Advertisement

ಜೂ.15ರೊಳಗೆ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಲು ಸೂಚನೆ

12:35 PM May 12, 2017 | |

ಮೈಸೂರು: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜೂನ್‌ 15ರ ಒಳಗೆ ಸಮವಸ್ತ್ರ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ ಸೂಚಿಸಿದರು.

Advertisement

ಗುರುವಾರ ಜಿಪಂನ ಅಬ್ದಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯ ಮಾತನಾಡಿ, ಎಚ್‌.ಡಿ. ಕೋಟೆ ತಾಲೂಕಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ನೀಡು ವಲ್ಲಿ ಸಾಕಷ್ಟು ವಿಳಂಬ ಮಾಡಿರುವುದು ಸರಿಯಲ್ಲ. ಆದ ಕಾರಣ 2017-18ನೇ ಸಾಲಿನಲ್ಲಿ ಜೂನ್‌ 15ರ ಒಳಗೆ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸುವಂತಾಗಬೇಕು ಎಂದರು.

ಇದಕ್ಕೆ ಉತ್ತರಿಸಿದ ಡಿಡಿಪಿಐ ಎಚ್‌.ಆರ್‌. ಬಸಪ್ಪ, ಸಮವಸ್ತ್ರಗಳನ್ನು ಸರಬರಾಜು ಮಾಡುವ ಬಗ್ಗೆ ರಾಜ್ಯ ಮಟ್ಟದಲ್ಲಿ ಟೆಂಡರ್‌ ಕರೆಯಲಾಗಿದೆ. ಶಾಲೆ ಆರಂಭಗೊಂಡ ಮೂರು ತಿಂಗಳೊಳಗಾಗಿ ಸಮವಸ್ತ್ರಗಳನ್ನು ವಿತರಿಸಲು ಒಪ್ಪಿದ್ದಾರೆ. ಆದಕಾರಣ ಜೂನ್‌ ಅಂತ್ಯದ ಒಳಗೆ ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರಗಳನ್ನು ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಪಂ ಅಧ್ಯಕ್ಷರ ಸೂಚನೆಯಂತೆ ಜಿಲ್ಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳ ಲಾಗುವುದು. ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ 326, ಪ್ರೌಢ ಶಾಲಾ ವಿಭಾಗದಲ್ಲಿ 221 ಶಿಕ್ಷಕರ ಕೊರತೆ ಇದ್ದು ಅವುಗಳನ್ನು ಅತಿಥಿ ಶಿಕ್ಷಕರ ರೂಪದಲ್ಲಿ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಮಾತನಾಡಿ, ಆರ್‌.ಟಿ.ಇ ಕಾಯ್ದೆಯಡಿ ನಗರದ ಐದು ಖಾಸಗಿ ಶಾಲೆಗಳು ಪ್ರವೇಶ ನೀಡಲು ನಿರಾಕರಿಸುತ್ತಿವೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದೀರಾ ಎಂದು ಡಿಡಿಪಿಐಗೆ ಪ್ರಶ್ನಿಸಿದರು.

Advertisement

ಇದಕ್ಕೆ ಉತ್ತರಿಸಿದ ಡಿಡಿಪಿಐ, ನಗರದ ನೌಕೀಸ್‌, ಆರಿRಡ್‌, ಕೌಟಿಲ್ಯ, ಮೌಂಟ್‌ ಮುಟೇರಾ ಹಾಗೂ ಜಾnನ ಸರೋವರ ಶಾಲೆಗಳು ಆರ್‌ಟಿಇ ಮಕ್ಕಳ ಪ್ರವೇಶಕ್ಕೆ ನಿರಾಕರಿಸಿರುವುದರಿಂದ ಆ ಶಾಲೆಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಈ ಹಿನ್ನೆಲೆ ಶಾಲೆಯ ಮುಖ್ಯಸ್ಥರು ಇನ್ನೂ ಮೂರು ದಿನಗಳ ಕಾಲಾವಕಾಶ ಕೋರಿರುವುದರಿಂದ ಅಲ್ಲಿಯ ವರೆಗೆ ಕಾಯ್ದು ನೋಡಲಾಗುವುದು. ಕಾಲಾವಕಾಶ ಮುಗಿದರೂ ಪ್ರವೇಶ ಮಾಡಿಕೊಳ್ಳದಿದ್ದಲ್ಲಿ ಆ ಶಾಲೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಜಾnನ ಸರೋವರ ಶಾಲೆಗೆ 1.56 ಕೋಟಿ ದಂಡ ವಿಧಿಸಲಾಗಿದ್ದು ಇದೇ ರೀತಿಯ ಕ್ರಮವನ್ನು ಉಳಿದ ನಾಲ್ಕು ಶಾಲೆಗಳ ವಿರುದ್ಧವೂ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ಇಲ್ಲಿಯವರೆಗೆ ಎಷ್ಟು ವಿದ್ಯಾರ್ಥಿನಿಲಯಗಳಿಗೆ ಸೋಲಾರ್‌ ಹಾಗೂ ಯುಪಿಎಸ್‌ಗಳನ್ನು ಅಳವಡಿಸ ಲಾಗಿದೆ?

ಹಾಗೆಯೇ ಎಷ್ಟು ವಿದ್ಯಾರ್ಥಿ ನಿಲಯಗಳಿಗೆ ಪುಸ್ತಕವನ್ನು ಖರೀದಿಸಲಾಗಿದೆ ಎಂಬ ಬಗ್ಗೆ ವಿವರ ನೀಡುವಂತೆ ಜಿಪಂ ಅಧ್ಯಕ್ಷರು ಕೇಳಿದ ಪ್ರಶ್ನೆಗೆ ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್‌ ಜಿಲ್ಲಾ ಮಟ್ಟದಲ್ಲಿ 11 ಹಾಸ್ಟೆಲ್‌ಗ‌ಳಿಗೆ ಸೋಲಾರ್‌ ಹಾಗೂ ಯುಪಿಎಸ್‌ ಅಳವಡಿಸಲು, 45 ವಸತಿ ನಿಲಯಗಳಿಗೆ ಪುಸ್ತಕಗಳನ್ನು ಖರೀದಿಸಲು ಟೆಂಡರ್‌ ಕರೆಯಲಾಗಿದೆ.  ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next