Advertisement
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ರಾಜ್ಯ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ”ಕರ್ನಾಟಕದಲ್ಲಿ ಪಕ್ಷದ ಕಾರ್ಯದಿಂದ ಸಂತುಷ್ಟಿ ಇಲ್ಲ, ಆದರೆ… ಮಿಷನ್ ರಿಪೀಟ್ ನಮ್ಮ ಮಂತ್ರ. ದೇಶ ಮೊದಲು, ಪಕ್ಷ ನಂತರ ವ್ಯಕ್ತಿ ಕೊನೆಗೆ ಇದೆ ನಮ್ಮ ಪಕ್ಷದ ಧ್ಯೇಯ” ಎಂದರು.
Related Articles
Advertisement
ಕುಟುಂಬ ರಾಜಕಾರಣದ ವಿಚಾರ ಪ್ರಸ್ತಾವಿಸಿದ ನಡ್ಡಾ ಅವರು, ‘ಒಡಿಶಾದಲ್ಲಿ ಬಿಜೆಡಿ, ಆಂಧ್ರದಲ್ಲಿ ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್ ಸಿಪಿ, ಕರ್ನಾಟಕದ ಜೆಡಿಎಸ್ ಎಲ್ಲವೂ ಕೌಟುಂಬಿಕ ಪಕ್ಷಗಳಾಗಿವೆ’ಎಂದರು.
‘ಸಂಪೂರ್ಣತೆಯೊಂದಿದೆ, ಸಮಗ್ರತೆಯೊಂದಿಗೆ ಭವಿಷ್ಯದ ದೃಷ್ಟಿಯಿಂದ ಆಳವಾಗಿ ಹೇಗೆ ಮುಂದೆ ಸಾಗಬೇಕು ಎನ್ನುವುದನ್ನು ತೀರ್ಮಾನಿಸಿದ್ದೀರಿ’ಎಂದರು.
‘ಬರಲಿರುವ ಚುನಾವಣೆಗೆ ಹೇಗೆ ಸಿದ್ದವಾಗಬೇಕು, ಸರಕಾರದ ಕೆಲಸದ ಬಗ್ಗೆ ಹೇಗೆ ಜನರಿಗೆ ಮನವರಿಕೆ ಮಾಡುವುದು ಎನ್ನುವ ಕುರಿತು ತೀರ್ಮಾನಿಸಿದ್ದೀರಿ. ನಮಗೆ ಯಡಿಯೂರಪ್ಪ ಅವರ ಆಶೀರ್ವಾದ ದೊರಕಿದೆ’ ಎಂದರು.
‘ನಾವು ರೈತರಿಗೆ ಮಾಡಿದಷ್ಟು ಕೆಲಸ ಬೇರೆ ಯಾರೂ ಮಾಡಲೂ ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ರೈತರ ಸಶಕ್ತೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಮಾಡಿದೆ’ ಎಂದರು.
‘ಕೇಂದ್ರ ಸರಕಾರ ಕರ್ನಾಟಕದಲ್ಲಿ 10 ರೈಲ್ವೆ ಯೋಜನೆಗಳನ್ನು ಅನುಮೋದಿಸಿದೆ ಮತ್ತು ಅವುಗಳಿಗೆ ಹಣಕಾಸಿನ ನೆರವು ನೀಡಿದೆ. ಶೀಘ್ರದಲ್ಲೇ 10 ಹೊಸ ರೈಲು ಮಾರ್ಗಗಳು ಇಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ರಾಜ್ಯದಲ್ಲಿ 46.31 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ’ ಎಂದರು.
‘ಸಾಂಸ್ಕೃತಿಕ ನಗರಿಗೆ ಬಂದಿರುವುದು ನನ್ನ ಸೌಭಾಗ್ಯ ಎಂದರು. ಕರ್ನಾಟಕ ವಿಶ್ವದ ವೇಗವಾಗಿ ಬೆಳೆಯುವ ಟೆಕ್ನಿಕಲ್ ಹಬ್ ಆಗುತ್ತಿದೆ ಎಂದರು. ಹಂಪಿಯನ್ನು ನೋಡಿದೆ, ತಾಯಿ ಭುವನೇಶ್ವರಿಯ ಆಶೀರ್ವಾದ ಪಡೆಯುವ ಭಾಗ್ಯ ದೊರಕಿತು’ ಎಂದರು.