Advertisement

ಸಮಗ್ರ ಕೃಷಿ ಅಭಿಯಾನ-2017; ಜಲಜಾಗೃತಿ ವರ್ಷ

03:45 AM Jul 04, 2017 | Team Udayavani |

ಶಿರ್ವ: ಉಡುಪಿ ಜಿಲ್ಲಾ ಪಂಚಾಯತ್‌,ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳು ಮತ್ತು ಲಯನ್ಸ್‌ ಕ್ಲಬ್‌, ಶಿರ್ವ ಮಂಚಕಲ್‌ ಇವರ ಸಹಯೋಗದಲ್ಲಿ ಕಾಪು ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನ- 2017, ಜಲಜಾಗೃತಿ ವರ್ಷ,ಕೃಷಿ ಭಾಗ್ಯ, ಮಳೆಯಾಶ್ರಿತ ರೈತರಿಗೆ ವರದಾನ ಕಾರ್ಯಕ್ರಮವು ಶಿರ್ವ ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ದೇವದಾಸ್‌ ನಾಯಕ್‌ ಅವರ ಅಧ್ಯಕ್ಷತೆಯಲ್ಲಿ  ಶಿರ್ವದ ಸಾವುದ್‌ ಸಭಾಭವನದಲ್ಲಿ ನಡೆಯಿತು.

Advertisement

ಕಾರ್ಯಕ್ರಮವನ್ನು ತೆಂಗಿನ ಕೊಂಬು ಅರಳಿಸುವುದರ ಮೂಲಕ ಉದ್ಘಾಟಿಸಿದ ಶಾಸಕ‌ ವಿನಯ ಕುಮಾರ್‌ ಸೊರಕೆ ಮಾತನಾಡಿ ಆದರೆ ಕೂಲಿಯಾಳುಗಳ ಅಭಾವ ಮತ್ತು ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಬಹುತೇಕ ಕೃಷಿ ಭೂಮಿಗಳು ಹಡಿಲು ಬಿದ್ದಿವೆ. ಪ್ರತಿಯೊಬ್ಬ ರೈತರು ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿ ಸುಧಾರಿತ ಕೃಷಿ ಯಂತ್ರೋಪಕರಣಗಳ ಮೂಲಕ ಬೇಸಾಯ ಮಾಡಿ,ಹೂ-ಫಲ ಬರುವ ಮರ ಗಿಡಗಳನ್ನು ನೆಟ್ಟು ಪರಿಸರವನ್ನು ಸಮತೋಲನಗೊಳಿಸಿ ಮುಂದಿನ ಜನಾಂಗದ ಭವಿಷ್ಯತ್ತಿಗಾಗಿ ಶ್ರಮಿಸಬೇಕು ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಶಿರ್ವ ಆರೋಗ್ಯ ಮಾತಾ ದೇವಾಲಯದ ಧರ್ಮಗುರುರೆ|ಫಾ| ಸ್ಟಾನಿ ತಾವೋÅ ಮಾತನಾಡಿದರು.

ರಾಜ್ಯಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ಶಿರ್ವದ ಪ್ರಗತಿಪರ ಕೃಷಿಕ ಕಲ್ಲೊಟ್ಟು ರಾಘವೇಂದ್ರ ನಾಯಕ್‌ ಮತ್ತು ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ವಿಜೇತ ದತ್ತಾತೇÅಯ ಪಾಟ್ಕರ್‌ ಮತ್ತು ಪ್ರಭಾಕರ ಶೆಟ್ಟಿಯವರನ್ನು ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಸಮ್ಮಾನಿಸಿದರು.

ಈ ಸಂದರ್ಭದಲ್ಲಿ ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆಯ ಸಮಗ್ರ ಮಾಹಿತಿಯನ್ನೊಳಗೊಂಡ ಮಾಹಿತಿ ಕೈಪಿಡಿಯನ್ನು ಶಾಸಕ ವಿನಯಕುಮಾರ್‌ ಸೊರಕೆ ಬಿಡುಗಡೆ ಮಾಡಿ ಇಲಾಖೆಯ ಸಮಗ್ರ ಕೃಷಿ ಅಭಿಯಾನದ ಕೃಷಿ ಮಾಹಿತಿ ರಥಕ್ಕೆ ಚಾಲನೆ ನೀಡಿದರು. ರೈತರಿಗೆ ಕೃಷಿ ಯಂತೋÅಪಕರಣಗಳ ವಿತರಣೆ ಮತ್ತು ಶಿರ್ವ ಗ್ರಾ.ಪಂ.ಸದಸ್ಯರಿಗೆ ಮತ್ತು ಶಿರ್ವ ಲಯನ್ಸ್‌ ಕ್ಲಬ್‌ ಸದಸ್ಯರಿಗೆ ಸಾಂಕೇತಿಕವಾಗಿ ಸಸಿಗಳ ವಿತರಣೆ ಮಾಡಲಾಯಿತು.

ಉಡುಪಿ ಜಿ.ಪಂ.ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿಯ ಅಧ್ಯಕ್ಷ ಶಶಿಕಾಂತ ಪಡುಬಿದ್ರೆ, ಉಡುಪಿ ಜಿ.ಪಂ.ಸದಸ್ಯ ಹಾಗೂ ಶಿರ್ವ ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ವಿಲ್ಸನ್‌ ರೊಡ್ರಿಗಸ್‌, ಉಡುಪಿ ತಾ.ಪಂ.ಸದಸ್ಯ ಮೈಕಲ್‌ ರಮೇಶ್‌ ಡಿಸೋಜಾ, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಮಾತನಾಡಿದರು.

Advertisement

ಜಿ.ಪಂ.ಸದಸ್ಯೆ ಶಿಲ್ಪಾ ಜಿ.ಸುವರ್ಣ, ಉಡುಪಿ ತಾ.ಪಂ.ಸದಸ್ಯರಾದ ಗೀತಾ ವಾಗೆÛ , ಸುಜಾತಾ ಶಂಕರ ಸುವರ್ಣ, ರಾಜೇಶ್‌ ಜಿ. ಶೆಟ್ಟಿ,ದಿನೇಶ್‌ ಕೋಟ್ಯಾನ್‌, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸುಭಾಷಿತ್‌ ಕುಮಾರ್‌,ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕ, ಬ್ರಹ್ಮಾವರ ವಲಯ ಕೃಷಿ ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ| ಎಂ. ಹನುಮಂತಪ್ಪ, ಕಾರ್ಯಕ್ರಮ ಸಂಯೋಜಕ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಡಾ| ಧನಂಜಯ, ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್‌ ಲೋಬೋ, ಜಿಲ್ಲಾ ಕೆಡಿಪಿ ಸದಸ್ಯ ಇಗೇ°ಶಿಯಸ್‌ ಡಿ’ಸೋಜಾ ವೇದಿಕೆಯಲ್ಲಿದ್ದರು.

ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕಂದಾಯ ಸಹಿತ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬಂದಿಗಳು, ಶಿರ್ವ ಮಂಚಕಲ್‌ ಲಯನ್ಸ್‌ ಕ್ಲಬ್‌ನ ಸದಸ್ಯರು, ಪರಿಸರದ ರೈತರು, ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್‌ಸ್ವಾಗತಿಸಿದರು. ಎಲ್ಲೂರು ಗ್ರಾ.ಪಂ. ಪಿಡಿಒ ಚಂದ್ರಶೇಖರ ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿ,ಕೃಷಿ ಅಧಿಕಾರಿ ಶೇಖರ್‌ ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next