Advertisement

ಕಪಾಲ ಬೆಟ್ಟದಲ್ಲಿ ಶಾಂತಿ ಕಾಪಾಡಲು ಸೂಚನೆ

10:57 PM Jan 13, 2020 | Team Udayavani |

ಬೆಂಗಳೂರು: ಕಪಾಲ ಬೆಟ್ಟದಲ್ಲಿ ವಿವಾದ ಹುಟ್ಟು ಹಾಕುವ ಕೆಲಸ ಮೊದಲಿನಿಂದಲೂ ನಡೆಯುತ್ತಿದೆ. ಈಗ ಅಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನನ್ನ ಕರ್ತವ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಕಪಾಲ ಬೆಟ್ಟದ ಗಲಾಟೆ ಕಂದಾಯ ಇಲಾಖೆಗೆ ಸೇರಿದ ವಿಷಯ.

Advertisement

ಒಂದೆಡೆ ಮುನೇಶ್ವರ ಬೆಟ್ಟ ಮತ್ತೂಂದೆಡೆ ಯೇಸು ಬೆಟ್ಟ ಎಂಬ ವಿವಾದ ಇದೆ. ಮೊದಲಿನಿಂದಲೂ ಈ ವಿವಾದ ಇದೆ. ಡಿ.ಕೆ.ಶಿವಕುಮಾರ್‌ಗೂ ಇದು ಗೊತ್ತಿದೆ. ಈಗಾಗಲೇ ಕಂದಾಯ ಸಚಿವರು ಪರಿಶೀಲನೆ ನಡೆಸುತ್ತಿದ್ದಾರೆ.ಆದರೆ, ಅಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ.

ಯಾವುದೇ ರೀತಿಯ ಘರ್ಷಣೆ ಆಗದಂತೆ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ ಎಂದು ಹೇಳಿದರು. ಕಪಾಲ ಬೆಟ್ಟದ ವಿಷಯ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಹುಟ್ಟಿಕೊಂಡಿಲ್ಲ. ಯಾವುದೇ ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಈಗ ಅದೇ ರೀತಿ ವಿವಾದ ಶುರುವಾಗಿದೆ. ಪ್ರತಿಭಟನೆ ನಡೆಸುವುದು ಅವರವರ ಸ್ವಾತಂತ್ರ್ಯ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next