Advertisement

ಹೊಸ ಡ್ರೋನ್‌ ನಿಯಮಗಳು ಜಾರಿ

09:24 PM Aug 05, 2021 | Team Udayavani |

ನವದೆಹಲಿ: ಡ್ರೋನ್‌ಗಳ ಬಳಕೆಗೆ ಸಂಬಂಧಿಸಿದಂತೆ ರೂಪಿಸಿರುವ ಹೊಸ ನಿಯಮಗಳನ್ನು ಆ. 15ರಂದು ಜಾರಿಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಈ ನಿಯಮಗಳು ಜಾರಿಗೆ ಬಂದ ಮೇಲೆ, ಇದೇ ವರ್ಷ ಮಾರ್ಚ್‌ನಲ್ಲಿ ಜಾರಿಗೊಂಡಿದ್ದ 2021ರ ಮಾನವರಹಿತ ಆಕಾಶಕಾಯ ವ್ಯವಸ್ಥೆಗಳ ನಿಯಮಾವಳಿಗಳು ಸ್ವಯಂಚಾಲಿತವಾಗಿ ರದ್ದಾಗಲಿದೆ.

ನೂತನ ಡ್ರೋನ್‌ ನಿಯಮಗಳ ಕರಡುಪ್ರತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯದ ಅಧಿಕೃತ ಜಾಲತಾಣದಲ್ಲಿ ಜು. 15ರಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ, ಸಾರ್ವಜನಿಕರಿಂದ ಸಲಹೆ-ಸೂಚನೆಗಳನ್ನು ಆಹ್ವಾನಿಸಿತ್ತು. ಅದರ ಗಡುವು ಆ. 5ರಂದು ಮುಕ್ತಾಯವಾಗಿದೆ. ಹಾಗಾಗಿ, ಆ. 15ರಂದು ಹೊಸ ನಿಯಮಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ.

ಡ್ರೋನ್‌ ಹಾರಾಟದ ವಲಯಗಳನ್ನು ಕೆಂಪು, ಹಳದಿ, ಕೆಂಪು ವಲಯಗಳನ್ನಾಗಿ ಗುರುತಿಸುವುದು, ಹಸಿರು ವಲಯದಲ್ಲಿ ನೆಲದಿಂದ 400 ಮೀ. ಎತ್ತರದ ಡ್ರೋನ್‌ ಹಾರಾಟಕ್ಕೆ ಅನುಮತಿ ಅವಶ್ಯವಿಲ್ಲದಿರುವುದು, ವಿಮಾನ ನಿಲ್ದಾಣಗಳ ಸುತ್ತಲಿನ 8ರಿಂದ 12 ಕಿ.ಮೀ. ವ್ಯಾಪ್ತಿಯಲ್ಲಿ ನೆಲದಿಂದ 200 ಅಡಿ ಎತ್ತರದಲ್ಲಿ ಡ್ರೋನ್‌ ಹಾರಾಟಕ್ಕೆ ನಿರ್ಬಂಧ ವಿಧಿಸುವುದು ಇತ್ಯಾದಿ ಅಂಶಗಳು ಕರಡುಪ್ರತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next