Advertisement

Inter College ಕ್ರಾಸ್‌ ಕಂಟ್ರಿ ರೇಸ್‌: ಸತತ 20ನೇ ವರ್ಷವೂ ಆಳ್ವಾಸ್‌ ಚಾಂಪಿಯನ್‌

11:51 PM Nov 07, 2023 | Team Udayavani |

ಮೂಡುಬಿದಿರೆ: ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ. ಅಂತರ್‌ ಕಾಲೇಜು ಕ್ರಾಸ್‌ ಕಂಟ್ರಿ ಚಾಂಪಿಯನ್‌ಶಿಪ್‌ನ ಪುರುಷರು ಹಾಗೂ ಮಹಿಳೆ ಯರ ವಿಭಾಗಗಳೆರಡರಲ್ಲೂ ಚಾಂಪಿ ಯನ್‌ ಆಗುವ ಮೂಲಕ ಆಳ್ವಾಸ್‌ ಕಾಲೇಜು ಸತತ 20ನೇ ವರ್ಷ ಸಮಗ್ರ ಪ್ರಶಸ್ತಿಯನ್ನೆತ್ತಿದೆ.

Advertisement

ಪುರುಷರ ವಿಭಾಗದಲ್ಲಿ ಮೊದಲ 6 ಸ್ಥಾನಗಳನ್ನು ಆಳ್ವಾಸ್‌ ಕಾಲೇ ಜಿನ ಚಂದನ್‌ ಯಾದವ್‌, ಅಂಕಿತ್‌ ದೇಶ್ವಾಲ್‌, ಆಸಿಫ್‌ ಖಾನ್‌, ಸುನಿಲ್‌ ಕುಮಾರ್‌, ಅಕ್ಷಯ್‌ ಕುಮಾರ್‌, ಅರವಿಂದ್‌ ಯಾದವ್‌ ಪಡೆದರು.
ಮಹಿಳೆಯರ ವಿಭಾಗದಲ್ಲಿ ಸೋನುನೆ ಪೂನಂ ದಿನಕರ್‌, ಬಸಂತಿ ಕುಮಾರಿ, ಕೆ.ಎಂ. ಸೋನಿಯಾ, ಚೈತ್ರಾ ದೇವಾಡಿಗ ಮೊದಲ 4 ಸ್ಥಾನ ಗಳಿಸಿದ್ದರೆ, ದಿಶಾ ಬೋರ್ಶೆ 6ನೇ ಮತ್ತು ಕೆ.ಎಂ. ಅಂಜಲಿ 7ನೇ ಸ್ಥಾನ ಪಡೆದಿದ್ದಾರೆ. ಡಾ| ಎಂ. ಮೋಹನ್‌ ಆಳ್ವ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next