೂ ಹಣೆಬರಹ’ ಎಂದುತ್ತರಿಸುತ್ತಾರೆ. ಅದು ಭಾರತೀಯರ ಬದುಕಿನಲ್ಲಿ ಅಧ್ಯಾತ್ಮ ಹಾಸು ಹೊಕ್ಕಾಗಿರುವ ಬಗೆ. ಆದರೆ ಬದುಕು ಬದಲಾಗುತ್ತ ಬಂದಂತೆ ನಮ್ಮ ಚಿಂತನೆಯ ಈ ಮೂಲ ಸ್ವರೂಪ ನಷ್ಟವಾಗುತ್ತ ಬರುತ್ತಿದೆ. ಜೀವನದಲ್ಲಿ ನಾವು ದಿಕ್ಕು ಕೆಡುವುದಕ್ಕೆ ಕಾರಣ ಇದುವೇ. ಆಧ್ಯಾತ್ಮಿಕ, ಪಾರಮಾರ್ಥಿಕ ಜ್ಞಾನದಿಂದ ಮಾತ್ರ ನಮ್ಮ ಎಲ್ಲ ದುರಿತಗಳು, ಸಂಕಷ್ಟಗಳು, ದುಃಖ- ದುಮ್ಮಾನಗಳು ಇಲ್ಲವಾಗಲು ಸಾಧ್ಯ.
ತನ್ನ ಒಳಗನ್ನು ಹುಡುಕಿ ಅರಿತುಕೊಳ್ಳು ವುದು ಭಾರತೀಯ ಜೀವನ ದರ್ಶನದ ಅವಿಭಾಜ್ಯ ಅಂಗ. ಇದು ಭಾರತೀಯರ ರಕ್ತದಲ್ಲಿಯೇ ಇರುವ ಗುಣ. ನಾವು ಬಹಿ ರಂಗಕ್ಕಿಂತ ಹೆಚ್ಚು ಅಂತರಂಗವನ್ನು ತಿಳಿದು ಕೊಳ್ಳುವ ಆಸಕ್ತಿಯುಳ್ಳವರು. ಆಧ್ಯಾತ್ಮಿಕ, ಪಾರಮಾರ್ಥಿಕ ಜ್ಞಾನದ ಮೊಳಕೆ ಇದು. ಇದನ್ನು ನಾವು ಪೋಷಿಸಬೇಕು, ಬೆಳೆಸ ಬೇಕು. ನಮ್ಮ ಮಕ್ಕಳ ಮೂಲಕ ಅದು ಹೆಮ್ಮರವಾಗಬೇಕು.
(ಸಂಗ್ರಹ)