Advertisement

ರಾಜ್ಯದಲ್ಲಿ ಮಧ್ಯಂತರ ಚುನಾವಣೆ: ಕೋಡಿಮಠ ಶ್ರೀ

11:38 PM Jul 01, 2019 | Team Udayavani |

ದಾವಣಗೆರೆ: ಶಾಸಕರಾದ ಆನಂದ್‌ಸಿಂಗ್‌, ರಮೇಶ್‌ ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಹಾರನಹಳ್ಳಿ ಕೋಡಿಮಠದ ಡಾ| ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು “ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಬಹುದು’ ಎಂದು ಭವಿಷ್ಯ ನುಡಿದಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಇಲ್ಲವೇ 18 ತಿಂಗಳಲ್ಲಿ ಮತ್ತೆ ಮತ ಕೇಳಬೇಕಾಗುತ್ತದೆ ಎಂಬುದಾಗಿ ಚುನಾವಣಾ ಪೂರ್ವದಲ್ಲೇ ದೆಹಲಿಯಲ್ಲಿ ಹೇಳಿದ್ದೆವು. ಈಗಲೂ ಅದೇ ಹೇಳುತ್ತಿದ್ದೇವೆ ಎಂದರು.

“ಬಿತ್ತಿದ ಬೆಳೆಸು… ಪರರ ಕೊಯ್ದಾರು… ಅಂದರೆ ಬಿತ್ತಿದ ಫಲ ಒಂದು, ಫಸಲು ಇನ್ನೊಂದು..’ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ.

ಮಧ್ಯಂತರ ಚುನಾವಣೆ ಬಂದರೂ ಬರಬಹುದು ಎನ್ನುವುದನ್ನು ಪರೋಕ್ಷವಾಗಿ ಹೇಳಿದರು. ರಾಜ್ಯದಲ್ಲಿ ಮುಂಗಾರು ತಡವಾಗಿದೆ. ಆದರೆ, ಜನರಿಗೆ ಯಾವುದೇ ತೊಂದರೆಯಿಲ್ಲ. ಉತ್ತಮ ಮಳೆ ಆಗುತ್ತದೆ ಎಂದು ಶ್ರೀಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next