Advertisement

Mantralaya: ಮಂತ್ರಾಲಯದಲ್ಲಿ 36 ಅಡಿ ಅಭಯರಾಮ ಮೂರ್ತಿ ಸ್ಥಾಪನೆ

10:18 PM Jan 20, 2024 | Team Udayavani |

ರಾಯಚೂರು: ಶ್ರೀಕ್ಷೇತ್ರ ಮಂತ್ರಾಲಯದ ಹೊರವಲಯದಲ್ಲಿ 36 ಅಡಿ ಎತ್ತರದ ಶ್ರೀ ಅಭಯ ರಾಮನ ಬೃಹತ್‌ ಶಿಲಾಮೂರ್ತಿ ತಲೆ ಎತ್ತಿದೆ.

Advertisement

32 ಅಡಿ ಎತ್ತರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಲ್ಲೇ ಅಭಯ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಧನುರ್ಧಾರಿ ಶ್ರೀರಾಮನ ಮೂರ್ತಿ ಎಲ್ಲರನ್ನು ಆಕರ್ಷಿಸುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು ಶನಿವಾರ ಪೂಜೆ ನೆರವೇರಿಸಿದ ಬಳಿಕ ಕ್ರೇನ್‌ ಸಹಾಯದಿಂದ ಮೂರ್ತಿಯನ್ನು ಪದಸ್ಥಲದ ಪೀಠದಲ್ಲಿ ನಿಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಶ್ರೀ ಸುಬುಧೇಂದ್ರ ತೀರ್ಥರು, ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಸ್ಥಾಪನೆಯಾಗುತ್ತಿರುವ ಶುಭ ಮುಹೂರ್ತದಲ್ಲೇ ಮಂತ್ರಾಲಯದಲ್ಲೂ ಶ್ರೀರಾಮನ ಏಕಶಿಲಾ ಮೂರ್ತಿ ಸ್ಥಾಪಿಸಲಾಗಿದೆ. ಜ.22ರಂದು ಇಲ್ಲಿಯೂ ಸಾಂಕೇತಿಕವಾಗಿ ಪೂಜೆ ನೆರವೇರಿಸಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಶಿಲ್ಪಿ ಗುಡಿಗಾರ ಅವರ ಕೈಯಿಂದ ಮೂರ್ತಿ ಸುಂದರವಾಗಿ ಮೂಡಿ ಬಂದಿದೆ. ಈ ಸ್ಥಳದಲ್ಲಿ ಕಟ್ಟಡ, ಉದ್ಯಾನವನ ಸಹಿತ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆಯಬೇಕಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next