Advertisement
ಸತತ 5ನೇ ವರ್ಷವೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಉನ್ನತ ಸ್ಥಾನ ಪಡೆದಿದೆ. ಒಟ್ಟು ರ್‍ಯಾಂಕಿಂಗ್‌ನಲ್ಲಿ 7 ಐಐಟಿಗಳು (ಮದ್ರಾಸ್, ಬಾಂಬೆ, ದಿಲ್ಲಿ, ಕಾನ್ಪುರ, ಖರಗ್‌ಪುರ, ರೂರ್ಕಿ ಮತ್ತು ಗುವಾಹಟಿ) ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
Related Articles
Advertisement
ಮಾಹೆ ಪಾರಮ್ಯ ಮುಂದುವರಿಕೆಎಂಐಆರ್ಎಫ್ನಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಗಸಂಸ್ಥೆಗಳ ಪಾರಮ್ಯ ಮುಂದುವರಿದಿದೆ. ಬಹುತೇಕ ಎಲ್ಲ ವಿಭಾಗಗಳಲ್ಲಿಯೂ ಮಾಹೆಗೆ ಸೇರಿದ ಸಂಸ್ಥೆಗಳು ಉತ್ತಮ ಶ್ರೇಯಾಂಕ ಪಡೆದು ದೇಶದ ಅಗ್ರಮಾನ್ಯ ಸಂಸ್ಥೆಗಳಾಗಿ ಹೊರಹೊಮ್ಮಿವೆ. ಒಟ್ಟು 100 ಅಗ್ರಮಾನ್ಯ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಕಳೆದ ವರ್ಷ 17ನೇ ಸ್ಥಾನ ಪಡೆದಿದ್ದ ಮಾಹೆ, ಮಣಿಪಾಲವು ಈ ಬಾರಿ ಒಂದು ಸ್ಥಾನ ಉತ್ತಮಪಡಿಸಿಕೊಂಡು 16ನೇ ಸ್ಥಾನಕ್ಕೇರಿದೆ. ವಿ.ವಿ.ಗಳ ಶ್ರೇಯಾಂಕದಲ್ಲಿ ಕಳೆದ ಬಾರಿ 7ರಲ್ಲಿದ್ದ ಸಂಸ್ಥೆಯು ಈ ಬಾರಿ ಆರನೇ ಸ್ಥಾನಕ್ಕೆ ಜಿಗಿದಿದೆ. ತನ್ಮೂಲಕ ದೇಶದ ಅಗ್ರ 10 ವಿ.ವಿ.ಗಳ ಸಾಲಿನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಉಳಿದಂತೆ ಎಂಜಿನಿಯರಿಂಗ್‌ವಿಭಾಗದಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 61ನೇ ಸ್ಥಾನ, ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಟಿಎ ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್, ಮಣಿಪಾಲ 42ನೇ ಸ್ಥಾನ ಪಡೆದಿವೆ. ಮೆಡಿಕಲ್ ಕಾಲೇಜು ವಿಭಾಗದಲ್ಲಿ ಕೆಎಂಸಿ, ಮಣಿಪಾಲ 9ನೇ ಸ್ಥಾನ, ಕೆಎಂಸಿ ಮಂಗಳೂರು 30ನೇ ಸ್ಥಾನ, ಫಾರ್ಮಸಿ ವಿಭಾಗದಲ್ಲಿ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸಸ್, ಮಣಿಪಾಲವು 9ನೇ ಸ್ಥಾನ ಪಡೆದುಕೊಂಡಿದೆ.ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಣಿಪಾಲ ದ್ವಿತೀಯ, ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಂಗಳೂರು ಎಂಟನೇ ರ್‍ಯಾಂಕ್ ಪಡೆದುಕೊಂಡಿವೆ. ವಾಸ್ತುಶಿಲ್ಪ ಮತ್ತು ಪ್ಲ್ರಾನಿಂಗ್ ವಿಭಾಗದಲ್ಲಿ ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಆ್ಯಂಡ್ ಪ್ಲ್ರಾನಿಂಗ್, ಮಣಿಪಾಲ 25ನೇ ಸ್ಥಾನಕ್ಕೆ ಪಾತ್ರವಾಗಿದೆ. ಅತ್ಯುನ್ನತ ಪಟ್ಟಿಯಲ್ಲಿ ವಿಟಿಯು
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಎಂಜಿನಿಯರಿಂಗ್ ವಿಭಾಗದಲ್ಲಿ 52ನೇ ಸ್ಥಾನ, ವಿಶ್ವವಿದ್ಯಾನಿಲಯ ವಿಭಾಗದಲ್ಲಿ 63ನೇ ಸ್ಥಾನ, ಸಮಗ್ರ ಶಿಕ್ಷಣ ಸಂಸ್ಥೆಗಳ ಶ್ರೇಷ್ಠ 92ನೇ ಸ್ಥಾನ ಪಡೆದುಕೊಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ತನ್ನ ಶ್ರೇಯಾಂಕವನ್ನು ಹೆಚ್ಚಿಸಿಕೊಂಡಿದೆ. ವಿಟಿಯು ರಾಷ್ಟ್ರದ ಶ್ರೇಷ್ಠ 100 ವಿವಿಗಳ (ತಾಂತ್ರಿಕ ಮತ್ತು ತಾಂತ್ರಿಕೇತರ) ವಿಭಾಗದಲ್ಲಿಯೂ 9 ಸ್ಥಾನಗಳ ಜಿಗಿತ ಕಂಡು 63ನೇ ಸ್ಥಾನ ಪಡೆದಿದೆ.