Advertisement

ಅಂತರ್‌ ರಾಜ್ಯ ಚೆಕ್‌ ಪೋಸ್ಟ್‌ ಗಳಲ್ಲಿ ಕಡ್ಡಾಯ ತಪಾಸಣೆಗೆ ಬೊಮ್ಮಾಯಿ ಸೂಚನೆ

08:06 AM May 07, 2020 | Sriram |

ಬೆಂಗಳೂರು: ಲಾಕ್‌ ಡೌನ್‌ ಸಡಿಲಿಕೆಯಿಂದ ಅಂತರ್‌ ರಾಜ್ಯ ಕಾರ್ಮಿಕರು ಹಾಗೂ ಪ್ರವಾಸಿಗರನ್ನು ರಾಜ್ಯದ ಗಡಿ ಒಳಗೆ ಬಿಡುವ ಮೊದಲು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸೂಚಿಸಿದ್ದಾರೆ.

Advertisement

ಬುಧವಾರ ಗೃಹ ಇಲಾಖೆಯ ಅಪರ್‌ ಮುಖ್ಯ ಕಾರ್ಯದರ್ಷಿ, ಡಿಜಿ ಹಾಗೂ ಐಜಿಪಿ ಮತ್ತು ಎಡಿಜಿಪಿಗಳು ಹಾಗೂ ವಿವಿಧ ವಲಯದ ಡಿಜಿಪಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು, ವಿವಿಧ ರಾಜ್ಯಗಳಿಂದ ಬರುವವರು ಸೇವಾ ಸಿಂಧು ಆ್ಯಪ್‌ ನಲ್ಲಿ ನೋಂದಾಯಿಸಿರಬೇಕು ಹಾಗೂ ಎರಡೂ ರಾಜ್ಯಗಳ ಅನುಮತಿ ಪಡೆದಿರಬೇಕು. ಅಂಥವರನ್ನುಅಂತರ್‌ ರಾಜ್ಯ ಗಡಿಯಲ್ಲಿ ತಪಾಸಣೆ ಮಾಡಲು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಾಯ ಪಡೆಯುವಂತೆ ಪೋಲೀಸರಿಗೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಯಾವುದೇ ಅನಮತಿ ಪಡೆಯದೆ ಅಥವಾ ಅನಧಿಕೃತ ವ್ಯಕ್ತಿಗಳಿಂದ ಪಾಸ್‌ ಪಡೆದುಕೊಂಡು ಬರುವ ವಾಹನಗಳನ್ನು ನಿಷೇಧಿಸಬೇಕು. ನಮ್ಮ ರಾಜ್ಯದಿಂದ ಹೊರ ರಾಜ್ಯಗಳಿಗೆ ಹೋಗುವವರಿಗೆ ಸರ್ಕಾರದ ಸೂಚನೆಯಂತೆ ಪಾಸ್‌ ವಿತರಣೆಯನ್ನು ನಿಯಂತ್ರಿಸುವಂತೆ ಸೂಚಿಸಿರುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ಕಂಟೈನ್‌ ಮೆಂಟ್‌ ಹಾಗೂ ಬಫರ್‌ ವಲಯಗಳಲ್ಲಿ ಕಟ್ಟುನಿಟ್ಟಿನ ಕಾನೂನು ಪಾಲನೆ ಮಾಡಬೇಕು ಉಳಿದ ವಲಯಗಳಲ್ಲಿ ಸಂಜೆ 7 ರಿಂದ ಬೆಳಗಿನ 7 ರ ವರೆಗೆ ವಾಹನ ಸಂಚಾರ ಹಾಗೂ ಜನರ ಓಡಾಟ ನಿಯಂತ್ರಿಸಲು ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನಗಳನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next