Advertisement
ಈ ಮಾತನ್ನು ಹೇಳುವುದಕ್ಕೆ ಒಂದು ಕಾರಣವಿದೆ. ವ್ಯಕ್ತಿಯೊಬ್ಬರಿಗೆ ಪಿಜ್ಜಾದಲ್ಲಿ ಚಾಕುವಿನ ತುಂಡು ಸಿಕ್ಕಿದೆ.
Related Articles
Advertisement
ಇದಾದ ಬಳಿಕ ಅರುಣ್ ಈ ವಿಚಾರವನ್ನು ಔಟ್ಲೆಟ್ ಮ್ಯಾನೇಜರ್ ತಿಳಿಸಿದ್ದಾರೆ. ಆರಂಭದಲ್ಲಿ ಮ್ಯಾನೇಜರ್ ಹೀಗೆ ಆಗಿರಲು ಸಾಧ್ಯವಿಲ್ಲವೆಂದಿದ್ದಾರೆ. ಆ ಬಳಿಕ ಪಿಜ್ಜಾದಲ್ಲಿರುವ ಚಾಕುವಿನ ಫೋಟೋವನ್ನು ಕಳುಹಿಸಿದ್ದಾರೆ. ಕೂಡಲೇ ಮ್ಯಾನೇಜರ್ ಅರುಣ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಮ್ಯಾನೇಜರ್ ತಮ್ಮ ಕಡೆಯಿಂದ ತಪ್ಪಾಗಿದೆ ಎಂದು ಒಪ್ಪಿಕೊಂಡು, ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ. ಪಿಜ್ಜಾಕ್ಕೆ ಯಾವುದೇ ಹಣವನ್ನು ನೀಡುವುದು ಬೇಡವೆಂದು ಹೇಳಿದ್ದಾರೆ.
“ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಗಂಭೀರ ಸುರಕ್ಷತೆಯ ಅಪಾಯವಾಗಿದೆ. ಆ ಔಟ್ಲೆಟ್ನಿಂದ ಪಿಜ್ಜಾಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ’” ಎಂದು ಅರುಣ್ ಹೇಳಿದ್ದಾರೆ.
ಕಾಪ್ಸೆ ಅವರು ಈ ಸಂಬಂಧ ಆಹಾರ ಮತ್ತು ಔಷಧ ಆಡಳಿತಕ್ಕೆ (ಎಫ್ಡಿಎ) ದೂರು ನೀಡಲು ಮುಂದಾಗಿದ್ದಾರೆ.