Advertisement

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

01:06 AM May 07, 2024 | Team Udayavani |

ಕಾಸರಗೋಡು: ಕೇರಳ ರಾಜ್ಯ ರಸ್ತೆಸಾರಿಗೆ ನಿಗಮದ ಕಾಸರಗೋಡು ಡಿಪೋದ ಐದು ಬಸ್‌ಗಳಲ್ಲಿ ಕೆಮರಾ ಅಳವಡಿಲಾಗಿದೆ.

Advertisement

ಕಾಂಞಂಗಾಡ್‌ ಡಿಪೋದ ಯಾವುದೇ ಬಸ್‌ಗಳಲ್ಲೂ ಈ ವ್ಯವಸ್ಥೆಯಿಲ್ಲ.ಸುಳ್ಯಕ್ಕೆ ಸಂಚರಿಸುವ ಮೂರು ಅಂತಾರಾಜ್ಯ ಬಸ್‌ಗಳಲ್ಲೂ, ಕೋಟ್ಟಯಂಗೆ ಸಂಚರಿಸುವ ಎರಡು ಬಸ್‌ಗಳಿಗೆ ಕೆಮರಾ ಇದೆ. ಒಂದು ಬಸ್‌ನಲ್ಲಿ ಕೆಮರಾ ಅಳವಡಿಸಲು 15 ಸಾವಿರ ರೂ. ವೆಚ್ಚವಾಗುತ್ತಿದೆ. ಬಸ್‌ನ ಮುಂಭಾಗದ ದೃಶ್ಯಗಳನ್ನು ಸೆರೆಹಿಡಿಯಲು, ಪ್ರಯಾಣಿಕರನ್ನು ಸೆರೆ ಹಿಡಿಯುವ ರೀತಿಯಲ್ಲಿ 2 ಕೆಮರಾಗಳು ಬಸ್‌ನ ಒಳಗೆ ಇವೆ‌.

ಸ್ಟೇಜ್‌ ಕ್ಯಾರೇಜ್‌ ವಾಹನಗಳಲ್ಲಿ ಕಡ್ಡಾಯವಾಗಿ ಕೆಮರಾ ಇರಬೇಕೆಂಬ ಆದೇಶದ ವಿರುದ್ಧ ಖಾಸಗಿ ಬಸ್‌ ಮಾಲಕರು ನ್ಯಾಯಾಲಯಕ್ಕೆ ಮನವಿ ನೀಡಿದ ಹಿನ್ನೆಲೆಯಲ್ಲಿ ಅವುಗಳಲ್ಲಿ ಕೆಮರಾ ಅಳವಡಿಕೆಯನ್ನು ತಾತ್ಕಾಲಿಕವಾಗಿ ನಿಲುಗಡೆಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next