Advertisement

ಅಂತರ್‌ ಕಾಲೇಜು ಕಬಡ್ಡಿ: ಆಳ್ವಾಸ್‌ಗೆ ಅವಳಿ ಪ್ರಶಸ್ತಿ

09:08 AM Jan 15, 2017 | Team Udayavani |

ಮೂಡಬಿದಿರೆ: ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಮೂಡಬಿದಿರೆಯ ಸಂಚಲನ್‌ ಮತ್ತು ಸ್ವಾಮಿ ವಿವೇಕಾನಂದ ಜನ್ಮ ದಿನೋತ್ಸವ ಸಮಿತಿ ವತಿಯಿಂದ ಸ್ವರಾಜ್ಯ ಮೈದಾನದಲ್ಲಿ ನಡೆದ  ರಾಷ್ಟ್ರೀಯ ಯುವ ದಿನಾಚರಣೆ -2017 ಅಂತರ್‌ ಕಾಲೇಜು ಮಟ್ಟದ “ವಿವೇಕ ಟ್ರೋಫಿ’ ಕಬಡ್ಡಿ ಪಂದ್ಯಾಟದಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಆಳ್ವಾಸ್‌ ಕಾಲೇಜು ತಂಡಗಳು ವಿವೇಕ ಟ್ರೋಫಿಯನ್ನು ಗೆದ್ದುಕೊಂಡಿವೆ.

Advertisement

ಪುರುಷರ ವಿಭಾಗದಲ್ಲಿ ಉಜಿರೆ ಎಸ್‌ಡಿಎಂ ಕಾಲೇಜು ದ್ವಿತೀಯ ಹಾಗೂ ಪುತ್ತೂರು  ಸವಣೂರು ರಶ್ಮಿ  ಕಾಲೇಜಿನ ತಂಡ ತೃತೀಯ ಸ್ಥಾನವನ್ನು ಪಡೆದುಕೊಂಡಿವೆ. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್‌ ಕಾಲೇಜು ಪ್ರಥಮ, ಆಳ್ವಾಸ್‌ ದೈಹಿಕ ಶಿಕ್ಷಣ ಕಾಲೇಜು ದ್ವಿತೀಯ ಹಾಗೂ ವಾಮದಪದವು ಸರಕಾರಿ ಕಾಲೇಜು ತೃತೀಯ ಸ್ಥಾನವನ್ನು ಪಡೆದುಕೊಂಡಿವೆ. ಪುರುಷರ ವಿಭಾಗದಲ್ಲಿ ಉತ್ತಮ ಹಿಡಿತಗಾರನಾಗಿ ಆಳ್ವಾಸ್‌ನ ಮಲ್ಲಿಕಾರ್ಜುನ, ಉತ್ತಮ ಆಟಗಾರರಾಗಿ ಆಳ್ವಾಸ್‌ನ ವಿಶ್ವರಾಜ್‌, ಹಾಗೂ  ಉಜಿರೆ ಎಸ್‌ಡಿಎಂನ ಪ್ರತಾಪ್‌ ಸರ್ವಾಂಗೀಣ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಉತ್ತಮ ಆಟಗಾರ್ತಿಯಾಗಿ ಆಳ್ವಾಸ್‌ನ ಆತ್ಮೀಯ, ಉತ್ತಮ ಹಿಡಿತಗಾರ್ತಿಯಾಗಿ ಪಲ್ಲವಿ  ಹಾಗೂ ಸರ್ವಾಂಗೀಣ ಆಟಗಾರ್ತಿಯಾಗಿ ಆಳ್ವಾಸ್‌ ದೈಹಿಕ ಶಿಕ್ಷಣ ಕಾಲೇಜಿನ ಕಾವ್ಯಾ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಬಹುಮಾನ ವಿತರಿಸಿದರು.

ಪ್ರಜ್ಞಾ ಪ್ರವಾಹ ಚಿಂತಕರ ವೇದಿಕೆಯ ಕ್ಷೇತ್ರೀಯ ಸಂಚಾಲಕ ರಘುನಂದನ ವಿಶೇಷ ಉಪನ್ಯಾಸ ನೀಡಿದರು. ಚೌಟರ ಅರಮನೆಯ ಕುಲದೀಪ ಎಂ. ಮತ್ತು ಉದ್ಯಮಿ ನಾರಾಯಣ ಪಿ.ಎಂ. ಉಪಸ್ಥಿತರಿದ್ದರು.

ವೇದಿಕೆಯಲ್ಲಿಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್‌, ಸಮಿತಿಯ ಪ್ರಧಾನ ಕಾರ್ಯದರ್ಶಿ ಸುದರ್ಶನ್‌ ಎಂ.ಉಪಸ್ಥಿತರಿದ್ದರು.

Advertisement

ಸಮಿತಿಯ ಅಧ್ಯಕ್ಷ ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿದರು. ಆಳ್ವಾಸ್‌ನ‌ ಪ್ರಮೋದ್‌ ಕುಮಾರ್‌ ಶೆಟ್ಟಿ ವಿಜೇತರ ವಿವರ ನೀಡಿದರು. ಡಾ| ಗುರು ಬಾಗೇವಾಡಿ ಕಾರ್ಯಕ್ರಮ ನಿರೂ ಪಿಸಿದರು.  ಸಂಚಲನ್‌ ಸಮಿತಿಯ ಸಂಚಾಲಕ ಸೂರಜ್‌ ಜೈನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next