Advertisement

ಶೌಚಾಲಯದಲ್ಲಿ ತೂಗು ಹಾಕಲ್ಪಟ್ಟಿದ್ದ ಮೋನಾಲಿಸಾ

09:14 AM May 03, 2019 | Hari Prasad |

ನೋಟದಿಂದ ತಪ್ಪಿಸಿಕೊಂಡ ಇತಿಹಾಸದ ಕುತೂಹಲಕಾರಿ ತುಣುಕುಗಳಿಗೆ ಇಲ್ಲೊಂದು ಪುಟ್ಟ ಜಾಗ

Advertisement

ಜಗದ್ವಿಖ್ಯಾತ ಪೇಂಟಿಂಗ್‌ಗಳಲ್ಲಿ ಚಿರಪರಿಚಿತವಾದುದು ‘ಮೋನಾಲಿಸಾ’. ನಮ್ಮ ಸಿನಿಮಾಗಳಲ್ಲಿ ಮೋನಾಲಿಸಾಳ ಮಂದಹಾಸದ ಕುರಿತ ವರ್ಣನೆಗಳು ಅದೆಷ್ಟು ಬಾರಿ ಬಂದಿವೆಯೋ. ಇಂತಿಪ್ಪ ಪ್ರಸಿದ್ಧ ಚಿತ್ರ, ಈಗ ಇರೋದು ಪ್ಯಾರಿಸ್‌ನ ಜಗತ್ಪ್ರಸಿದ್ಧ ಮ್ಯೂಸಿಯಂ ಲೂವ್ರ್ ನಲ್ಲಿ. ಬಿಗಿ ಸುರಕ್ಷತೆಯನ್ನು ಅದಕ್ಕೆ ಒದಗಿಸಲಾಗಿದೆ. ಲಕ್ಷಾಂತರ ಮಂದಿ ಅದರ ದರ್ಶನಕ್ಕೆಂದೇ ನಾನಾ ದೇಶಗಳಿಂದ, ದೂರದೂರದ ಪ್ರದೇಶಗಳಿಂದ ಬರುತ್ತಾರೆ.

ಇಷ್ಟೊಂದು ಜತನದಿಂದ, ಮುತುವರ್ಜಿಯಿಂದ ನಾವು ಕಾಪಾಡುತ್ತಿರುವ ಇದೇ ಚಿತ್ರ ಒಂದು ಸಮಯದಲ್ಲಿ ಶೌಚಾಲಯದಲ್ಲಿ ತೂಗುಹಾಕಲ್ಪಟ್ಟಿತ್ತು ಎನ್ನುವ ಸಂಗತಿಯನ್ನು ಯಾರಿಗೇ ಆದರೂ ನಂಬುವುದು ಕಷ್ಟ. ಚಿತ್ರವನ್ನು ಬಿಡಿಸಿದ ಕಲಾವಿದ ಲಿಯೋನಾರ್ಡೊ ಡ ವಿಂಚಿ ತೀರಿಕೊಂಡ ನಂತರ, ಮೋನಾಲಿಸಾದ ವಾರಸುದಾರಿಕೆ ಆಗಿನ ರಾಜ ಒಂದನೇ ಫ್ರಾನ್ಸಿಸ್‌ನ ಪಾಲಾಯಿತು. ಆ ಚಿತ್ರಕ್ಕೆ ಅಗೌರವ ಸೂಚಿಸುವ ಉದ್ದೇಶ ರಾಜನದ್ದಾಗಿರಲಿಲ್ಲ. ಆತ ಒಬ್ಬ ಒಳ್ಳೆಯ ಕಲಾಪೋಷಕನಾಗಿದ್ದ.


ಅಂದಹಾಗೆ, ಅವನ ಶೌಚಾಲಯದಲ್ಲಿ ಅನೇಕ ಪ್ರಸಿದ್ಧ ಕಲಾಕೃತಿಗಳೂ ಇದ್ದವು. ಇನ್ನೊಂದು ಅಚ್ಚರಿಯ ವಿಷಯವೆಂದರೆ ಮುಂದೆ ಈ ಶೌಚಾಲಯವೇ ಜಗತ್ಪ್ರಸಿದ್ಧ ಲೂವ್ರ್ ಮ್ಯೂಸಿಯಂ ಆಗಿ ಬದಲಾ ಯಿತು! ಹಾಗಾಗಿ ಲೂವ್ರ್ ಮ್ಯೂಸಿಯಂ ಹೊಂದಿರುವ ಸುಮಾರು 35,000 ಪ್ರಖ್ಯಾತ ಕಲಾಕೃತಿಗಳು ಈಗಲೂ ಶೌಚಾಲಯದಲ್ಲೇ ಇವೆ ಎನ್ನಬಹುದೇ?!

– ಹವನ

Advertisement

Udayavani is now on Telegram. Click here to join our channel and stay updated with the latest news.

Next