ರಾಂಚಿ: ಪಾಕಿಸ್ಥಾನ ಮತ್ತು ಬಾಂಗ್ಲಾದೇಶದ ರಾಷ್ಟ್ರಗೀತೆಯನ್ನು ಕಲಿಯುವಂತೆ ಕಿಂಡರ್‌ಗಾರ್ಟನ್ ಮಕ್ಕಳಿಗೆ ಸೂಚಿಸುವ ಮೂಲಕ ಝಾರ್ಖಂಡ್‌ನ ಖಾಸಗಿ ಶಾಲೆಯೊಂದು ವಿವಾದಕ್ಕೆ ನಾಂದಿ ಹಾಡಿದೆ. ಪೂರ್ವ ಸಿಂಘ…ಭೂಮ್ ಜಿಲ್ಲೆಯ ಘಾಟ್ಸೆಲಾದಲ್ಲಿನ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕಳೆದ ವಾರ ಎಲ್‌ಕೆಜಿ, ಯುಕೆಜಿ ವಿದ್ಯಾರ್ಥಿಗಳಿಗೆ ಪಾಕ್, ಬಾಂಗ್ಲಾದ ರಾಷ್ಟ್ರಗೀತೆಗಳನ್ನು ಕಲಿತುಕೊಂಡು ಬರುವಂತೆ ಶಿಕ್ಷಕರು ಸೂಚಿಸಿದ್ದರು. ಆನ್‌ಲೈನ್ ತರಗತಿ ವೇಳೆ ಆ ಶಿಕ್ಷಕರು ರಾಷ್ಟ್ರಗೀತೆಗಳ ಯೂಟ್ಯೂಬ್ ವೀಡಿಯೋವನ್ನೂ ಪ್ಲೇ ಮಾಡಿದ್ದರು. ಈ ಮನೆ ಕೆಲಸ ಹೆತ್ತವರ ಗಮನಕ್ಕೆ ಬಂದಿದ್ದು, ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಶಾಲಾ ಆಡಳಿತ ಮಂಡಳಿಯು ತರಗತಿಯ ಪಠ್ಯ ಕ್ರಮವನ್ನು ವಾಪಸ್ ಪಡೆದಿದ್ದು, ತನಿಖೆಗೆ ಆದೇಶಿಸಿದೆ. ಬಿಜೆಪಿ ವಕ್ತಾರ ಕುನಾಲ್ ಸಾರಂಗಿ ನೇತೃತ್ವದಲ್ಲಿ ಪ್ರತಿಭಟನೆ ನಡೆದ ಬಳಿಕ, ಜಿಲ್ಲಾಡಳಿತವು ಇಬ್ಬರು ಸದಸ್ಯರ ತಂಡ ರಚಿಸಿ, ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿದೆ.