Advertisement

ಬಡ್ಡಿಗೆ ಬಡ್ಡಿ: ಅದುವೇ ಚಕ್ರಬಡ್ಡಿ!

08:12 PM Nov 02, 2020 | Suhan S |

ಬ್ಯಾಂಕಿಂಗ್‌ ವ್ಯವಹಾರದ ಬೆನ್ನೆಲುಬು ಬಡ್ಡಿ. ತಾನು ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿಯೇ ಅದರ ಮುಖ್ಯಆದಾಯದ ಮೂಲ. ಬ್ಯಾಂಕುಗಳಲ್ಲಿ ಬಡ್ಡಿಯೇತರ ಆದಾಯ, ಒಟ್ಟು ಆದಾಯದ 36% ಇದ್ದರೆ, ಬಡ್ಡಿ ಆದಾಯವೇ ಸುಮಾರು 64% ಇರುತ್ತದೆ. ಬ್ಯಾಂಕುಗಳು ತಮ್ಮ ವ್ಯವಹಾರಕ್ಕಾಗಿ ಠೇವಣಿ ಸ್ವೀಕರಿಸುತ್ತವೆ. ಇದಕ್ಕೆ ಬಡ್ಡಿ ನೀಡಬೇಕಾಗುತ್ತದೆ.

Advertisement

ಬ್ಯಾಂಕುಗಳ ಆದಾಯದಲ್ಲಿ ಬಹುಪಾಲು ಈ ಠೇವಣಿಗೆ ನೀಡುವ ಬಡ್ಡಿ ಮತ್ತು ಇತರ ನಿರ್ವಹಣಾ ವೆಚ್ಚಗಳಿಗೆ ಹೋಗುತ್ತದೆ. ನೀಡುವ ಮತ್ತು ವಿಧಿಸುವ ಬಡ್ಡಿದರದಲ್ಲಿನ ವ್ಯತ್ಯಾಸವನ್ನು  net interest margin &NIM  ಅಥವಾ ನಿವ್ವಳ ಬಡ್ಡಿ\ ಎನ್ನಲಾಗುತ್ತಿದ್ದು, ಬ್ಯಾಂಕುಗಳ ಅಸ್ತಿತ್ವಕ್ಕೆ ಇದು ಕನಿಷ್ಠ 3% ಇರಬೇಕು ಎನ್ನಲಾಗುತ್ತಿದೆ. ಈ ವ್ಯತ್ಯಾಸ ಹೆಚ್ಚು ಇದ್ದಷ್ಟೂ ಬ್ಯಾಂಕುಗಳ ಅರ್ಥಿಕ ಸ್ಥಿತಿ ಉತ್ತಮ ಎನ್ನಬಹುದು. ಬ್ಯಾಂಕುಗಳು ಸಾಲ ಮತ್ತು ಠೇವಣಿ ಮೇಲಿನ ಬಡ್ಡಿದರವನ್ನು ನಿಗದಿಪಡಿಸುವಾಗ ಹಲವು ಆಯಾಮಗಳಲ್ಲಿ ಚರ್ಚಿಸುತ್ತವೆ. ಬ್ಯಾಂಕುಗಳು ತಮ್ಮ ನಿರ್ವಹಣಾ ವೆಚ್ಚವನ್ನು ತಮ್ಮ ಆದಾಯದಿಂದಲೇ ತುಂಬಿಕೊಳ್ಳಬೇಕೇ ವಿನಹ ಅವುಗಳಿಗೆ ಸರ್ಕಾರದ budgetory allocation

ಸರಳಬಡ್ಡಿ- ಚಕ್ರಬಡ್ಡಿ… :

ಬಡ್ಡಿಗಳಲ್ಲಿ ಎರಡು ವಿಧ ಇರುತ್ತದೆ. ಸರಳ ಬಡ್ಡಿ ಮತ್ತು ಚಕ್ರಬಡ್ಡಿ. ಈ ದಿನಗಳಲ್ಲಿ ಸರಳ ಬಡ್ಡಿ ಅಷ್ಟಾಗಿ ಚಾಲ್ತಿಯಲ್ಲಿ ಇರುವುದಿಲ್ಲ. ಬಹುತೇಕ ಬ್ಯಾಂಕುಗಳಲ್ಲಿ ಚಕ್ರಬಡ್ಡಿಯನ್ನೇ ವಿಧಿಸಲಾಗುತ್ತದೆ. ಕೇವಲ ಅಸಲು ಮೊತ್ತದ ಮೇಲೆ ಬಡ್ಡಿ ವಿಧಿಸಿದರೆ ಅಥವಾ ನೀಡಿದರೆ ಅದು ಸರಳ ಬಡ್ಡಿ. ಅದರೆ, ಬಡ್ಡಿಗೂ ಸೇರಿಸಿ ಬಡ್ಡಿ ವಿಧಿಸಿದರೆ ಅಥವಾ ನೀಡಿದರೆ ಅದು ಚಕ್ರ ಬಡ್ಡಿ. ಬ್ಯಾಂಕ್‌ ವಿಧಿಸುವುದು ಅಥವಾ ನೀಡುವುದು ಸರಳ ಬಡ್ಡಿಯೋ ಅಥವಾ ಚಕ್ರಬಡ್ಡಿಯೋ ಎನ್ನುವುದು ಸಾಲ ಮತ್ತು ಠೇವಣಿಯ ಅವಧಿಯ ಮೇಲೆ ಗೊತ್ತಾಗುತ್ತದೆ.ಬ್ಯಾಂಕುಗಳು ಸಾಲಗಳಿಗೆ ತಿಂಗಳಿಗೊಮ್ಮೆ ಬಡ್ಡಿ ವಿಧಿಸಿದರೆ, ಠೇವಣಿಗಳಿಗೆ ತ್ತೈಮಾಸಿಕ ಲೆಕ್ಕದಲ್ಲಿ ಬಡ್ಡಿ ನೀಡುತ್ತವೆ. ಬ್ಯಾಂಕ್‌ ಒಬ್ಬ ಗ್ರಾಹಕನಿಗೆ ಒಂದೇ ತಿಂಗಳಿಗಾಗಿ ಸಾಲ ನೀಡಿ ವಾಪಸ್ಸು ಪಡೆದರೆ, ಅದು ಸಾಮಾನ್ಯವಾಗಿ ಸರಳ ಬಡ್ಡಿಯಾಗಿರುತ್ತದೆ. ಅದು ಒಂದು ತಿಂಗಳನ್ನು ಮೀರಿದರೆ ಚಕ್ರ ಬಡ್ಡಿಯನ್ನು ವಿಧಿಸಲಾಗುತ್ತದೆ.

ಉದಾ: 1 ಲಕ್ಷ ಸಾಲಕ್ಕೆ 10% ಬಡ್ಡಿದರದಲ್ಲಿ ಒಂದು ತಿಂಗಳಿಗೆ 833 ರೂ. ಬಡ್ಡಿಯಾಗುತ್ತದೆ. ಇದನ್ನು ಸರಳ ಬಡ್ಡಿ ಎನ್ನಬಹುದು. ಗ್ರಾಹಕ ಒಂದೇ ತಿಂಗಳನಲ್ಲಿ ಸಾಲವನ್ನು ಚುಕ್ತಾ ಮಾಡಿದರೆ ಬಡ್ಡಿ ಕೇವಲ ರೂ. 833. ಅಕಸ್ಮಾತ್‌ ಎರಡು ತಿಂಗಳಿನಲ್ಲಿ ಚುಕ್ತಾ ಮಾಡಿದರೆ, ಎರಡನೇ ತಿಂಗಳಿನಲ್ಲಿ ಬ್ಯಾಂಕ್‌ 100833 ರೂ.ಗೆ ಬಡ್ಡಿ ವಿಧಿಸುತ್ತಿದ್ದು, ಎರಡನೇ ತಿಂಗಳಿಗೆ ಬಡ್ಡಿ ರೂ. 840 ಆಗುತ್ತದೆ. ಇದನ್ನು ಚಕ್ರ ಬಡ್ಡಿ ಎನ್ನ ಲಾಗುತ್ತದೆ. ಇದೇ ಮಾನದಂಡ ಠೇವಣಿ ವಿಚಾರದಲ್ಲೂ ಅನ್ವಯವಾಗುತ್ತಿದ್ದು, ಇದರಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿ ಅಸಲಿಗೆ ಸೇರುತ್ತದೆ. ಗ್ರಾಹಕರು ಸಾಲ ಮರುಪಾವತಿ ಮಾಡಿದಾಗ, ಬ್ಯಾಂಕುರುಗಳು ಮೊದಲು ಬಡ್ಡಿಯನ್ನು ಸಮೀಕರಿಸಿ, ನಂತರ ಅಸಲಿಗೆ ಜಮಾ ಮಾಡುತ್ತಾರೆ.

Advertisement

ಇದೇನಿದು ಹೊಸ ಆದೇಶ? :

ಕೋವಿಡ್ ಸಂಕಷ್ಟದಿಂದ ಬ್ಯಾಂಕ್‌ ಸಾಲಗಾರರನ್ನು ಹಣಕಾಸು ತೊಂದರೆಯಿಂದ ರಕ್ಷಿಸಲು ಕೇಂದ್ರ ಸರ್ಕಾರ, ಸಾಲ ಮರುಪಾವತಿ ಕಂತುಗಳನ್ನು ಮಾರ್ಚ್‌ 1, 2020ರಿಂದ ಅಗಸ್ಟ್ 31, 2020ರ ವರೆಗೆ ಮುಂದೂಡಬೇಕೆಂದು ನಿರ್ದೇಶಿಸಿತ್ತು. ಆದರೆ, ಈ ಅವಧಿಗೆ ಬಡ್ಡಿ ಮನ್ನಾ ಮಾಡಬೇಕು, ಸರಳ ಬಡ್ಡಿ ವಿಧಿಸಬೇಕು ಮತ್ತು ಚಕ್ರಬಡ್ಡಿಯನ್ನು ವಿಧಿಸಬಾರದು ಎಂದು ಗ್ರಾಹಕರು ನ್ಯಾಯಾಲಯದ ಮೊರೆ ಹೋಗಿದ್ದರು. ಸಾಲ ಮುಂದೂಡಿದ ಅವಧಿಯ ಕಂತುಗಳಿಗೆ- ಸಾಲಗಳಿಗೆ ಚಕ್ರಬಡ್ಡಿ ವಿಧಿಸಬಾರದು ಮತ್ತು ಈಗಾಗಲೇ ವಿಧಿಸಿದ್ದರೆ ಅದನ್ನು ನ.5 ರೊಳಗೆ ಸಾಲಗಾರರ ಖಾತೆಗೆ ವಾಪಸ್‌ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಗೃಹ, ಶಿಕ್ಷಣ, ಕ್ರೆಡಿಟ್‌ ಕಾರ್ಡ್‌ ಬಾಕಿ, ವಾಹನ, ಗೃಹೋಪಯೋಗಿ ವಸ್ತುಗಳ ಖರೀದಿ, ಇನ್ನಿತರ 2 ಕೋಟಿ ವರೆಗಿನ ಸಾಲಕ್ಕೆ ಈಗಾಗಲೇ ಚಕ್ರಬಡ್ಡಿ ವಿಧಿಸಿದ್ದರೆ, ಚಕ್ರಬಡ್ಡಿ ಮತ್ತು ಸರಳ ಬಡ್ಡಿಯ ವ್ಯತ್ಯಾಸವನ್ನು ಗ್ರಾಹಕರಿಗೆ ಕೊಡಬೇಕು. ಇದು ಸಾಲದ ಕಂತು ಗಳ ಮರುಪಾತಿಯನ್ನು ಮುಂದೂಡಲು ಕೇಳದ ಗ್ರಾಹಕರಿಗೂ ಅನ್ವಯಿಸಬೇಕು ಎಂದು ರಿಸರ್ವ್‌ ಬ್ಯಾಂಕ್‌ ಹೇಳಿದೆ. ಅಂದರೆ, ಸಾಲ ಪಡೆದಿರುವ ಗ್ರಾಹಕರು ಮುಂದೂ ಡಿದ ಕಂತುಗಳಿಗೆ ಬಡ್ಡಿಯ ಮೇಲೆ ಬಡ್ಡಿ ನೀಡಬೇಕಾಗಿಲ್ಲ. ಈ ಅವಧಿಗೆ ಅದು ಸರಳ ಬಡ್ಡಿಯಾಗಿಯೇ ಇರುತ್ತದೆ. ­

 

-ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next