Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಜೊತೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್. ಅಶೋಕ ಇರಲಿದ್ದಾರೆ. ಬೆಂಗಳೂರಿನಿಂದ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಹೊರಟ ಸಿಎಂ ಹಾಗೂ ಸಚಿವರು, ತೋರಣಗಲ್‌ನಲ್ಲಿ ಕೆಲ ಕಾಲ ತಂಗಿದ್ದು, ನಂತರ ಬೆಳಗ್ಗೆ 11.30ಕ್ಕೆ ದೇವತ್ಕಲ್ ಗ್ರಾಮಕ್ಕೆ ಆಗಮಿಸಿ ಶಂಕುಸ್ಥಾಪನೆ ನೆರವೇರಿಸಿ, ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ವಿವರಿಸಿದರು.
Related Articles
Advertisement
ಕಂದಾಯ ಇಲಾಖೆ 13, ಅಂಬೇಡ್ಕರ್ ನಿಗಮ 6, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ 2, ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ 6, ಕೃಷಿ ಇಲಾಖೆ 5, ಪಶು ಸಂಗೋಪನಾ ಇಲಾಖೆ 2, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ 6 ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುವುದು ಎಂದು ತಿಳಿಸಿದರು.
ನಂತರ ಮಧ್ಯಾಹ್ನ 2.20ಕ್ಕೆ ಹೆಲಿಕಾಪ್ಟರ್ ಮೂಲಕ ದೇವತ್ಕಲ್ ಗ್ರಾಮದಿಂದ ನಿರ್ಗಮಿಸಿ ಮಧ್ಯಾಹ್ನ 3 ಗಂಟೆಗೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಆಕಸ್ಮಿಕ ಸಿಲಿಂಡರ್ ಸ್ಫೋಟದಿಂದ ಮೃತಪಟ್ಟವರ ವಾರಸುದಾರ ಪ್ರತಿ ಸದಸ್ಯರಿಗೆ 5 ಲಕ್ಷ ರೂ. ನಂತೆ ಒಟ್ಟು 15 ಸದಸ್ಯರಿಗೆ (ಒಟ್ಟು 75 ಲಕ್ಷ ರೂ.) ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಚೆಕ್ ವಿತರಿಸಲಿದ್ದಾರೆ ಎಂದರು.
ಅಟಲಜೀ ನಾಡಕಚೇರಿ ಕಟ್ಟಡಗಳ ಶಿಲಾನ್ಯಾಸ
ಕೊಡೇಕಲ್, ಸೈದಾಪುರ, ಬಳಿಚಕ್ರ, ದೋರನಹಳ್ಳಿ ಹಾಗೂ ಕಕ್ಕೇರಾ ಅಟಲಜೀ ನಾಡಕಚೇರಿ ಕಟ್ಟಡಗಳಿದ್ದು, ಒಟ್ಟು ಅಂದಾಜು ಮೊತ್ತ 3.20 ಕೋಟಿ ವೆಚ್ಚದಲ್ಲಿ ಹೈಟೆಕ್ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಇದ್ದರು.