Advertisement

ಎಂ.ಜಿ.ಎಂ: ಅಮೃತಮಹೇೂತ್ಸವ ಕ್ರೀಡಾ ಕೂಟ ಉದ್ಘಾಟನೆ

05:18 PM Mar 25, 2024 | Team Udayavani |

ಉಡುಪಿ:“ಎಂಜಿಎಂ.ಕಾಲೇಜಿನಲ್ಲಿ ಕ್ರೀಡಾ ಶಿಕ್ಷಣಕ್ಕೆ ಬೇಕಾಗುವ ಪೂರಕವಾದ ಸವಲತ್ತುಗಳು ಲಭ್ಯವಿರುವ ಕಾರಣದಿಂದ ಇಲ್ಲಿನ ಅನೇಕ ಮಂದಿ ವಿದ್ಯಾರ್ಥಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈಯಲು ಸಾಧ್ಯವಾಯಿತು ಎಂದು ಎಂ.ಜಿ.ಎಂ.ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿನಿ ರಾಷ್ಟ್ರ ಮಟ್ಟದ ಕ್ರೀಡಾ ಪಟು ತರಬೇತಿದಾರರಾದ ಶಾಲಿನಿ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಉಡುಪಿ ಎಂ.ಜಿ.ಎ.ಕಾಲೇಜಿನ 75ನೇ ವರುಷದ ಅಮೃತ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದರು.ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ ಕಾಲೇಜಿನ ಹದಿನೈದು ಮಂದಿ ಪ್ರತಿಭಾವಂತ ವಿದ್ಯಾರ್ಥಿ ಕ್ರೀಡಾಳುಗಳು ಕ್ರೀಡಾ ಜ್ಯೋತಿಯನ್ನು ಬೆಳಗುವುದರೊಂದಿಗೆ ಕ್ರೀಡಾ ಕುಾಟಕ್ಕೆ ಚಾಲನೆ ನೀಡಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಚಿತ್ರಪಾಡಿ ಲಕ್ಷ್ಮೀನಾರಾಯಣ ಕಾರಂತರು ಅಧ್ಯಕ್ಷತೆ ವಹಿಸಿದ್ದರು.‌ ದೈಹಿಕ ಶಿಕ್ಷಣ ನಿದೇ೯ಶಕಿ ಜಯಶ್ರೀನಾಯಕ್ ಸ್ವಾಗತಿಸಿದರು.ರಾಷ್ಟ್ರ ಮಟ್ಟದ ಮಹಿಳಾ ಕ್ರಿಕೆಟ್ ನಲ್ಲಿ ವಿಶಿಷ್ಟ ಸಾಧನಗೈದ ತೇಜಸ್ವಿನಿ ಉದಯಕುಮಾರ್ ಇವರನ್ನು ಸಂಮಾನಿಸಲಾಯಿತು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಮೇಶ್ ಕಾರ್ಲ್,ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಅಧ್ಯಕ್ಷ ಸುಮೇಶ್, ಕ್ರೀಡಾ ಸಮಿತಿಯ ಕಾರ್ಯದರ್ಶಿ ಪ್ರಯಾಗ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಿಕೇೂದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಸುಚಿತ್ ಕೇೂಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಅಧ್ಯಕ್ಷ ಸುಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next