ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣದಲ್ಲಿ ಸಂತ್ರಸ್ತ ಯುವತಿ ಹೈಕೋರ್ಟ್‌ಗೆ ಹೊಸದಾಗಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯಲ್ಲಿ ತನ್ನನ್ನೂ ವಾದಿಯಾಗಿಸುವಂತೆ ಕೋರಿ ಯುವತಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು. ಯುವತಿ ಪರ ಹಾಜರಾದ ಸುಪ್ರೀಂಕೋರ್ಟ್‌ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಯುವತಿ ಕೊಟ್ಟಿರುವ ದೂರುಮುಕ್ತಾಯಗೊಳಿಸುವ ಸಾಧ್ಯತೆಯಿದೆ. ಹೈಕೋರ್ಟ್ ಮೇಲ್ವಿಚಾರಣೆಯಲ್ಲಿತನಿಖೆ ನಡೆಯುತ್ತಿರುವಾಗ ಅದನ್ನು ಮುಕ್ತಾಯಗೊಳಿಸಬಾರದು ಎಂದರು.
ಇದನ್ನೂ ಓದಿ:ಗೊಂದಲ ದಿಲ್ಲಿಗೆ ವರ್ಗ : ವರಿಷ್ಠರಿಗೆ ವಾಸ್ತವ ವರದಿ ಸಲ್ಲಿಸಲಿರುವ ಅರುಣ್ ಸಿಂಗ್
ಅದಕ್ಕೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಯುವತಿ ಬರೆದಿದ್ದ ಪತ್ರ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಅಷ್ಟರಲ್ಲಿ ಯುವತಿ ಏಕಸದಸ್ಯ ನ್ಯಾಯಪೀಠದ ಮುಂದೆ ತನಿಖೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲಿ ವಿಭಾಗೀಯ ನ್ಯಾಯಪೀಠದ ಮುಂದಿರುವ ಅಂಶಗಳನ್ನು ಮರೆ ಮಾಚಿದ್ದಾರೆ
ಎಂದರು. ಅದಕ್ಕೆ ಉತ್ತರಿಸಿದ ಯುವತಿ ಪರ ವಕೀಲರು, ಯುವತಿ ಎಸ್‌ಐಟಿ ತನಿಖೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ, ಆ ಅರ್ಜಿಯನ್ನೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿಗೆ ವಿಚಾರಣೆ ನಡೆಸಲು ಅಭ್ಯಂತರವೇನೂ ಇಲ್ಲ ಎಂದರು.
ಕೊನೆಗೆ ನ್ಯಾಯಪೀಠ, ಜಂಟಿ ಪೊಲೀಸ್ ಆಯುಕ್ತರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ತನಿಖಾ ಪ್ರಗತಿ ವರದಿ ಪರಿಶೀಲಿಸಿತು. ಬಳಿಕ, ತನಿಖೆ ಇನ್ನೂ ಮುಂದುವರಿದಿರುವುದಾಗಿ ವರದಿಯಲ್ಲಿ ಮಾಹಿತಿ ನೀಡಲಾಗಿದೆ. ಎಸ್‌ಐಟಿ ಮುಖ್ಯಸ್ಥರ ಸಮ್ಮತಿ ಮೇರೆಗೆ ಜಂಟಿ ಪೊಲೀಸ್ ಆಯುಕ್ತರ ಸಹಿಯೊಂದಿಗೆ ತನಿಖಾ ವರದಿ ಸಲ್ಲಿಸಲಾಗಿದೆ. ಆ ವರದಿಯನ್ನು ಮತ್ತೆ ಮುಚ್ಚಿದ ಲಕೋಟೆಯಲ್ಲಿಡಲು ಸೂಚನೆ ನೀಡಿದ ನ್ಯಾಯ ಪೀಠ ವಿಚಾರಣೆಯನ್ನು ಜೂ.23ಕ್ಕೆ ಮುಂದೂಡಿತು