Advertisement
ಕುಕ್ಕುಂದೂರು ಗ್ರಾಮದ ನಿವಾಸಿ ರಫೀಕ್ ಆಹ್ಮದ್ ಅವರ ಪತ್ನಿ ಸಮೀನಾ ಬೇಗಂ ಅವರು ಕಾರ್ಕಳ ದಲ್ಲಿ ಎಟಿಎಂನಿಂದ ಹಣ ತೆಗೆಯಲು ಹೋಗಿದ್ದರು. ಅಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಇದ್ದರು. ಅಲ್ಲಿ ಮಹಿಳೆ ಎಟಿಎಂಗೆ ಹಾಕಿರುವ ಪಾಸ್ ವರ್ಡ್ ಅನ್ನು ಉಪಾಯದಿಂದ ಗುರುತಿಸಿಕೊಂಡು ಮಹಿಳೆಯ ಗಮನ ಬೇರೆಡೆ ಸೆಳೆದು ಎಟಿಎಂ ಯಂತ್ರದಲ್ಲಿಯೇ ಕಾರ್ಡ್ ಇರುವಾಗ ಬದಲಾವಣೆ ಮಾಡಿದ್ದರು. ಮಹಿಳೆ ನಕಲಿ ಎಟಿಎಂನೊಂದಿಗೆ ವಾಪಸಾಗಿದ್ದರು. ಮಹಿಳೆಯ ಎಟಿಎಂ ಇದ್ದ ಅಪರಿಚಿತರು ಕಾರ್ಡ್ ಅನ್ನು ಬಳಸಿಕೊಂಡು 70 ಸಾವಿರ ರೂ. ಹಂತಹಂತವಾಗಿ ಡ್ರಾ ಮಾಡಿ ಮೋಸ ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Karkala: ಎಟಿಎಂ ಕಾರ್ಡ್ ಅದಲು ಬದಲು; ಮೋಸ
11:44 PM Sep 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.