Advertisement

ಕೇರಳದಲ್ಲಿ ಬಿಸಿಗಾಳಿ: ಶಾಲಾ, ಕಾಲೇಜುಗಳಿಗೆ 4 ದಿನ ರಜೆ!

01:16 PM May 03, 2024 | Team Udayavani |

ತಿರುವನಂತಪುರ: ಹೆಚ್ಚುತ್ತಿರುವ ಬಿಸಿ ಗಾಳಿ ಹಿನ್ನೆಲೆಯಲ್ಲಿ ಕೇರಳ ಸರಕಾರವು ಮೇ 6ರವರೆಗೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ. ಬಿಸಿ ಗಾಳಿ ಸಮಸ್ಯೆಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಗುರುವಾರ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಿದ್ದಾರೆ.

Advertisement

ಇದನ್ನೂ ಓದಿ:Thomas Cup: ಬ್ಯಾಡ್ಮಿಂಟನ್‌; ಭಾರತದ ಆಟಕ್ಕೆ ತೆರೆ

ಆಂಧ್ರದಲ್ಲಿ 46.2 ಡಿಗ್ರಿ ತಾಪ: ಆಂಧ್ರ ಪ್ರದೇಶದ ರೆಂಟಚಿಂತಲದಲ್ಲಿ 46.2 ಡಿ. ಸೆ. ತಾಪಮಾನ ದಾಖಲಾಗಿದ್ದು, ಪೂರ್ವ, ದಕ್ಷಿಣ ಮತ್ತು ಈಶಾನ್ಯ ಭಾರತದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಹವಾಮಾನ ಇಲಾಖೆಯು ಆಂಧ್ರ, ಬಿಹಾರ, ಪಶ್ಚಿಮ ಬಂಗಾಲ ಮತ್ತು ಒಡಿಶಾಗೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಕರ್ನಾಟಕ, ತೆಲಂಗಾಣಕ್ಕೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಝೂಗಳಲ್ಲಿ ಪ್ರಾಣಿಗಳಿಗೆ ಎ.ಸಿ.
ಈಶಾನ್ಯ ರಾಜ್ಯ ತ್ರಿಪುರಾ ಕೂಡ ಬಿಸಿಗಾಳಿಗೆ ತತ್ತರಿಸಿದ್ದು, ಸಿಫಾಹಿ ಜಾಲಾ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿಗಳು ಸೇರಿದಂತೆ ವನ್ಯ ಜೀವಿಗಳನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಎ.ಸಿ. ಸೌಲಭ್ಯ ಕಲ್ಪಿಸಲಾಗಿದೆ. ಜತೆಗೆ ಒಆರ್‌ಎಸ್‌ ಮಿಶ್ರಿತ ತಂಪು ನೀರಿನ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next