Advertisement
ಜನವರಿಯಿಂದ ಪ್ರಾಯೋಗಿಕವಾಗಿ ಮಂಗಳೂರು, ಮೈಸೂರು, ಬೆಂಗಳೂರಿನಲ್ಲಿ ಮೂರು ಸಾವಿರ ಪಡಿತರ ಕಾಡ್ ìದಾರರಿಗೆ ಆಹಾರ ಧಾನ್ಯಗಳ ಕೂಪನ್ ಬದಲಿಗೆ “ನಗದು ಕೂಪನ್’ ವಿತರಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿತ್ತಾದರೂ ಅದಕ್ಕೆ ಬೇಕಾದ ಸಾಫ್ಟ್ವೇರ್ ಇನ್ನೂ ಸಿದ್ಧವಾಗಿಲ್ಲ. ಇದರ ಜವಾಬ್ದಾರಿ ಹೊತ್ತಿದ್ದ ನ್ಯಾಷನಲ್ ಇನ್‌ಫಾರ್ಮೇಷನ್ ಸೆಂಟರ್ (ಎನ್‌ಐಸಿ) ಸಾಫ್ಟ್ವೇರ್ ಸಿದ್ಧಪಡಿಸಲು ವಿಳಂಬ ಮಾಡಿದ್ದರಿಂದ ಯೋಜನೆ ಜಾರಿಗೊಳಿಸುವ ಕುರಿತು ಇನ್ನೂ ಅಂತಿಮನಿರ್ಧಾರಕ್ಕೆ ಬರಲಾಗಿಲ್ಲ.
ಜಾರಿಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಹರ್ಷಗುಪ್ತಾ ತಿಳಿಸಿದ್ದಾರೆ. ಸಾಫ್ಟ್ವೇರ್ ಸಿದ್ಧವಾದ ಬಳಿಕ ಕುಟುಂಬದ ಹೆಣ್ಣುಮಗಳು ನಿಗದಿಪಡಿಸಿದ ಕೇಂದ್ರಕ್ಕೆ ಹೋಗಿ ತಮ್ಮ ಬೆರಳಚ್ಚು ನೀಡಿ ನಗದು ಕೂಪನ್ ಪಡೆಯಬೇಕಾಗುತ್ತದೆ. ಜತೆಗೆ ತರಾತುರಿಯಲ್ಲಿ ಯೋಜನೆ ಜಾರಿಗೆ ತಂದರೆ ಅದು ಮತ್ತೂಂದು ಸಮಸ್ಯೆಗೆ ಅವಕಾಶವಾಗುವ ಸಾಧ್ಯತೆ ಇದೆ. ಹೀಗಾಗಿ ಫೆಬ್ರವರಿಯಿಂದಲೇ ಜಾರಿಗೆ ತರುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದ್ದು, ಸಾಫ್ಟ್ವೇರ್ ಸಿದ್ಧವಾಗಿ ಬಂದ ಬಳಿಕವಷ್ಟೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.
Related Articles
Advertisement
ಪಡಿತರ ಚೀಟಿ ವಿತರಣೆ 3 ದಿನದಲ್ಲಿ ಪುನಾರಂಭ
ಈ ಮಧ್ಯೆ ಕಳೆದ ಹಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಪಡಿತರ ಕಾರ್ಡ್ ವಿತರಣೆ ಕಾರ್ಯವನ್ನು ಇನ್ನು ಮೂನಾಲ್ಕು ದಿನಗಳಲ್ಲಿ ಆರಂಭ ಮಾಡಲು ಇಲಾಖೆ ತೀರ್ಮಾನಿಸಿದೆ. ಕಳೆದ ಅಕ್ಟೋಬರ್‌ನಿಂದಲೇ ಕಾರ್ಡ್ ವಿತರಣೆ ಆರಂಭಿಸುವ ಉದ್ದೇಶ ಇತ್ತಾದರೂ ಎನ್‌ಐಸಿಯಿಂದ ಸಾಫ್ rವೇರ್ ಸಿದ್ಧಗೊಳ್ಳುವುದು ತಡವಾಗಿತ್ತು. ಹೀಗಾಗಿ ಜನವರಿಯಿಂದ ಕಾರ್ಡ್ ವಿತರಿಸಲು ತೀರ್ಮಾನಿಸಲಾಗಿತ್ತು. ಇದೀಗ ಸಾಫ್ಟ್ವೇರ್ ಸಿದ್ಧವಾಗಿದ್ದು, ಇನ್ನು 2-3 ದಿನಗಳಲ್ಲಿ ಎಪಿಎಲ್ ಕಾಡ್ ìಗೆ ಅರ್ಜಿ ಸ್ವೀಕಾರ ಮತ್ತು ಕಾರ್ಡ್ ವಿತರಣೆ ಆರಂಭಿಸಲಾಗುವುದು. ಇದಾಗಿ 10 ದಿನಗಳ ನಂತರ ಬಿಪಿಎಲ್ ಕಾರ್ಡ್ ವಿತರಣೆಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಪಿಎಲ್ ಕಾರ್ಡ್‌ಗೆ ಆಧಾರ್ ಕಡ್ಡಾಯ. ಎಪಿಎಲ್ ಕಾರ್ಡ್ ಬೇಕಾದವರು ತಮ್ಮ ಮನೆಯಲ್ಲೇ ಕುಳಿತು ಸ್ವಯಂ ಘೋಷಣೆ ಮಾಡಿ ನೋಂದಣಿ ಮಾಡಿ ಕಾರ್ಡ್ (ಪ್ರಿಂಟ್‌ಔಟ್) ಪಡೆಯಬಹುದು. ಶಾಶ್ವತ ಕಾರ್ಡ್ ಬೇಕಾದರೆ ಸ್ಪೀಡ್ ಪೋಸ್ಟ್‌ಗೆ 100 ರೂ. ಹಾಗೂ ಕಾರ್ಡ್ ಮುದ್ರಣ ಶುಲ್ಕ ಭರಿಸಬೇಕಾಗುತ್ತದೆ. ಅದೇ ರೀತಿ ಬಿಪಿಎಲ್ ಕಾರ್ಡ್‌ಗಳಿಗೆ ಪಂಚಾಯತ್ ಅಧಿಕಾರಿ ಅಥವಾ ಪಾಲಿಕೆಗಳಲ್ಲಿ
ವಾರ್ಡ್ ಮಟ್ಟದ ಅಧಿಕಾರಿಗೆ ಅರ್ಜಿ ಸಲ್ಲಿಸಿ ಆಧಾರ್ ಕಾರ್ಡ್ ಹಾಗೂ ಕುಟುಂಬ ಸದಸ್ಯರ ಬೆರಳಚ್ಚು ಸಲ್ಲಿಸಿದರೆ ಹದಿನೈದು ದಿನಗಳಲ್ಲಿ ಕಾರ್ಡ್ ಮನೆಗೆ ತಲುಪಲಿದೆ. ಅಷ್ಟರಲ್ಲಿ ಇಲಾಖೆ ಅಧಿಕಾರಿಗಳು ತಪಾಸಣೆ ಮತ್ತು ದಾಖಲೆ ಪರಿಶೀಲನೆ ಮಾಡಿ ಕಾರ್ಡ್
ಸಿದ್ಧಪಡಿಸಿಕೊಡಲಿದ್ದಾರೆ.